‘ಕನಸು ಬೆನ್ನತ್ತಲು ಕೆಲವೊಂದು ತ್ಯಾಗ ಆಗಲೇಬೇಕು’; ಚಂದನ್-ನಿವೇದಿತಾ ವಿಚ್ಛೇದನದ ಬಗ್ಗೆ ವಕೀಲರ ಮಾತು

‘ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ ಬಳಿಕ ಆರು ತಿಂಗಳ ಸಮಯಾವಕಾಶ ಇರುತ್ತಿತ್ತು. ಈಗ ಹಾಗಿಲ್ಲ. ತಕ್ಷಣಕ್ಕೆ ವಿಚ್ಛೇದನ ಪಡೆಯಬಹುದು. ಇಬ್ಬರೂ ಮೆಚ್ಯೂರ್ ಆಗಿದ್ದಾರೆ. ಇಬ್ಬರೂ ಬೆಸ್ಟ್ ಹ್ಯೂಮನ್ ಬೀಯಿಂಗ್ಸ್. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡೋದು ಸರಿ ಅಲ್ಲ’ ಎಂದಿದ್ದಾರೆ ವಕೀಲೆ ಅನಿತಾ.

‘ಕನಸು ಬೆನ್ನತ್ತಲು ಕೆಲವೊಂದು ತ್ಯಾಗ ಆಗಲೇಬೇಕು’; ಚಂದನ್-ನಿವೇದಿತಾ ವಿಚ್ಛೇದನದ ಬಗ್ಗೆ ವಕೀಲರ ಮಾತು
ಚಂದನ್-ನಿವೇದಿತಾ
Follow us
| Updated By: ರಾಜೇಶ್ ದುಗ್ಗುಮನೆ

Updated on: Jun 08, 2024 | 12:22 PM

ಚಂದನ್ ಹಾಗೂ ನಿವೇದಿತಾ ಗೌಡ (Niveditha Gowda) ಅವರು ವಿಚ್ಛೇದನ ಪಡೆದಿದ್ದು ಏಕೆ ಎನ್ನುವ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಸರಿಯಾದ ಕಾರಣವನ್ನು ಯಾರೂ ರಿವೀಲ್ ಮಾಡಿಲ್ಲ. ಈಗ ಚಂದನ್ ಹಾಗೂ ನಿವೇದಿತಾ ಪರ ವಕೀಲರಾದ ಅನಿತಾ ಅವರು ಇವರ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಒಂದು ವರ್ಷಗಳ ಹಿಂದೆಯೇ ಇವರು ವಿಚ್ಛೇದನಕ್ಕೆ ನಿರ್ಧರಿಸಿದ್ದರು. ಈಗ ಇವರು ಬೇರೆ ಆಗಿದ್ದಾರೆ.

‘ಮಾಧ್ಯಮಗಳಲ್ಲಿ ಚಂದನ್ ಹಾಗೂ ನಿವೇದಿತಾ ಬಗ್ಗೆ ತಪ್ಪಾಗಿ ತೋರಿಸಲಾಗುತ್ತಿದೆ. ಈ ಕಾರಣಕ್ಕೆ ನಾನು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದೇನೆ. ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ ಬಳಿಕ ಆರು ತಿಂಗಳ ಸಮಯಾವಕಾಶ ಇರುತ್ತಿತ್ತು. ಈಗ ಹಾಗಿಲ್ಲ. ತಕ್ಷಣಕ್ಕೆ ವಿಚ್ಛೇದನ ಪಡೆಯಬಹುದು. ಇಬ್ಬರೂ ಮೆಚ್ಯೂರ್ ಆಗಿದ್ದಾರೆ. ಇಬ್ಬರೂ ಬೆಸ್ಟ್ ಹ್ಯೂಮನ್ ಬೀಯಿಂಗ್ಸ್. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡೋದು ಸರಿ ಅಲ್ಲ’ ಎಂದಿದ್ದಾರೆ ಅನಿತಾ.

‘ಒಂದು ವರ್ಷದ ಹಿಂದೆಯೇ ಅವರು ವಿಚ್ಛೇದನಕ್ಕೆ ನಿರ್ಧರಿಸಿದ್ದರು. ದೊಡ್ಡವರು ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಅದು ಆಗಿಲ್ಲ. ಇಬ್ಬರೂ ಹ್ಯಾಪಿ ಆಗಿದ್ದಾರೆ. ಇಬ್ಬರೂ ತೀರ್ಮಾನ ಮಾಡಿಕೊಂಡಿದ್ದರು. ಮಗು ಹೊಂದಲು ನಿವೇದಿತಾ ಒಪ್ಪಿಲ್ಲ, ಇದಕ್ಕೆ ವಿಚ್ಛೇದನ ಪಡೆದರು ಅನ್ನೋದು ಸುಳ್ಳು. ವಿಚ್ಛೇದನ ಪಡೆಯಲು ದೊಡ್ಡ ಮನಸ್ತಾಪಲೇ ಆಗಬೇಕಿಲ್ಲ. ಚಿಕ್ಕ ವಿಷಯಕ್ಕೂ ಭಿನ್ನಾಭಿಪ್ರಾಯ ಬರಬಹುದು. ಇಬ್ಬರ ಆಲೋಚನೆ ಬೇರೆ ಇದೆ. ಒಬ್ಬರಿಗೊಬ್ಬರು ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತಾರೆ. ಕನಸುಗಳನ್ನು ಬೆನ್ನತ್ತಬೇಕು ಎಂದರೆ ಕೆಲವು ತ್ಯಾಗ ಮಾಡಲೇಬೇಕು’ ಎಂದಿದ್ದಾರೆ ಅನಿತಾ.

ಇದನ್ನೂ ಓದಿ: ಚಂದನ್-ನಿವೇದಿತಾ ಸಂಬಂಧ ಸರಿ ಮಾಡಲು ಮುಂದಾಗ್ತಾರಾ ಧ್ರುವ? ಸೂಚನೆ ಕೊಟ್ಟ ಪ್ರಥಮ್  

‘ಅವರ ಖಾಸಗಿತನಕ್ಕೆ ಗೌರವ ಕೊಡಬೇಕು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಭಾರತೀಯ ಮಹಿಳೆಯರು ಹಲವು ತ್ಯಾಗ ಮಾಡುತ್ತಾರೆ. ಆದರೆ, ಇವರು ಆ ರೀತಿ ಮಾಡುತ್ತಿಲ್ಲ. ಇಬ್ಬರಿಗೂ ಹೆಚ್ಚಿನ ಸಾಮರ್ಥ್ಯ ಇದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಜಾರಕಿಹೊಳಿ ಏನಂದ್ರು
ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಜಾರಕಿಹೊಳಿ ಏನಂದ್ರು
ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​
ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