ರಾಮೋಜಿ ರಾವ್ ನಿಧನಕ್ಕೆ ಪ್ರಧಾನಿ ಮೋದಿ, ಅಲ್ಲು ಅರ್ಜುನ್, ರಾಮ್ ಚರಣ್, ರಾಜಮೌಳಿ ಸೇರಿ ಅನೇಕರ ಸಂತಾಪ
ತೆಲುಗಿನಲ್ಲಿ ಟ್ವೀಟ್ ಮಾಡಿರುವ ಮೋದಿ, ‘ರಾಮೋಜಿ ರಾವ್ ನಿಧನವು ತುಂಬಾ ದುಃಖಕ ತಂದಿದೆ. ಅವರು ಭಾರತೀಯ ಮಾಧ್ಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಅವರ ದಣಿವರಿಯದ ಪ್ರಯತ್ನಗಳ ಮೂಲಕ, ಅವರು ಮಾಧ್ಯಮ ಮತ್ತು ಮನರಂಜನೆಯ ಜಗತ್ತಿನಲ್ಲಿ ಹೊಸತನ ತಂದರು’ ಎಂದಿದ್ದಾರೆ.
ರಾಮೋಜಿ ಫಿಲ್ಮ್ ಸಿಟಿ ನಿರ್ಮಿಸಿದ್ದ ರಾಮೋಜಿ ರಾವ್ (Ramoji Rao) ಅವರು ಇಂದು (ಜೂನ್ 8) ನಿಧನ ಹೊಂದಿದ್ದಾರೆ. ಹಲವು ವರ್ಷಗಳಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ನಿಧನ ವಾರ್ತೆ ಕೇಳಿ ಪ್ರಧಾನಿ ನರೇಂದ್ರ ಮೋದಿ, ನಟರಾದ ಅಲ್ಲು ಅರ್ಜುನ್, ರಾಮ್ ಚರಣ್, ನಿರ್ದೇಶಕ ರಾಜಮೌಳಿ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.
ತೆಲುಗಿನಲ್ಲಿ ಟ್ವೀಟ್ ಮಾಡಿರುವ ಮೋದಿ, ‘ರಾಮೋಜಿ ರಾವ್ ನಿಧನವು ತುಂಬಾ ದುಃಖಕ ತಂದಿದೆ. ಅವರು ಭಾರತೀಯ ಮಾಧ್ಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಅವರ ದಣಿವರಿಯದ ಪ್ರಯತ್ನಗಳ ಮೂಲಕ, ಅವರು ಮಾಧ್ಯಮ ಮತ್ತು ಮನರಂಜನೆಯ ಜಗತ್ತಿನಲ್ಲಿ ನಾವೀನ್ಯತೆಯಲ್ಲಿ ಶ್ರೇಷ್ಠತೆಗಾಗಿ ಹೊಸ ಮಾನದಂಡಗಳನ್ನು ತಂದರು’ ಎಂದಿದ್ದಾರೆ.
శ్రీ రామోజీ రావుగారి మరణం ఎంతో బాధాకరం.ఆయన భారతీయ మీడియాలో విప్లవాత్మకమైన మార్పులు తీసుకొచ్చిన ఒక దార్శనికుడు.ఆయన సేవలు సినీ,పత్రికారంగాలలో చెరగని ముద్ర వేశాయి. తన అవిరళ కృషి ద్వారా, ఆయన మీడియా, వినోద ప్రపంచాలలో శ్రేష్టమైన ఆవిష్కరణలకు నూతన ప్రమాణాలను నెలకొల్పారు.
రామోజీ రావు… pic.twitter.com/1cjAFSF6xB
— Narendra Modi (@narendramodi) June 8, 2024
Deeply saddened by the passing of #RamojiRao Garu, a pioneer and an inspiring visionary whom I deeply respect. I feel his aura every time I shoot at #RFC. His unparalleled contributions to the media, cinema, and many other industries will never be forgotten. Heartfelt condolences…
— Allu Arjun (@alluarjun) June 8, 2024
రాజమండ్రిలో శంకర్ – రామ్ చరణ్ రామోజీ రావుకు నివాళులర్పిస్తూ మౌనం పాటించారు#Ramcharan #Gamechanger #RamojiRao pic.twitter.com/nQhxBlWayw
— Vamsi Kaka (@vamsikaka) June 8, 2024
‘ರಾಮೋಜಿ ರಾವ್ ಅವರು ಭಾರತದ ಅಭಿವೃದ್ಧಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಅವರೊಂದಿಗೆ ಮಾತುಕತೆ ನಡೆಸಲು ಮತ್ತು ಅವರ ಅಪಾರ ಜ್ಞಾನದಿಂದ ಪ್ರಯೋಜನ ಪಡೆಯುವ ಅನೇಕ ಅವಕಾಶಗಳನ್ನು ಹೊಂದಲು ನಾನು ಅದೃಷ್ಟಶಾಲಿಯಾಗಿದ್ದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪ. ಓಂ ಶಾಂತಿ’ ಎಂದು ಮೋದಿ ಬರೆದಿದ್ದಾರೆ.
ಆರ್ಎಸ್ಎಸ್ ಕೂಡ ರಾಜಮೌಳಿ ನಿಧನಕ್ಕೆ ಸಂತಾಪ ಸೂಚಿಸಿದೆ. ‘ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಅವರ ನಿಧನ ಹೊಂದಿದ್ದಾರೆ. ಅವರ ನಿಧನ ಪತ್ರಿಕೋದ್ಯಮ ಮತ್ತು ಚಲನಚಿತ್ರ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ’ ಎಂದು ಆರ್ಎಸ್ಎಸ್ ಟ್ವಿಟರ್ ಖಾತೆ ಮೂಲಕ ಪೋಸ್ಟ್ ಮಾಡಲಾಗಿದೆ.
Eenadu and Ramoji Film City founder Shri Ramoji Rao’s demise is a great loss especially for the field of journalism and film. His contribution as a pioneer in adding unique features and practices in his chosen field will be long remembered. We extend our heartfelt condolences to… pic.twitter.com/9GEloD8WM0
— RSS (@RSSorg) June 8, 2024
ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿ ಸ್ಥಾಪಕ ರಾಮೋಜಿ ರಾವ್ ನಿಧನ; ಸಂತಾಪ ಕೋರಿದ ಚಿತ್ರರಂಗ
ಅಲ್ಲು ಅರ್ಜುನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ನಾನು ಅತಿ ಹೆಚ್ಚು ಗೌರವಿಸುವ ಪ್ರವರ್ತಕ ಮತ್ತು ಸ್ಫೂರ್ತಿದಾಯಕ ದಾರ್ಶನಿಕ ರಾಮೋಜಿ ರಾವ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ನಾನು ಸಿನಿಮಾ ಮತ್ತು ಇತರ ಹಲವು ಉದ್ಯಮಗಳಿಗೆ ಅವರ ಅಪ್ರತಿಮ ಕೊಡುಗೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಮಹಾನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ ಅಲ್ಲು ಅರ್ಜುನ್. ರಾಮ್ ಚರಣ್ ಅವರು ಶೂಟಿಂಗ್ ಸೆಟ್ನಲ್ಲೇ ಸಂತಾಪ ಕೋರಿದ್ದಾರೆ. ನಿರ್ದೇಶಕ ರಾಜಮೌಳಿ ಅವರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:23 am, Sat, 8 June 24