ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ಸರಳವಾದ ಉಡುಗೆ ತೊಟ್ಟು ಮಿಂಚಿದ್ದಾರೆ.
ಮಂಗಳೂರು ಮೂಲದ ಕೃತಿ ಶೆಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿ ಆದರೆ ಈಗ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ.
ಹಿಂದಿಯ ಕೆಲವು ಸಿನಿಮಾಗಳಲ್ಲಿ ಗಮನಕ್ಕೆ ಬಾರದ ಕೆಲವು ಪಾತ್ರಗಳಲ್ಲಿ ನಟಿಸಿದ್ದರು ಕೃತಿ, ಬಾಲನಟಿಯಾಗಿಯೂ ಕಾಣಿಸಿಕೊಂಡಿದ್ದರು.
ಕೃತಿ ಮೊದಲ ಬಾರಿ ನಾಯಕಿಯಾಗಿ ನಟಿಸಿದ್ದು ತೆಲುಗಿನ ಉಪ್ಪೆನ ಸಿನಿಮಾದಲ್ಲಿ. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು.
ಉಪ್ಪೆನ ಸಿನಿಮಾದ ಬಳಿಕ ಹಲವು ಅವಕಾಶಗಳು ಕೃತಿ ಶೆಟ್ಟಿಗೆ ಲಭಿಸಿವೆ, ಲಭಿಸುತ್ತಲೇ ಸಾಗುತ್ತಿವೆ.
ಕೃತಿ ಶೆಟ್ಟಿ ನಟಿಸಿರುವ ಏಳು ಸಿನಿಮಾಗಳು ಈವರೆಗೆ ಬಿಡುಗಡೆ ಆಗಿದ್ದು, ಹಿಟ್ ಸಿನಿಮಾಗಳು ಕೃತಿ ಶೆಟ್ಟಿ ಖಾತೆಯಲ್ಲಿವೆ.
ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೂ ಕೃತಿ ಶೆಟ್ಟಿ ಎಂಟ್ರಿ ನೀಡಿದ್ದಾರೆ. ಕನ್ನಡದಲ್ಲಿ ಯಾವಾಗ ನಟಿಸುತ್ತಾರೆ ನೋಡಬೇಕಿದೆ.
Published On - 8:27 am, Thu, 29 June 23