- Kannada News Photo gallery Cricket photos ICC Rankings Harry Tector goes past Virat Kohli in ICC Players rankings
ICC Rankings: ನೂತನ ರ್ಯಾಂಕಿಂಗ್ನಲ್ಲಿ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ ಐರ್ಲೆಂಡ್ ಆಟಗಾರ..!
ICC Rankings: ಯುಎಇ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಐರ್ಲೆಂಡ್‌ನ ಹ್ಯಾರಿ ಟೆಕ್ಟರ್ ನೂತನ ಐಸಿಸಿ ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೇರಿದ್ದಾರೆ.
Updated on:Jun 29, 2023 | 8:43 AM

ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಶ್ರೇಯಾಂಕದಲ್ಲಿ ವಿಶ್ವಕಪ್ ಕ್ವಾಲಿಫೈಯರ್ ಆಡುತ್ತಿರುವ ತಂಡಗಳ ಆಟಗಾರರಿಗೆ ಬಂಪರ್ ಲಾಭ ಗಳಿಸಿದ್ದಾರೆ. ಯುಎಇ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಐರ್ಲೆಂಡ್‌ನ ಹ್ಯಾರಿ ಟೆಕ್ಟರ್ ನೂತನ ಐಸಿಸಿ ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೇರಿದ್ದಾರೆ.

ಯುಎಇ ವಿರುದ್ಧ ಕೇವಲ 33 ಎಸೆತಗಳಲ್ಲಿ 57 ರನ್ ಚಚ್ಚಿದ್ದ 23 ವರ್ಷದ ಹ್ಯಾರಿ ಟೆಕ್ಟರ್, ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭರ್ಜರಿ ಮುಂಬಡ್ತಿ ಪಡೆದಿರುವುದಲ್ಲದೆ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಇವರಲ್ಲದೆ, ವಿಂಡೀಸ್ ಬ್ಯಾಟರ್ ನಿಕೋಲಸ್ ಪೂರನ್ ಮತ್ತು ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಝಾ ಅವರಂತಹ ಸ್ಟಾರ್ ಆಟಗಾರರು ಸಹ ಐಸಿಸಿ ರ್ಯಾಂಕಿಂಗ್ನಲ್ಲಿ ಲಾಭ ಪಡೆದುಕೊಂಡಿದ್ದಾರೆ.

ನೂತನ ಏಕದಿನ ಆಟಗಾರರ ಶ್ರೇಯಾಂಕಗಳ ಪ್ರಕಾರ, ಐರ್ಲೆಂಡ್‌ನ ಹ್ಯಾರಿ ಟೆಕ್ಟರ್ ಟೆಕ್ಟರ್ ಈ ಹಿಂದೆ ಇದ್ದ 9ನೇ ಸ್ಥಾನದಿಂದ ಎರಡು ಸ್ಥಾನ ಮುಂಬಡ್ತಿ ಪಡೆದಿದ್ದಾರೆ. ಅಂದರೆ 7ನೇ ಸ್ಥಾನಕ್ಕೇರಿರುವ ಟೆಕ್ಟರ್, ಕೊಹ್ಲಿ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.

ಟೆಕ್ಟರ್ ಈಗ 723 ರೇಟಿಂಗ್ ಪಾಯಿಂಟ್‌ಗಳೊಂದಿಗೆ 7 ನೇ ಸ್ಥಾನದಲ್ಲಿದ್ದು, ಕಿಂಗ್ ಕೊಹ್ಲಿ 8 ನೇ ಸ್ಥಾನಕ್ಕಿಳಿದ್ದಾರೆ. ಹಾಗೆಯೇ ರ್ಯಾಂಕಿಂಗ್ನಲ್ಲಿ ಟೆಕ್ಟರ್ ಮುಂಬಡ್ತಿ ಪಡೆದಿರುವುದರಿಂದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 9ನೇ ಸ್ಥಾನಕ್ಕೆ ಕುಸಿದಿದ್ದಾರೆ

ವೆಸ್ಟ್ ಇಂಡೀಸ್ ವಿಕೆಟ್-ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಕೂಡ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಎರಡು ಶತಕ ಬಾರಿಸಿದ್ದು, ಶ್ರೇಯಾಂಕದಲ್ಲಿ ದೊಡ್ಡ ಲಾಭ ಪಡೆದುಕೊಂಡಿದ್ದಾರೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಬರೋಬ್ಬರಿ 13 ಸ್ಥಾನ ಮೇಲಕ್ಕೆ ಜಿಗಿದಿರುವ ಪೂರನ್, ಅಲೆಕ್ಸ್ ಕ್ಯಾರಿ, ಟಾಮ್ ಲ್ಯಾಥಮ್ ಮತ್ತು ಜೋ ರೂಟ್ ಅವರೊಂದಿಗೆ ಜಂಟಿ 19ನೇ ಸ್ಥಾನಕ್ಕೆ ತಲುಪಿದ್ದಾರೆ.

ಏತನ್ಮಧ್ಯೆ, ಜಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಝಾ ಬ್ಯಾಟಿಂಗ್ ಮತ್ತು ಆಲ್‌ರೌಂಡರ್ ಎರಡೂ ವಿಭಾಗದಲ್ಲೂ ತಮ್ಮ ಸ್ಥಾನ ಬದಲಾಯಿಸಿದ್ದಾರೆ. ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಶತಕ ಸಿಡಿಸಿದ್ದ ರಝಾ, ಏಳು ಸ್ಥಾನ ಜಿಗಿದು 27 ನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ. ಅಲ್ಲದೆ, ಪಂದ್ಯಾವಳಿಯಲ್ಲಿ ಎಂಟು ವಿಕೆಟ್ ಉರುಳಿಸಿರುವ ರಝಾ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎರಡು ಸ್ಥಾನ ಮುಂಬಡ್ತಿ ಪಡೆದು ಮೂರನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.
Published On - 8:42 am, Thu, 29 June 23




