ಜಗನ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದ ಹೀರೋ; ಹೇಗಿದೆ ನೋಡಿ ಈಗ ಅವರ ಪರಿಸ್ಥಿತಿ
‘ರತ್ನಂ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಜಗನ್ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದರು ವಿಶಾಲ್. ‘ಜಗನ್ ಅವರು ಸಾಕಷ್ಟು ವಿಷನ್ ಹೊಂದಿದ್ದಾರೆ. ಅವರಿಗೆ ಜನರ ನಾಡಿಮಿಡಿತ ಗೊತ್ತಿದೆ. ಅವರು ಸಾರ್ವಜನಿಕರ ಸೇವೆಯನ್ನು ಮಾಡಬಹುದು. ಅವರು ಸಿಎಂ ಆಗಿಯೇ ಆಗುತ್ತಾರೆ’ ಎಂದಿದ್ದರು ವಿಶಾಲ್.
ಆಂಧ್ರ ಪ್ರದೇಶದಲ್ಲಿ ವೈಎಸ್ ಜಗನ್ ರೆಡ್ಡಿ (YS Jagan Reddy) ಅವರು ಸೋತಿದ್ದಾರೆ. ಅವರ ಸೋಲು ಅನೇಕರಿಗೆ ಶಾಕಿಂಗ್ ಎನಿಸಿದೆ. ಪವನ್ ಕಲ್ಯಾಣ್ ಹಾಗೂ ಚಂದ್ರಬಾಬು ನಾಯ್ಡು ಮೈತ್ರಿ ಗೆಲುವು ಕಂಡಿದೆ. ಈಗ ಈ ಬಗ್ಗೆ ಚರ್ಚೆ ಹಾಗೂ ವಿರೋಧ ನಡೆಯುತ್ತಿದೆ. ಜಗನ್ ಮೋಹನ್ ರೆಡ್ಡಿ ಅವರು ಗೆಲುವು ಕಾಣುತ್ತಾರೆ ಎಂದು ವಿಶಾಲ್ ಭವಿಷ್ಯ ನುಡಿದಿದ್ದರು. ಆದರೆ, ಅದು ನಿಜವಾಗಿಲ್ಲ. ಈ ಕಾರಣಕ್ಕೆ ಅವರು ಸಖತ್ ಟ್ರೋಲ್ ಆಗುತ್ತಿದ್ದಾರೆ. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ.
‘ರತ್ನಂ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಜಗನ್ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದರು ವಿಶಾಲ್. ‘ಜಗನ್ ಅವರು ಸಾಕಷ್ಟು ವಿಷನ್ ಹೊಂದಿದ್ದಾರೆ. ಅವರಿಗೆ ಜನರ ನಾಡಿಮಿಡಿತ ಗೊತ್ತಿದೆ. ಅವರು ಸಾರ್ವಜನಿಕರ ಸೇವೆಯನ್ನು ಮಾಡಬಹುದು. ಅವರು ಸಿಎಂ ಆಗಿಯೇ ಆಗುತ್ತಾರೆ. ಜೂನ್ 5ಕ್ಕೆ ನಾನು ಈ ಬಗ್ಗೆ ಮಾತನಾಡುತ್ತೇನೆ’ ಎಂದಿದ್ದರು ಜಗನ್. ಆದರೆ, ಆ ರೀತಿ ಆಗಲೇ ಇಲ್ಲ.
Era Vishal Jun 4th ayindi 7th kooda ayindi epudochi kalusthunav #Vishal https://t.co/KfltJNqbSz
— MMK 🔥 NBK 🦁 FAN ⚔️ (@manuforuo) June 7, 2024
ಇದನ್ನೂ ಓದಿ: ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ವೈಎಸ್ ಜಗನ್ ಬಯೋಪಿಕ್; ಗಮನ ಸೆಳೆದ ಪೋಸ್ಟರ್
ವೈಎಸ್ ಜಗನ್ ಅವರು ಹೀನಾಯ ಸೋಲು ಕಂಡಿದೆ. ಅವರು ಗೆದ್ದಿದ್ದು ಕೇವಲ 11 ಸ್ಥಾನಗಳನ್ನು ಮಾತ್ರ. ಜಗನ್ ಪಾರ್ಟಿಗೆ ಈ ಸೋಲು ಸಾಕಷ್ಟು ಬೇಸರ ತಂದಿದೆ. ಈಗ ವಿಶಾಲ್ ಅವರನ್ನು ಪವನ್ ಕಲ್ಯಾಣ್ ಫ್ಯಾನ್ಸ್ ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಸ್ವೀಕರಿಸೋಕೆ ವಿಶಾಲ್ ಫ್ಯಾನ್ಸ್ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಶಾಲ್ ಅವರು ಬಂದು ಸ್ಟೇಟ್ಮೆಂಟ್ ನೀಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ವಿಶಾಲ್ ನಟನೆಯ ‘ರತ್ನಂ’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಇದು ಅವರಿಗೆ ಬೇಸರ ಮೂಡಿಸಿದೆ. ಅವರು ಶೀಘ್ರವೇ ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.