ಮೊದಲ ದಿನ ಹೀನಾಯ ಕಲೆಕ್ಷನ್ ಮಾಡಿದ ‘ಕಂಗುವ’; ಬಜೆಟ್​ಗೂ ಗಳಿಕೆಗೂ ಅಜಗಜಾಂತರ

|

Updated on: Nov 15, 2024 | 8:57 AM

ಸೂರ್ಯ ನಟನೆಯ ‘ಕಂಗುವ’ ಚಿತ್ರವು 350 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಬಿಡುಗಡೆಯಾಗಿದ್ದು, ಮೊದಲ ದಿನ ಕೇವಲ 22 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಾದ್ಯಂತ ನಿರೀಕ್ಷೆಗಿಂತ ಕಡಿಮೆ ಗಳಿಕೆಯು ಚಿತ್ರದ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.

ಮೊದಲ ದಿನ ಹೀನಾಯ ಕಲೆಕ್ಷನ್ ಮಾಡಿದ ‘ಕಂಗುವ’; ಬಜೆಟ್​ಗೂ ಗಳಿಕೆಗೂ ಅಜಗಜಾಂತರ
ಕಂಗುವ
Follow us on

ಬಿಗ್ ಬಜೆಟ್ ಸಿನಿಮಾಗಳು ಮೊದಲ ದಿನ 50+ ಕೋಟಿ ರೂಪಾಯಿ ಗಳಿಕೆ ಮಾಡಿದರೆ ನಿರ್ಮಾಪಕರು ಲಾಭ ಕಾಣಬಹುದು ಎಂಬುದು ಸಾಮಾನ್ಯ ಲೆಕ್ಕಾಚಾರ. ಆದರೆ, ಎಲ್ಲಾ ಸಮಯದಲ್ಲೂ ಹೀಗೆ ಆಗುವುದಿಲ್ಲ. ಸಿನಿಮಾಗೆ ಸಾಕಷ್ಟು ದುಡ್ಡು ಹಾಕಿ ಕೈ ಸುಟ್ಟುಕೊಂಡ ನಿರ್ಮಾಪಕರು ಸಾಕಷ್ಟಿದ್ದಾರೆ. ಈಗ ‘ಕಂಗುವ’ ನಿರ್ಮಾಪಕರು ಕೂಡ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಚಿತ್ರದ ಮೊದಲ ದಿನದ ಗಳಿಕೆಯೇ ಕಾರಣ.

‘ಕಂಗುವ’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ. ಆದರೆ, ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 22 ಕೋಟಿ ರೂಪಾಯಿ. ಭಾರತದಲ್ಲಿ ಇಷ್ಟೊಂದು ಕಡಿಮೆ ಗಳಿಕೆ ಮಾಡಿರುವುದರಿಂದ ಚಿತ್ರಕ್ಕೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ಇದೆ. ಈ ಸಿನಿಮಾ ತಮಿಳಿನಲ್ಲಿ ಮಾತ್ರವಲ್ಲದೆ, ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲೂ ರಿಲೀಸ್ ಆಗಿದೆ. ಆದಾಗ್ಯೂ ಚಿತ್ರವು ಉತ್ತಮ ಗಳಿಕೆ ಮಾಡಲು ಸಾಧ್ಯವಾಗುತ್ತಿಲ್ಲ.

ನಟ ಸೂರ್ಯ ಅವರಿಗೆ ಇರೋ ಕ್ರೇಜ್ ತುಂಬಾನೇ ದೊಡ್ಡದು. ಅವರ ನಟನೆಯ ‘ಕಂಗುವ’ ಸಿನಿಮಾ ಮೇಲೂ ಭರ್ಜರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಸಿನಿಮಾಗೆ ಎಲ್ಲ ಕಡೆಗಳಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಜನರು ಸಿನಿಮಾ ನೋಡಲು ಅಷ್ಟು ಆಸಕ್ತಿ ತೋರಿಸುತ್ತಿಲ್ಲ. ತಮಿಳುನಾಡಿನಲ್ಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ.

ರಾಜ್ಯವಾರು ಲೆಕ್ಕಾಚಾರ ನೋಡೋದಾದರೆ ತಮಿಳುನಾಡಿನಲ್ಲಿ 13.65 ಕೋಟಿ ರೂಪಾಯಿ. ಕರ್ನಾಟಕದಲ್ಲಿ ಚಿತ್ರಕ್ಕೆ ಕೋಟಿಗಳಲ್ಲೇ ಬಿಸ್ನೆಸ್ ಆಗಿದೆ. ಇಂದು (ನವೆಂಬರ್ 15) ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ರಿಲೀಸ್ ಆಗಿರುವುದರಿಂದ ‘ಕಂಗುವ’ ಚಿತ್ರಕ್ಕೆ ಹಿನ್ನಡೆ ಆಗೋದು ಪಕ್ಕಾ ಆಗಿದೆ.

ಇದನ್ನೂ ಓದಿ: ‘ಕಂಗುವ’ ಸಿನಿಮಾದ ಕೆಲ ನಿಮಿಷದ ಪಾತ್ರಕ್ಕೆ ದಿಶಾ ಪಟಾನಿ ಪಡೆದಿದ್ದು ಎಷ್ಟು ಕೋಟಿ?

ಬುಕ್ ಮೈ ಶೋನಲ್ಲಿ ‘ಕಂಗುವ’ ಚಿತ್ರ ಕಡಿಮೆ ರೇಟಿಂಗ್ ಪಡೆದಿದೆ. ಈ ಚಿತ್ರಕ್ಕೆ 6.9 ರೇಟಿಂಗ್ ಸಿಕ್ಕಿದೆ. ನಿರ್ದೇಶಕ ಶಿವ ಅವರು ಈ ಚಿತ್ರದಿಂದ ಸೋಲು ಕಂಡಿದ್ದಾರೆ. ಈ ಮೊದಲು ‘ಅಣ್ಣಾತೆ’ ಸಿನಿಮಾ ನಿರ್ದೇಶನ ಮಾಡಿ ಡಿಸಾಸ್ಟರ್ ಮಾಡಿದ್ದರು. ಈಗ ‘ಕಂಗುವ’ ಕೂಡ ಈ ಸಾಲಿಗೆ ಸೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.