SP ಬಾಲುನನ್ನು ಎತ್ತರೆತ್ತರಕ್ಕೆ ಬೆಳೆಸಿದ ರಾಮೋಜಿ ರಾವ್, ಬಾಲುಗೆ ನೀಡಿದ್ದ ಹಿತವಚನ ಏನು?
‘ಸ್ನೇಹ ಮಾಡಿದ ಮೇಲೆ ತಪ್ಪುಗಳು ಕಾಣಬಹುದು. ಸಾಧ್ಯವಾದ್ರೆ ಸರಿಪಡಿಸಿ, ಇಲ್ಲವಾದ್ರೆ ಕೊನೆಯವರೆಗೆ ತಪ್ಪನ್ನ ನುಂಗಿಕೊಂಡಿರಿ!’ .. ಹೀಗೆಂದು SPBಗೆ ರಾಮೋಜಿ ರಾವ್ ಹಿತವಚನ ನೀಡಿದ್ದರೆಂದು ಸ್ವತಃ SPB ಹೇಳಿಕೊಂಡಿದ್ದರು. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಈಟಿವಿ ಜೊತೆ ಅವಿನಾಭಾವ ಸಂಬಂಧವಿದೆ. ಈಟಿವಿ ಕಾರ್ಯಕ್ರಮಯೊಂದರಲ್ಲಿ ಅವರು ಈಟಿವಿ ಹಾಗೂ ತಮ್ಮನ್ನು ಎತ್ತರೆತ್ತರಕ್ಕೆ ಬೆಳೆಸಿದ ರಾಮೋಜಿ ರಾವ್ರ ನೆನಪುಗಳನ್ನು ಮೆಲುಕು ಹಾಕಿದ್ದರು. ಈ ವೇಳೆ ಅವರು ಹೇಳಿದ್ದು ಹೀಗಿದೆ.. ನಮಸ್ಕಾರ, ಇದಕ್ಕೂ ಮೊದಲು ಮಾತನಾಡಿದವರಿಗಿಂತಾ, ಇಲ್ಲಿರುವ ಬಹಳ ಮಂದಿಗಿಂತಾ, ಈಟಿವಿ […]
‘ಸ್ನೇಹ ಮಾಡಿದ ಮೇಲೆ ತಪ್ಪುಗಳು ಕಾಣಬಹುದು. ಸಾಧ್ಯವಾದ್ರೆ ಸರಿಪಡಿಸಿ, ಇಲ್ಲವಾದ್ರೆ ಕೊನೆಯವರೆಗೆ ತಪ್ಪನ್ನ ನುಂಗಿಕೊಂಡಿರಿ!’ .. ಹೀಗೆಂದು SPBಗೆ ರಾಮೋಜಿ ರಾವ್ ಹಿತವಚನ ನೀಡಿದ್ದರೆಂದು ಸ್ವತಃ SPB ಹೇಳಿಕೊಂಡಿದ್ದರು.
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಈಟಿವಿ ಜೊತೆ ಅವಿನಾಭಾವ ಸಂಬಂಧವಿದೆ. ಈಟಿವಿ ಕಾರ್ಯಕ್ರಮಯೊಂದರಲ್ಲಿ ಅವರು ಈಟಿವಿ ಹಾಗೂ ತಮ್ಮನ್ನು ಎತ್ತರೆತ್ತರಕ್ಕೆ ಬೆಳೆಸಿದ ರಾಮೋಜಿ ರಾವ್ರ ನೆನಪುಗಳನ್ನು ಮೆಲುಕು ಹಾಕಿದ್ದರು. ಈ ವೇಳೆ ಅವರು ಹೇಳಿದ್ದು ಹೀಗಿದೆ..
