‘ಮಗ’ಧೀರನ ಸ್ಟಾರ್​ ಗಿರಿ ಕಾಪಾಡೋಕೆ ಪಣತೊಟ್ಟ ಮೆಗಾಸ್ಟಾರ್

| Updated By: Skanda

Updated on: Nov 24, 2020 | 7:50 AM

ರಾಮ್​ ಚರಣ್ ತೇಜ ಟಾಲಿವುಡ್​ನ ಭರವಸೆಯ ಸ್ಟಾರ್​ ನಟರಲ್ಲಿ ಒಬ್ರು. ಆದ್ರೆ ಅದ್ಯಾಕೋ ಕೆಲವೊಮ್ಮೆ ಈ ಸ್ಟಾರ್​ ಗಿರಿ ವರ್ಕೌಟ್​ ಆಗೋದಿಲ್ಲ. ಹಾಗಾಗಿ ಏನೇ ಆದ್ರು ಸರಿ ತಮ್ಮ ಮಗ ಗೆಲ್ಲಲೇ ಬೇಕು ಅಂತ ಮೆಗಾ ಸ್ಟಾರೇ ಕಣಕ್ಕಿಳಿದಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಎಡವುತ್ತಿದ್ದಾರಂತೆ ರಾಮ್​ ಚರಣ್: ರಾಮ್​ ಚರಣ್​ ತೇಜ ದಶಕದಿಂದ ಸಾಲು ಸಾಲು ಹಿಟ್​ ಸಿನಿಮಾಗಳನ್ನ ಕೊಟ್ಟ ಮಗಧೀರ. ಇಂಥ ಸ್ಟಾರ್​ ನಟ ಯಾವುದೆ ಸಿನಿಮಾ ಮಾಡ್ತಾರೆ ಅಂದ್ರು ಅಲ್ಲಿ ನಿರೀಕ್ಷೆ ಕೋಂಚ ಹೆಚ್ಚಾಗಿಯೇ ಇರುತ್ತೆ. […]

‘ಮಗ’ಧೀರನ ಸ್ಟಾರ್​ ಗಿರಿ ಕಾಪಾಡೋಕೆ ಪಣತೊಟ್ಟ ಮೆಗಾಸ್ಟಾರ್
Follow us on

ರಾಮ್​ ಚರಣ್ ತೇಜ ಟಾಲಿವುಡ್​ನ ಭರವಸೆಯ ಸ್ಟಾರ್​ ನಟರಲ್ಲಿ ಒಬ್ರು. ಆದ್ರೆ ಅದ್ಯಾಕೋ ಕೆಲವೊಮ್ಮೆ ಈ ಸ್ಟಾರ್​ ಗಿರಿ ವರ್ಕೌಟ್​ ಆಗೋದಿಲ್ಲ. ಹಾಗಾಗಿ ಏನೇ ಆದ್ರು ಸರಿ ತಮ್ಮ ಮಗ ಗೆಲ್ಲಲೇ ಬೇಕು ಅಂತ ಮೆಗಾ ಸ್ಟಾರೇ ಕಣಕ್ಕಿಳಿದಿದ್ದಾರೆ.

ಸಿನಿಮಾ ಆಯ್ಕೆಯಲ್ಲಿ ಎಡವುತ್ತಿದ್ದಾರಂತೆ ರಾಮ್​ ಚರಣ್:
ರಾಮ್​ ಚರಣ್​ ತೇಜ ದಶಕದಿಂದ ಸಾಲು ಸಾಲು ಹಿಟ್​ ಸಿನಿಮಾಗಳನ್ನ ಕೊಟ್ಟ ಮಗಧೀರ. ಇಂಥ ಸ್ಟಾರ್​ ನಟ ಯಾವುದೆ ಸಿನಿಮಾ ಮಾಡ್ತಾರೆ ಅಂದ್ರು ಅಲ್ಲಿ ನಿರೀಕ್ಷೆ ಕೋಂಚ ಹೆಚ್ಚಾಗಿಯೇ ಇರುತ್ತೆ. ಆದ್ರೆ ಇತ್ತೀಚೆಗೆ ರಾಮ್​ ಚರಣ್​ ಸಿನಿಮಾಗಳ ಆಯ್ಕೆಯಲ್ಲಿ ಎಡವುತ್ತಿದ್ದಾರಂತೆ.

