ಚಂದನ್-ನಿವೇದಿತಾ ಸಂಬಂಧ ಸರಿ ಮಾಡಲು ಮುಂದಾಗ್ತಾರಾ ಧ್ರುವ? ಸೂಚನೆ ಕೊಟ್ಟ ಪ್ರಥಮ್
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮಧ್ಯೆ ವಿಚ್ಛೇದನ ಆಗಿದೆ. ಇದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಇಬ್ಬರ ಮಧ್ಯೆ ವೈಮನಸ್ಸು ಮೂಡಲು ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಇವರ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮಧ್ಯೆ ವಿಚ್ಛೇದನ ಆಗಿದೆ. ಇದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಇಬ್ಬರ ಮಧ್ಯೆ ವೈಮನಸ್ಸು ಮೂಡಲು ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಇವರ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ‘ಚಂದನ್, ನಿವೇದಿತಾ (Niveditha Gowda) ಬೇರೆ ಆದ್ರಿ ಎಂದರೆ ಅಯ್ಯೋ ಎನ್ನುವುದಕ್ಕಿಂತ ಸಂಭ್ರಮಿಸೋರು ಜಾಸ್ತಿ ಇರ್ತಾರೆ. ಸೋಶಿಯಲ್ ಮೀಡಿಯಾ ಕೆಟ್ಟಿದೆ. ಇವರ ಮುಂದೆ ಚೆನ್ನಾಗಿ ಬದುಕಿ. ನೀವು ಕಿತ್ತಾಡಿಕೊಳ್ಳುವವರಲ್ಲ. ಕೂತು ಮಾತನಾಡಿದರೆ ಎಲ್ಲವೂ ಪರಿಹಾರ ಆಗುತ್ತದೆ. ನಾನು ಚಂದನ್ ಬಳಿ ಮಾತನಾಡುತ್ತೇನೆ. ಧ್ರುವ ಸರ್ಜಾ ಅವರು ಇದರಲ್ಲಿ ಮಧ್ಯಸ್ಥಿಕೆ ವಹಿಸಬೇಕಿದೆ. ಧ್ರುವ ಹಾಗೂ ಚಂದನ್ ಮಧ್ಯೆ ಆಪ್ತತೆ ಇದೆ. ಪೊಗರು ಚಿತ್ರಕ್ಕೆ ಚಂದನ್ ಅವರೇ ಬೇಕು ಎಂದು ಹಠ ಹಿಡಿದಿದ್ದರು. ಹೀಗಾಗಿ ಧ್ರುವ ಅವರು ಇದಕ್ಕೆ ಮಧ್ಯಸ್ಥಿಕೆ ವಹಿಸಲೇಬೇಕು’ ಎಂದಿದ್ದಾರೆ ಪ್ರಥಮ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 08, 2024 09:26 AM
Latest Videos