ನಮಸ್ಕಾರ, ಇದಕ್ಕೂ ಮೊದಲು ಮಾತನಾಡಿದವರಿಗಿಂತಾ, ಇಲ್ಲಿರುವ ಬಹಳ ಮಂದಿಗಿಂತಾ, ಈಟಿವಿ ಜೊತೆಗೆ ನನಗೆ ಹೆಚ್ಚು ಆತ್ಮೀಯ ಸಂಬಂಧವಿದೆ. ಆರಂಭವಾದ ದಿನದಿಂದ, ಲೋಗೋಗೆ ಹಾಡು ಹಾಡಿದ ದಿನದಿಂದ ಪ್ರತಿಯೊಂದು ಶೀರ್ಷಿಕೆ ಗೀತೆಯನ್ನು ನಾನೇ ಹಾಡಿದ್ದೇನೆ. ಅದೊಂದು ಭಾಗವಾದ್ರೆ, ಅವರು ನಿರ್ಮಿಸಿರೋ ಹಲವು ಚಿತ್ರಗಳಲ್ಲಿ ನನ್ನ ಕೈಯಲ್ಲಿ ಸಂಗೀತ ನಿರ್ದೇಶನ ಮಾಡಿಸಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ನನಗೆ ಹೆಸರು ತಂದುಕೊಟ್ಟ ಮಯೂರಿ ಸಿನಿಮಾಗೆ, ಹಲವು ಅತ್ಯುತ್ತಮ ಸಂಗೀತ ನಿರ್ದೇಶಕರಿದ್ರು, ಆ ಚಿತ್ರದ ಹೊಣೆಗಾರಿಕೆಯನ್ನು ನನಗೆ ವಹಿಸಿದ್ದರು. ಇದೆಲ್ಲ ಮತ್ತೊಂದು ಭಾಗವಾದ್ರೆ, ನನ್ನ ಕೈಯಲ್ಲಿ ಆಗಲ್ಲ ಅಂತಾ ನಾನು ತಪ್ಪಿಸಿಕೊಂಡು ಹೋಗ್ತಿದ್ರೆ, ನನ್ನ ಹಿಂದೆ ಬಿದ್ದು ನನ್ನ ಕೈಯಲ್ಲಿ ‘ಪಾಡುತಾತೀಯಗಾ’ ಕಾರ್ಯಕ್ರಮ ಮಾಡಿಸಿದ್ದಾರೆ.
ಕಳೆದ 17 ವರ್ಷಗಳಿಂದ ಆ ಕಾರ್ಯಕ್ರಮ ನಡೆಯುತ್ತಿದೆ. ಭಾರತದಲ್ಲಿ ಇದು 2ನೇ ರಿಯಾಲಿಟಿ ಶೋ. ಬಾಂಬೆಯಲ್ಲಿನ ಸರಿಗಮಪ ಮೊದಲ ರಿಯಾಲಿಟಿ ಶೋ. ಅದಾದ ಬಳಿಕ ದಕ್ಷಿಣ ಭಾರತದಲ್ಲಿ ‘ಪಾಡುತಾ ತೀಯಗಾ’ ಶುರುವಾಯ್ತು. ಇನ್ನೂ ನಡೆಯುತ್ತಿದೆ. ಒಂದು ದಿನ ನನಗೊಂದು ಸಲಹೆ ನೀಡಿದ್ರು.
ನೀವು ಯಾರ ಜೊತೆಗಾದ್ರೂ ಸ್ನೇಹ ಮಾಡುವ ಮುನ್ನ ಹಲವು ಬಾರಿ ಯೋಚಿಸಿ. ಒಬ್ಬರ ಜೊತೆಗೆ ಸ್ನೇಹ ಮಾಡಿದ ಬಳಿಕ ಅವರಲ್ಲಿ ನಿಮಗೆ ಹಲವು ತಪ್ಪುಗಳು ಕಾಣಬಹುದು. ಸಾಧ್ಯವಾದ್ರೆ ತಪ್ಪು ಸರಿಪಡಿಸಲು ಯತ್ನಿಸಿ. ಇಲ್ಲವಾದ್ರೆ ಕೊನೆಯವರೆಗೆ ಆ ತಪ್ಪನ್ನು ಸಹಿಸಿಕೊಂಡು ಹೋಗಿ ಎಂದರು. ಇದಕ್ಕಿಂತಾ ಉತ್ತಮವಾದುದು ಏನಿದೆ!? ಅಂದು ನನಗೆ ಅತ್ಯುತ್ತಮವಾದ ಸೂಕ್ತಿಯನ್ನ ಹೇಳಿದರು.
ರಾಮೋಜಿ ರಾವ್ ಅವರು ನನಗೆ ಗೊತ್ತು ಅಂತಾ ಹೇಳಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಕಳೆದ 30 ವರ್ಷಗಳಿಂದ ನಾನು ಹೈದರಾಬಾದ್ಗೆ ಬಂದಾಗಲೆಲ್ಲಾ, ಆಗ ಈ ಸ್ಟುಡಿಯೋ ಇರಲಿಲ್ಲ. ನಾನು ಅವರ ಆಸ್ಥಾನ ಕಲಾವಿದನಾಗಿರೋದ್ರಿಂದ, ಅವರ ಕಾರನ್ನು ಬಳಸುವ ಅವಕಾಶವನ್ನ ನನಗೆ ನೀಡಿದ್ದಾರೆ. ನಾನು ಮೊದಲೇ ಕರೆ ಮಾಡಿದ್ರೆ, ಸಂಬಂಧಪಟ್ಟ ವಿಭಾಗದವರು ವಿಮಾನ ನಿಲ್ದಾಣಕ್ಕೆ ಕಾರು ಕಳುಹಿಸುತ್ತಿದ್ರು. ನನ್ನ ಕೆಲಸ ಮುಗಿದ ಮೇಲೆ ವಿಮಾನ ನಿಲ್ದಾಣದಲ್ಲಿ ಇಳಿಸಿ ಹೊರಟು ಹೋಗ್ತಿದ್ರು. ಒಂದು ಭಾನುವಾರ ಯಾರೂ ಕರೆ ಸ್ವೀಕರಿಸಲಿಲ್ಲ. ಕೊನೆಗೆ ಧೈರ್ಯ ಮಾಡಿ, ಅವರ ಮನೆಗೆ ಕರೆ ಮಾಡಿದೆ.
ರಾಮೋಜಿ ರಾವ್ ದೊಡ್ಡ ಮಗ ಕಾರು ಓಡಿಸಿಕೊಂಡು ಬಂದಿದ್ದರು.. ರಾಮೋಜಿ ರಾವ್ ಅವರೇ ಕರೆ ಸ್ವೀಕರಿಸಿದ್ರು. ಏನು ನೀವು ಫೋನ್ ರಿಸೀವ್ ಮಾಡಿದ್ದೀರಲ್ಲ ಎಂದೆ. ಯಾಕೆ ನನ್ನ ಜೊತೆ ಮಾತನಾಡಬಾರದೆ ಎಂದರು. ಜೊತೆಗೆ ಏನು ವಿಚಾರ ಎಂದು ಕೇಳಿದರು. ನಾನು ಈ ಸಮಯಕ್ಕೆ ಬರ್ತಿದ್ದೀನಿ. ಕೆಲವು ವಿಚಾರಗಳನ್ನ ನಿಮ್ಮ ಎದುರು ಹೇಳಬಾರದು. ನನಗೆ ಕಾರು ಕಳುಹಿಸಿಕೊಡ್ತೀರಾ ಎಂದೆ. ಒಂದು ನಿಮಿಷ ಇರಿ ಎಂದರು. ಭಾನುವಾರ ಅಲ್ಲವೇ ಡ್ರೈವರ್ಗಳೆಲ್ಲಾ ರಜೆಯಲ್ಲಿದ್ದಾರೆ. ಒಬ್ಬ ವ್ಯಕ್ತಿ ಇದ್ದಾರೆ. ಆದ್ರೆ, ಆತ ಡ್ರೈವ್ ಮಾಡಿ ತುಂಬಾ ದಿನಗಳಾಗಿವೆ. ವಿಮಾನ ನಿಲ್ದಾಣಕ್ಕೆ ಅಲ್ಲವೇ ಬರುತ್ತಾನೆ ಬಿಡಿ ಎಂದರು. ಯಾರು ಸರ್ ಎಂದರೆ, ನಾನೇ ಬರ್ತೀನಿ ವಿಮಾನ ನಿಲ್ದಾಣಕ್ಕೆ ಎಂದರು.
ನಗೆ ಬಹಳ ಸಂಕೋಚವಾಯ್ತು. ಬಹಳ ಸಂಕೋಚವಾಯ್ತು.. ಬಹಳ ಭಯವಾಯ್ತು. ಇವರ ಬಳಿ ಹೆಚ್ಚು ಸಲುಗೆ ತೆಗೆದುಕೊಂಡೆನಾ, ಅವರ ಜೊತೆ ಫೋನ್ನಲ್ಲಿ ಮಾತನಾಡೋದೇ ಬಹಳ ದೊಡ್ಡ ವಿಷಯ. ಅವರ ಬಳಿ ಈ ಮಾತು ಕೇಳಬೇಕಾಯ್ತು ಎಂದು ಯೋಚಿಸಿದೆ. ಬೇಡ ಸಾರ್, ನಾನು ಟ್ಯಾಕ್ಸಿ ಮಾಡಿಕೊಂಡು ಬರ್ತೀನಿ. ಸಲುಗೆಯಿಂದ ಕೇಳಿ ಬಿಟ್ಟೆ ಎಂದೆನು. ಯಾರು ಬಂದಿದ್ರು ಗೊತ್ತಾ..? ಅವರಿಗೆ ನೆನಪಿದೆಯೋ ಇಲ್ವೋ, ಅವರ ದೊಡ್ಡ ಮಗ ಕಾರು ಚಲಾಯಿಸಿಕೊಂಡು ಬಂದಿದ್ರು ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದರು. ಇದರಿಂದಲೇ ತಿಳಿಯುತ್ತೆ ಸಂಗೀತ ಪುತ್ರನ ಸರಳತೆ ಎಂತಹದ್ದು ಎಂದು.
ಇದನ್ನೂ ಓದಿ: ಪ್ರತಿಯೊಬ್ಬ ಸಂಗೀತ ಪ್ರೇಮಿಯ ಜೀವನ ಸಮೃದ್ಧಿ ಮಾಡಿದ ಕಂಠ ಇನ್ನಿಲ್ಲ -SPB ನಿಧನಕ್ಕೆ ಗಣ್ಯರ ಸಂತಾಪ
Published On - 10:58 am, Sat, 26 September 20