ರಾಮ್​ ಚರಣ್​ ಅಭಿನಯದ ಬ್ರೂಸ್ಲಿ, ಧ್ರುವ ಅಂದುಕೊಂಡ ಮಟ್ಟಿಗೆ ಯಶಸ್ಸು ಕಂಡಿಲ್ಲ. ನಂತ್ರ ಬಂದ ರಂಗಸ್ಥಳಂ ಸಿನಿಮಾ ಸೂಪರ್​ ಹಿಟ್​ ಆಯ್ತು. ರಂಗಸ್ಥಳಂನಿಂದ ಸಿಕ್ಕಾಪಟ್ಟೇ ಕ್ರೇಜ್​ ಹುಟ್ಟಿಕೊಂಡಿದ್ದು, ವಿನಯ ವಿಧೇಯ ರಾಮ ಸಿನಿಮಾದ ಮೇಲೆ. ಆದು ಹೇಳ ಹೆಸರಿಲ್ಲದೇ ಹೋಯ್ತು. ಹಾಗಾಗಿ ಅಖಾಡಕ್ಕೆ ಮೆಗಾ ಸ್ಟಾರ್​ ಇಳಿದು ಬಿಟ್ಟಿದ್ದಾರೆ.

ಅಪ್ಪನ ಸಲಹೆಯಂತೆ ನಡೆದುಕೊಳ್ಳಲಿರುವ ಚರಣ್:
ಮೆಗಾ ಸ್ಟಾರ್​ ಚಿರಂಜೀವಿ ಮಗನ ಸ್ಟಾರ್​ ಗಿರಿಯನ್ನ ಕಾಪಾಡೋಕೆ ಪಣತೊಟ್ಟಿದ್ದಾರೆ. ರಾಮ್​ ಚರಣ್​ ಯಾರ್ಯಾರ ನಿರ್ದೇಶನದಲ್ಲಿ ಕೆಲಸ ಮಾಡ್ಬೇಕು, ಯಾರ ಜೊತೆಗೆ ಸಿನಿಮಾ ಮಾಡಿದ್ರೆ ಸಕ್ಸಸ್​ ಕಾಣ್ತಾರೆ ಅನ್ನೋ ಲೆಕ್ಕಾಚಾರ ಹಾಕ್ತಿದ್ದಾರಂತೆ. ಸದ್ಯ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದಲ್ಲಿ ರಾಮ್​ಚರಣ್ ಬ್ಯುಸಿಯಾಗಿದ್ದು, ಈ ಚಿತ್ರದ ನಂತ್ರ ಅಪ್ಪನ ಸಲಹೆಯಂತೆಯೇ ನಡೆದುಕೊಳ್ಳಲಿದ್ದಾರಂತೆ.

ಮಗನಿಗಾಗಿ ಮೆಗಾಸ್ಟಾರ್, ಸ್ಟಾರ್ ನಿರ್ದೇಶಕರ ಮೇಲೆ ಕಣ್ಣು ಇಟ್ಟಿದ್ದಾರೆ. ರಾಜಮೌಳಿ ಸಿನಿಮಾದ ನಂತ್ರ ಟಾಲಿವುಡ್​ನ ಹೆಸರಾಂತ ನಿರ್ದೇಶಕ ಅನಿಲ್​ ರವಿಪುಡಿ ಜೊತೆಗೆ ರಾಮ್​ಚರಣ್​ ಕೈ ಜೋಡಿಸಬೇಕಂತೆ. ನಂತ್ರ ಅರ್ಜುನ್​ರೆಡ್ಡಿ ಡೈರೆಕ್ಟರ್​ ಸಂದೀಪ್​ ವಂಗಾ ಜೊತೆಗೆ ರಾಮ್​ ಚರಣ್​ ಸಿನಿಮಾ ಮಾಡಬೇಕಂತೆ.

ಈ ಇಬ್ಬರು ನಿರ್ದೇಶಕರ ಸಿನಿಮಾದಲ್ಲಿ ಅಭಿನಯಿಸುವಂತೆ ಚಿರು ತಮ್ಮ ಪುತ್ರನಿಗೆ ಸಲಹೆ ನೀಡಿದ್ದಾರಂತೆ. ಚಿರು ಹೀಗೊಂದು ಹೆಜ್ಜೆ ಇಡೋಕೆ ಕಾರಣ ರಾಮ್​ ಚರಣ್ ಗೊಂದಲ್ಲಿ ಕಥೆಗಳನ್ನ ಆಯ್ಕೆ ಮಾಡ್ತಾರೆ ಹಾಗು ಜೊತೆಗೆ ಬರೋ ನಿರ್ದೇಶಕರನೆಲ್ಲಾ ವಾಪಸ್​ ಕಳಿಸ್ತಾರೆ ಅಂತಿದೆ ಟಾಲಿವುಡ್​. ಅದೇನೆ ಇದ್ರು ರಾಮ್​ ಚರಣ್​ ಅಪ್ಪನ ಮಾತಿನಂತೆಯೇ, ಅವ್ರ ಸಲಹೆಯಂತೆಯೇ ನಡೆದುಕೊಳ್ತಾರಾ? ಅಥವಾ ತಮ್ಮದೇ ಕಥೆಯನ್ನ, ನಿರ್ದೇಶಕರನ್ನ ಆಯ್ಕೆ ಮಾಡಿಕೊಳ್ತಾರಾ? ನೋಡ್ಬೇಕು.

Published On - 3:04 pm, Sat, 7 December 19