SS Rajamouli: ಯಾವಾಗ ಸೆಟ್ಟೇರಲಿದೆ ಮಹೇಶ್ ಬಾಬು-ರಾಜಮೌಳಿ ಸಿನಿಮಾ? ಇಲ್ಲಿದೆ ವಿವರ
ಜನವರಿಯಲ್ಲಿ ಮಹೇಶ್ ಬಾಬು ಜರ್ಮನಿಗೆ ತೆರಳಿದ್ದರು. ಅಲ್ಲಿ ಅವರು ಟ್ರೇನಿಂಗ್ ಪಡೆದರು. ಈ ತರಬೇತಿ ಬಳಿಕ ಅವರು ಭಾರತಕ್ಕೆ ಮರಳಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರು ಸಿದ್ಧತೆಯಲ್ಲಿ ಇದ್ದಾರೆ. ಇನ್ನೆರಡು ತಿಂಗಳು ಅವರು ಸಿನಿಮಾ ಸಿದ್ಧತೆಯಲ್ಲಿ ಇರಲಿದ್ದಾರಂತೆ
ಮಹೇಶ್ ಬಾಬು ಹಾಗೂ ರಾಜಮೌಳಿ (SS Rajamouli) ಸಿನಿಮಾ ಮಾಡುತ್ತಾರೆ ಎಂದಾಗಲೇ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿತ್ತು. ರಾಜಮೌಳಿ ಅವರ ನಿರ್ದೇಶನದ ಕೊನೆಯ ಸಿನಿಮಾ ‘ಆರ್ಆರ್ಆರ್’ ರಿಲೀಸ್ ಆಗಿ ಎರಡು ವರ್ಷ ಕಳೆದಿದೆ. ಈ ಅವಧಿಯಲ್ಲಿ ಅವರು ಮುಂದಿನ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲೇ ಬ್ಯುಸಿ ಆದರು. ಮಹೇಶ್ ಬಾಬು ಅವರ ನಟನೆಯ ‘ಗುಂಟೂರು ಖಾರಂ’ ರಿಲೀಸ್ ಆಗಿ ಸೋಲು ಕಂಡಿತು. ಈಗ ಇಬ್ಬರೂ ಒಂದಾಗುತ್ತಿದ್ದಾರೆ. ಈ ಸಿನಿಮಾ ಸೆಟ್ಟೋರೋದು ಯಾವಾಗ ಎನ್ನುವುದು ಇನ್ನೂ ಘೋಷಣೆ ಆಗಿಲ್ಲ. ಹೀಗಿರುವಾಗಲೇ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಕೇಳಿ ಬಂದಿದೆ.
ಸದ್ಯ ಮಹೇಶ್ ಬಾಬು ಅವರು ರಾಜಮೌಳಿ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ಗುಂಟೂರು ಖಾರಂ’ ರಿಲೀಸ್ ಆದ ಬಳಿಕ ಜನವರಿಯಲ್ಲಿ ಅವರು ಜರ್ಮನಿಗೆ ತೆರಳಿದ್ದರು. ಅಲ್ಲಿ ಅವರು ಟ್ರೇನಿಂಗ್ ಪಡೆದರು. ಈ ತರಬೇತಿ ಬಳಿಕ ಅವರು ಭಾರತಕ್ಕೆ ಮರಳಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರು ಸಿದ್ಧತೆಯಲ್ಲಿ ಇದ್ದಾರೆ. ಇನ್ನೆರಡು ತಿಂಗಳು ಅವರು ಸಿನಿಮಾ ಸಿದ್ಧತೆಯಲ್ಲಿ ಇರಲಿದ್ದಾರಂತೆ. ಆಗಸ್ಟ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ.
ರಾಜಮೌಳಿ ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಾರೆ. ಪ್ರತಿಯೊಂದು ವಿಚಾರವನ್ನೂ ಅವರು ಬರೆದಿಡುತ್ತಾರೆ. ಅದರಂತೆ ಸಿನಿಮಾ ಮೂಡಿ ಬರಲು ಅವರು ಪ್ರಯತ್ನ ಮಾಡುತ್ತಾರೆ. ಮಹೇಶ್ ಬಾಬು ಚಿತ್ರಕ್ಕಾಗಿ ರಾಜಮೌಳಿ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಬೇರೆ ಬೇರೆ ಭಾಷೆಯ ಕಲಾವಿದರನ್ನು ಈ ಸಿನಿಮಾದಲ್ಲಿ ಹಾಕಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ‘ಆದಿಪುರುಷ್’ ಸಿನಿಮಾದ ಆಂಜನೇಯ ಪಾತ್ರಧಾರಿ ಭೇಟಿ ಮಾಡಿದ ರಾಜಮೌಳಿ; ಕಾರಣ?
ರಾಜಮೌಳಿ ಅವರ ಸಿನಿಮಾಗಳಲ್ಲಿ ದೃಶ್ಯವೈಭವ ಇರುತ್ತದೆ. ಪ್ರತಿ ದೃಶ್ಯವನ್ನು ಅವರು ಅದ್ದೂರಿಯಾಗಿ ತೆರೆಮೇಲೆ ತರುತ್ತಾರೆ. ಈ ಕಾರಣಕ್ಕೆ ಅವರ ಸಿನಿಮಾಗಳು ಫ್ಯಾನ್ಸ್ಗೆ ಹೆಚ್ಚು ಇಷ್ಟ ಆಗುತ್ತದೆ. ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ರಾಜಮೌಳಿ ಸಿನಿಮಾಗಳಿಗೆ ಕಥೆ ಬರೆಯುತ್ತಾರೆ. ಮಹೇಶ್ ಬಾಬು-ರಾಜಮೌಳಿ ಸಿನಿಮಾಗೆ ಅವರೇ ಕಥೆ ಬರೆದಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.