ನಿಧಾನವಾಗಿ ಟಾಲಿವುಡ್​ ತೊರೆಯುತ್ತಿದ್ದಾರೆ ಕೃತಿ ಶೆಟ್ಟಿ, ಕೀರ್ತಿಸುರೇಶ್?

ಕೃತಿ ಶೆಟ್ಟಿ-ಕೀರ್ತಿ ಸುರೇಶ್ ನಿಧಾನವಾಗಿ ಟಾಲಿವುಡ್ ತೊರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಮಾತು ಜೋರಾಗಿದೆ.

ನಿಧಾನವಾಗಿ ಟಾಲಿವುಡ್​ ತೊರೆಯುತ್ತಿದ್ದಾರೆ ಕೃತಿ ಶೆಟ್ಟಿ, ಕೀರ್ತಿಸುರೇಶ್?
ಕೀರ್ತಿ-ಕೃತಿ

Updated on: Jul 05, 2023 | 8:32 AM

ಕೀರ್ತಿ ಸುರೇಶ್ ಹಾಗೂ ಕೃತಿ ಶೆಟ್ಟಿ (Krithi Shetty) ಹೆಚ್ಚು ಗುರುತಿಸಿಕೊಂಡಿದ್ದು ಟಾಲಿವುಡ್ ಮೂಲಕ. ಕೀರ್ತಿ ಸುರೇಶ್ (Keerthy Suresh) ಅವರು ಮಲಯಾಳಂ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದ್ದರೂ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಟಾಲಿವುಡ್ ಚಿತ್ರರಂಗ. ಕೃತಿ ಶೆಟ್ಟಿ ಕೂಡ ಅಷ್ಟೇ. ತೆಲುಗಿನಲ್ಲಿ ನಾಯಕಿ ಆಗಿ ಮಿಂಚಿದರು. ಈಗ ಇಬ್ಬರೂ ಹೀರೋಯಿನ್​ಗಳು ನಿಧಾನವಾಗಿ ಟಾಲಿವುಡ್ ತೊರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಮಾತು ಜೋರಾಗಿದೆ. ಅವರ ಇತ್ತೀಚಿನ ನಡೆ ಈ ರೀತಿಯ ಅನುಮಾನ ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

2016ರಲ್ಲಿ ರಿಲೀಸ್ ಆದ ತೆಲುಗಿನ ‘ನೇನು ಶೈಲಜಾ’ ಸಿನಿಮಾದಲ್ಲಿ ನಟಿಸಿ ಕೀರ್ತಿ ಸುರೇಶ್ ಫೇಮಸ್ ಆದರು. ಅವರ ನಟನೆಯ ‘ಮಹಾನಟಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ನಟನೆಗೆ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಲಭಿಸಿದೆ. ಕಳೆದ ವರ್ಷ ರಿಲೀಸ್ ಆದ ‘ಸರ್ಕಾರು ವಾರಿ ಪಾಟ’ ಸಿನಿಮಾ ಕೂಡ ಗೆದ್ದು ಬೀಗಿದೆ. ಕೀರ್ತಿ ಸುರೇಶ್​ಗೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ, ಇತ್ತೀಚೆಗೆ ಅವರ ಗಮನ ತಮಿಳು ಚಿತ್ರರಂಗದತ್ತ ವಾಲುತ್ತಿದೆ. ಅವರು ಹೆಚ್ಚು ಹೆಚ್ಚು ತಮಿಳು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ನಾಲ್ಕು ತಮಿಳು ಸಿನಿಮಾ ಹಾಗೂ ಒಂದು ತೆಲುಗು ಸಿನಿಮಾ ಇದೆ.

ಇನ್ನು ಕೃತಿ ಶೆಟ್ಟಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ‘ಉಪ್ಪೇನಾ’ ಸಿನಿಮಾ. ತೆಲುಗಿನಲ್ಲಿ ರಿಲೀಸ್ ಆದ ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅವರ ಅದೃಷ್ಟ ಬದಲಾಯಿತು. ‘ಶ್ಯಾಮ ಸಿಂಘ ರಾಯ್’ ಚಿತ್ರ ಅವರ ಬದುಕು ಬದಲಾಯಿಸಿತು. ಸದ್ಯ ಅವರ ಗಮನ ಮಲಯಾಳಂ ಹಾಗೂ ತಮಿಳು ಚಿತ್ರರಂಗದ ಮೇಲಿದೆ.

ಇದನ್ನೂ ಓದಿ: ಹೊಸ ಚಿತ್ರಗಳೊಟ್ಟಿಗೆ ಬಂದ ಕರ್ನಾಟಕ ಮೂಲದ ಪರಭಾಷಾ ನಟಿ ಕೃತಿ ಶೆಟ್ಟಿ

ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡದಲ್ಲಿ ಬೇಡಿಕೆ ಇರುವಾಗಲೇ ಟಾಲಿವುಡ್​ಗೆ ಹೋದರು. ಈಗ ಅವರು ಕನ್ನಡ ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಇದೇ ರೀತಿ ಇವರುಗಳು ಕೂಡ ಟಾಲಿವುಡ್ ತೊರೆಯಬಹುದು ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:05 am, Wed, 5 July 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us