ಸೋಶಿಯಲ್ ಮೀಡಿಯಾ ಬಳಕೆ ತುಂಬಾ ಹೆಚ್ಚಿದೆ. ಕೆಲವು ಯುವ ಹೀರೋಗಳು ಇದಕ್ಕೆ ಒಗ್ಗಿಕೊಂಡಿದ್ದಾರೆ. ಆದರೆ, ಕೆಲ ಹಿರಿಯ ನಟರು ಈ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿಲ್ಲ. ಆದರೆ ಕೆಲವರು ಇದಕ್ಕೆ ಭಿನ್ನ. ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ಆ್ಯಕ್ಟೀವ್ ಆಗಿರುವ ಅನೇಕ ಹಿರಿಯ ಕಲಾವಿದರು ಇದ್ದಾರೆ. ಈ ಬಗ್ಗೆ ನಟಿ ಶ್ರುತಿ ಹಾಸನ್ ಅವರು ಹೇಳಿಕೊಂಡಿದ್ದಾರೆ. ಎಮೋಜಿ ಬಳಕೆ ವಿಚಾರದಲ್ಲಿ ಕಮಲ್ ಹಾಸನ್ ಅವರು ಸಾಕಷ್ಟು ಮುಂದಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಈಗಿನ ಜನರೇಷನ್ ಜೊತೆ ಹೊಂದಿಕೊಂಡಿದ್ದಾರೆ.
ಕಮಲ್ ಹಾಸನ್ ಅವರಿಗೆ ಈಗ 70 ವರ್ಷ. ಈಗಲೂ ಆ್ಯಕ್ಟೀವ್ ಆಗಿರುವ ಅವರು ಹಲವು ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಹೊಸ ಜನರೇಷನ್ಗೆ ಹೊಂದಿಕೊಂಡಿದ್ದಾರೆ. ಇದನ್ನು ಶ್ರುತಿ ಹಾಸನ್ ಅವರು ಒಪ್ಪಿಕೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
‘ಎಮೋಜಿ ಬಳಕೆ ಮಾಡೋದರಲ್ಲಿ ನನ್ನ ತಂದೆ ತುಂಬಾನೇ ಮುಂದಿದ್ದಾರೆ. ಇದು ಅನೇಕರಿಗೆ ಗೊತ್ತಿಲ್ಲ. ಟಂಗ್ ಎಮೋಜಿ, ಫಿಶ್ ಎಮೋಜಿ, ಏಲಿಯನ್ ಎಮೋಜಿ, ರಾಂಗ್ ಎಮೋಜಿ ಈ ರೀತಿಯ ಎಮೋಜಿಗಳನ್ನು ಬಳಕೆ ಮಾಡುತ್ತಾರೆ. ಲವ್ ಯು ಪಾ ಎಂದರೆ ಬ್ಲಶ್ ಮಾಡುವ ಎಮೋಜಿ ಕಳುಹಿಸುತ್ತಾರೆ. ಟ್ರೇಲರ್ ಚೆನ್ನಾಗಿದ ಎಂದು ಕಳುಹಿಸಿದರೆ ಗಾಗಲ್ ಹಾಕಿಕೊಂಡಿರೋ ಎಮೋಜಿ ಕಳುಹಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.
ಈ ಸಂದರ್ಶನ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಕೂಲ್ ಡ್ಯಾಡ್ ಅವಾರ್ಡ್ ಕಮಲ್ ಹಾಸನ್ಗೆ ಸಿಗುತ್ತದೆ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಅವರು ಟೆಕ್ ಪ್ರಿಯ ಎಂದಿದ್ದಾರೆ. ಇನ್ನೂ ಕೆಲವರು, ಕಮಲ್ ಹಾಸನ್ ಅವರು ಹೊಸ ಜನರೇಶನ್ಗೆ ಹೊಂದಿಕೊಂಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಮತ್ತೊಂದು ಮಾಸ್ ಚಿತ್ರದ ಜೊತೆ ಬಂದ ಕಮಲ್ ಹಾಸನ್; ‘ಥಗ್ ಲೈಫ್’ ರಿಲೀಸ್ ಡೇಟ್ ರಿವೀಲ್
ಸಿನಿಮಾ ವಿಚಾರಕ್ಕೆ ಬರೋದಾದರೆ ಕಮಲ್ ಹಾಸನ್ ಅವರು ‘ವಿಕ್ರಂ’ ಮೂಲಕ ದೊಡ್ಡ ಗೆಲುವು ಕಂಡರು. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಮಾಡಿದ ಪಾತ್ರ ಮೆಚ್ಚುಗೆ ಪಡೆಯಿತು. ಈ ಚಿತ್ರದ ಸೀಕ್ವೆಲ್ಗೆ ಅವರೇ ವಿಲನ್. ‘ಇಂಡಿಯನ್ 2’ ಸಿನಿಮಾ ಗೆಲುವು ಕಂಡಿಲ್ಲ. ಆದಾಗ್ಯೂ ‘ಇಂಡಿಯನ್ 3’ ಮಾಡಲಾಗುತ್ತಿದೆ. ಇದು ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಲಿದೆ. ‘ಥಗ್ ಲೈಫ್’ ಹೆಸರಿನ ಸಿನಿಮಾ ಕೂಡ ಮಾಡುತ್ತಿದ್ದು, ಇದಕ್ಕೆ ಮಣಿರತ್ನಂ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.