Ramoji Rao: ರಾಮೋಜಿ ಫಿಲ್ಮ್​ ಸಿಟಿ ಸ್ಥಾಪಕ ರಾಮೋಜಿ ರಾವ್ ನಿಧನ; ಸಂತಾಪ ಕೋರಿದ ಚಿತ್ರರಂಗ

ರಾಮೋಜಿ ರಾವ್ ನಿಧನ: ರಾಮೋಜಿ ಫಿಲ್ಮ್​ ಸಿಟಿಯಲ್ಲಿ ‘ಬಾಹುಬಲಿ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳ ಶೂಟಿಂಗ್ ಆಗಿದೆ. 1996ರಲ್ಲಿ ಇದನ್ನು ರಾಮೋಜಿ ರಾವ್ ಸ್ಥಾಪಿಸಿದರು. ಹೈದರಾಬಾದ್​ನಲ್ಲಿರುವ ಈ ಪ್ರದೇಶ 1,666 ಎಕರೆ ಪ್ರದೇಶದಲ್ಲಿ ಇದೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸ್ಟುಡಿಯೋ ಎನ್ನುವ ಖ್ಯಾತಿ ಇದೆ.

Ramoji Rao: ರಾಮೋಜಿ ಫಿಲ್ಮ್​ ಸಿಟಿ ಸ್ಥಾಪಕ ರಾಮೋಜಿ ರಾವ್ ನಿಧನ; ಸಂತಾಪ ಕೋರಿದ ಚಿತ್ರರಂಗ
Follow us
ರಾಜೇಶ್ ದುಗ್ಗುಮನೆ
|

Updated on:Jun 08, 2024 | 8:44 AM

ರಾಮೋಜಿ ಫಿಲ್ಮ್​ ಸಿಟಿ (Ramoji Film City) ನಿರ್ಮಿಸಿದ್ದ ರಾಮೋಜಿ ರಾವ್ ಅವರು ಇಂದು (ಜೂನ್ 8) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಅವರ ನಿಧನ ವಾರ್ತೆ ಅನೇಕರಿಗೆ ದುಃಖ ತಂದಿದೆ. ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ರಾಮೋಜಿ ಫಿಲ್ಮ್​ ಸಿಟಿಯಲ್ಲಿ ‘ಬಾಹುಬಲಿ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳ ಶೂಟಿಂಗ್ ಆಗಿದೆ. 1996ರಲ್ಲಿ ಇದನ್ನು ರಾಮೋಜಿ ರಾವ್ ಸ್ಥಾಪಿಸಿದರು. ಹೈದರಾಬಾದ್​ನಲ್ಲಿರುವ ಈ ಪ್ರದೇಶ 1,666 ಎಕರೆ ಪ್ರದೇಶದಲ್ಲಿ ಇದೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸ್ಟುಡಿಯೋ ಎನ್ನುವ ಖ್ಯಾತಿ ಇದೆ. ಇದು ವಿಶ್ವ ದಾಖಲೆ ಪಟ್ಟಿಯಲ್ಲೂ ಇದೆ. ರಾಮೋಜಿ ರಾವ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಮೋಜಿ ರಾವ್ ಅವರು ಜನಿಸಿದ್ದು 1936ರಲ್ಲಿ. 1984ರಲ್ಲಿ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದರು. 2015ರವರೆಗೂ ಅವರು ಸಿನಿಮಾಗಳನ್ನು ನಿರ್ಮಿಸುತ್ತಿದ್ದರು. ಆ ಬಳಿಕ ಅವರು ನಿರ್ಮಾಣದಿಂದ ದೂರವೇ ಇದ್ದರು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕನ್ನಡದ ಹಲವು ಸಿನಿಮಾಗೆ ಸೆಟ್​ ಹಾಕಲಾಗಿತ್ತು.

ತೆಲುಗಿನ ‘ಬಾಹುಬಲಿ’, ಬೆಂಗಾಲ್ ಟೈಗರ್, ಗಬ್ಬರ್ ಸಿಂಗ್, ಹನುಮಾನ್, ಕಲ್ಕಿ 2898 ಎಡಿ, ಪುಷ್ಪ, ಆರ್​ಆರ್​ಆರ್, ಹಿಂದಿಯ ಚೆನ್ನೈ ಎಕ್ಸ್​ಪ್ರೆಸ್, ಕನ್ನಡದ ಜಾಗ್ವಾರ್, ಕೆಜಿಎಫ್ 2, ರಾಜಕುಮಾರ, ತಮಿಳಿನ ಲಿಯೋ ಸೇರಿ ಅನೇಕ ಸಿನಿಮಾಗಳು ಇಲ್ಲಿ ಶೂಟ್ ಆಗಿವೆ.

ಇದನ್ನೂ ಓದಿ: SP ಬಾಲುನನ್ನು ಎತ್ತರೆತ್ತರಕ್ಕೆ ಬೆಳೆಸಿದ ರಾಮೋಜಿ ರಾವ್, ಬಾಲುಗೆ ನೀಡಿದ್ದ ಹಿತವಚನ ಏನು?

ರಾಮೋಜಿ ರಾವ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ತೆಲಂಗಾಣ ಬಿಜಿಪಿ ಮುಖ್ಯಸ್ಥ ಹಾಗೂ ಪಾರ್ಟಿ ಸಂಸದ ಜಿ ಕೃಷ್ಣನ್ ರೆಡ್ಡಿ ಅವರು ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಸಂತಾಪ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:30 am, Sat, 8 June 24

ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ
ಟಿವಿ9 ಜೊತೆ ಕನ್ನಡದಲ್ಲೇ ಮಾತು ಆರಂಭಿಸಿದ ಚಾಹಲ್; ವಿಡಿಯೋ ನೋಡಿ
ಟಿವಿ9 ಜೊತೆ ಕನ್ನಡದಲ್ಲೇ ಮಾತು ಆರಂಭಿಸಿದ ಚಾಹಲ್; ವಿಡಿಯೋ ನೋಡಿ