- Kannada News Photo gallery Cricket photos Jasprit Bumrah and KL Rahul will be available for selection for the Asia Cup set to be played in September
Jasprit Bumrah: ವಿಶ್ವಕಪ್ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಶುಭಸುದ್ದಿ: ಬುಮ್ರಾ, ರಾಹುಲ್ ಕಮ್ಬ್ಯಾಕ್
Asia Cup 2023: ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಇತ್ತ ಟೀಮ್ ಇಂಡಿಯಾಕ್ಕೆ ಶುಭ ಸುದ್ದಿಯೊಂದು ಸಿಕ್ಕಿದೆ. ಇಂಜುರಿಯಿಂದಾಗಿ ತಂಡದಿಂದ ಸಾಕಷ್ಟು ಸಮಯ ದೂರ ಉಳಿದಿದ್ದ ಜಸ್ಪ್ರೀತ್ ಬುಮ್ರಾ ಕಮ್ಬ್ಯಾಕ್ಗೆ ವೇದಿಕೆ ಸಜ್ಜಾಗಿದೆ. ಇದರ ಜೊತೆಗೆ ಕೆಎಲ್ ರಾಹುಲ್ ಕೂಡ ಫಿಟ್ ಆಗುತ್ತಿದ್ದಾರೆ.
Updated on:Jun 29, 2023 | 9:01 AM

ಐಸಿಸಿ ಪುರುಷರ ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು 100 ದಿನ ಕೂಡ ಇಲ್ಲ. ಮಂಗಳವಾರವಷ್ಟೆ ಐಸಿಸಿ ಹಾಗೂ ಬಿಸಿಸಿಐ ಜೊತೆ ಸೇರಿ ವೇಳಾಪಟ್ಟಿಯನ್ನು ಕೂಡ ಪ್ರಕಟ ಮಾಡಿದೆ. ಭಾರತ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ಅತ್ತ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಇತ್ತ ಟೀಮ್ ಇಂಡಿಯಾಕ್ಕೆ ಶುಭ ಸುದ್ದಿಯೊಂದು ಸಿಕ್ಕಿದೆ. ಇಂಜುರಿಯಿಂದಾಗಿ ತಂಡದಿಂದ ಸಾಕಷ್ಟು ಸಮಯ ದೂರ ಉಳಿದಿದ್ದ ಜಸ್ಪ್ರೀತ್ ಬುಮ್ರಾ ಕಮ್ಬ್ಯಾಕ್ಗೆ ವೇದಿಕೆ ಸಜ್ಜಾಗಿದೆ. ಇದರ ಜೊತೆಗೆ ಕೆಎಲ್ ರಾಹುಲ್ ಕೂಡ ಫಿಟ್ ಆಗುತ್ತಿದ್ದಾರೆ.

ಬುಮ್ರಾ ಹಾಗೂ ರಾಹುಲ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿರುವ ಬಹುನಿರೀಕ್ಷಿತ ಏಷ್ಯಾ ಕಪ್ ಟೂರ್ನಿಯಲ್ಲಿ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ವರದಿ ಆಗಿದೆ. ಇವರಿಬ್ಬರು ಏಷ್ಯಾ ಕಪ್ನಲ್ಲಿ ಕಣಕ್ಕಿಳಿಯಲಿದ್ದಾರಂತೆ.

29 ವರ್ಷದ ಭಾರತೀಯ ವೇಗದ ಬೌಲರ್ ಬುಮ್ರಾ ಪದೇ ಪದೇ ಬೆನ್ನುನೋವಿಗೆ ಒಳಗಾದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಬಿದ್ದಿದ್ದರು.

ಜಸ್ಪ್ರಿತ್ ಸೆಪ್ಟೆಂಬರ್, 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದೀಗ ಬುಮ್ರಾ ಚೇತರಿಸಿಕೊಳ್ಳುತ್ತಿದ್ದು ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಏಷ್ಯಾ ಕಪ್ನಲ್ಲಿ ಕಣಕ್ಕಿಳಿಯಲಿದ್ದಾರಂತೆ.

ಕೆಎಲ್ ರಾಹುಲ್ ಐಪಿಎಲ್ 2023ರ ಮಧ್ಯದಲ್ಲಿ ತೊಡೆಯ ನೋವಿಗೆ ತುತ್ತಾಗಿದ್ದರು. ಅದಾದ ಬಳಿಕ ಟೂರ್ನಿಯನ್ನು ತೊರೆದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ರಾಹುಲ್ ಕೂಡ ಎನ್‌ಸಿಎನಲ್ಲಿ ರಿಹ್ಯಾಬ್‌ನಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಏಷ್ಯಾ ಕಪ್ ವೇಳೆಗೆ ಫಿಟ್ ಆಗಲಿದ್ದಾರಂತೆ.

ಈ ಬಾರಿಯ ಏಷ್ಯಾ ಕಪ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಂದರೆ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಹೊಂದಿರುವ ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆದರೆ, ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ.
Published On - 8:16 am, Thu, 29 June 23
