24 ಗಂಟೆಯಲ್ಲಿ 85 ಸಾವಿರ ಜನರಿಗೆ ಕೊರೊನಾ: ಎತ್ತ ಸಾಗಿದೆ ಭಾರತದಲ್ಲಿ ಕೊರೊನಾ?

ದೆಹಲಿ: ಕೇಂದ್ರ ಸರ್ಕಾರ ಅನ್​ಲಾಕ್​ ಘೋಷಿಸಿದ ಬಳಿಕ ದೇಶಾದ್ಯಂತ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದೆ ಜನರು ತೋರುತ್ತಿರುವ ಅಲಕ್ಷ್ಯವೋ ಅಥವಾ ಇದು ಮಾಮೂಲಿ ಜ್ವರ ಅಷ್ಟೇ ಅನ್ನೊ ಭಂಡ ಧೈರ್ಯವೋ ಗೊತ್ತಿಲ್ಲ ಒಟ್ನಲ್ಲಿ ಇಡೀ ಜಗತ್ತಿನಲ್ಲಿ ಭಾರತ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನ ತಲುಪಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 60 ಲಕ್ಷ ಗಡಿಯತ್ತ.. ಇದೀಗ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 85 ಸಾವಿರ ಜನರಿಗೆ ಸೋಂಕು ದೃಢಪಟ್ಟಿದೆ. ಇದರಿಂದ, ಇದೀಗ […]

24 ಗಂಟೆಯಲ್ಲಿ 85 ಸಾವಿರ ಜನರಿಗೆ ಕೊರೊನಾ: ಎತ್ತ ಸಾಗಿದೆ ಭಾರತದಲ್ಲಿ ಕೊರೊನಾ?
KUSHAL V

| Edited By: sadhu srinath

Sep 26, 2020 | 12:42 PM

ದೆಹಲಿ: ಕೇಂದ್ರ ಸರ್ಕಾರ ಅನ್​ಲಾಕ್​ ಘೋಷಿಸಿದ ಬಳಿಕ ದೇಶಾದ್ಯಂತ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದೆ ಜನರು ತೋರುತ್ತಿರುವ ಅಲಕ್ಷ್ಯವೋ ಅಥವಾ ಇದು ಮಾಮೂಲಿ ಜ್ವರ ಅಷ್ಟೇ ಅನ್ನೊ ಭಂಡ ಧೈರ್ಯವೋ ಗೊತ್ತಿಲ್ಲ ಒಟ್ನಲ್ಲಿ ಇಡೀ ಜಗತ್ತಿನಲ್ಲಿ ಭಾರತ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನ ತಲುಪಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 60 ಲಕ್ಷ ಗಡಿಯತ್ತ.. ಇದೀಗ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 85 ಸಾವಿರ ಜನರಿಗೆ ಸೋಂಕು ದೃಢಪಟ್ಟಿದೆ. ಇದರಿಂದ, ಇದೀಗ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59 ಲಕ್ಷದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ 85,362 ಕೊರೊನಾ ಪಾಸಿಟಿವ್​ ಕೇಸ್​ ವರದಿಯಾಗಿದ್ದು ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59,03,933 ತಲುಪಿದೆ.

ಇದಲ್ಲದೆ, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 93,379 ತಲುಪಿದ್ದು ಕಳೆದ 24 ಗಂಟೆಗಳಲ್ಲಿ 1,089 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇದಲ್ಲದೆ, 48,49,584 ಜನ ಗುಣಮುಖರಾಗಿದ್ದು ದೇಶದಲ್ಲಿ ಇದೀಗ 9,60,969 ಸಕ್ರಿಯ ಪ್ರಕರಣಗಳು ಇದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada