ನಟಿ ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಹೊಸ ಬಾಳನ್ನು ಆರಂಭಿಸಿದ್ದಾರೆ. ಏಳು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ ಈಗ ಮದುವೆ ಆಗುವ ಮೂಲಕ ಬಾಳ ಬಂಧನಕ್ಕೆ ಒಳಗಾಗಿದೆ. ಇಂದು (ಜೂನ್ 9) ತಮಿಳುನಾಡಿನ ಮಹಾಬಲಿಪುರಂನಲ್ಲಿ ಇವರ ವಿವಾಹವಾಗಿದೆ. ಸೆಲೆಬ್ರಿಟಿಗಳ ಮದುವೆ ಬಳಿಕ ಫ್ಯಾನ್ಸ್ ಫೋಟೋಗಾಗಿ ಕಾಯೋದು ಸಾಮಾನ್ಯ. ಅದೇ ರೀತಿ, ನಯನತಾರಾ-ವಿಘ್ನೇಶ್ (Vignesh Shivan) ಮದುವೆಯ ಫೋಟೋಗಾಗಿ ಅಭಿಮಾನಿಗಳು ಕಾದು ಕೂತಿದ್ದರು. ಕೊನೆಗೂ ಇವರ ಮದುವೆ ಫೋಟೋ ರಿವೀಲ್ ಆಗಿದೆ. ನವ ದಂಪತಿಯನ್ನು ಕಂಡು ಫ್ಯಾನ್ಸ್ ಸಖತ್ ಖಷಿಪಟ್ಟಿದ್ದಾರೆ. ಈ ಫೋಟೋಗೆ ಸಾಕಷ್ಟು ಲೈಕ್ಸ್ ಸಿಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಶುಭಾಶಯ ತಿಳಿಸುತ್ತಿದ್ದಾರೆ.
‘ನಾನುಂ ರೌಡಿ ದಾನ್’ ಚಿತ್ರಕ್ಕೆ ವಿಘ್ನೇಶ್ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರ 2015ರಲ್ಲಿ ತೆರೆಗೆ ಬಂತು. ವಿಜಯ್ ಸೇತುಪತಿ ಹಾಗೂ ನಯನತಾರಾ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಸೆಟ್ನಲ್ಲಿ ನಯನತಾರಾ ಹಾಗೂ ವಿಘ್ನೇಶ್ಗೆ ಪ್ರೀತಿ ಮೊಳೆಯಿತು. ಅನೇಕ ಕಡೆಗಳಲ್ಲಿ ಇಬ್ಬರೂ ಸುತ್ತಾಟ ನಡೆಸಿದರು. ಆ ಬಳಿಕ ಪ್ರೀತಿ ವಿಚಾರವನ್ನು ಖಚಿತಪಡಿಸಿದರು. ಈಗ ಇವರು ಹಸೆಮಣೆ ಏರಿದ್ದಾರೆ.
ಈ ಮೊದಲೇ ವಿಘ್ನೇಶ್ ಹಾಗೂ ನಯನತಾರಾ ಮದುವೆ ಆಗಬೇಕಿತ್ತು. ಇದಕ್ಕೆ ಈ ಜೋಡಿ ಸಿದ್ಧತೆ ಕೂಡ ಮಾಡಿಕೊಂಡಿತ್ತು. ಆದರೆ, ಸಮಯ ಕೂಡಿ ಬರಲಿಲ್ಲ. ಕೊವಿಡ್ ಮೂರು ಅಲೆಗಳು ಇವರ ಮದುವೆಗೆ ಅಡ್ಡಿ ಆಯಿತು. ಕೊವಿಡ್ ಸಂದರ್ಭದಲ್ಲಿ ಸಾಕಷ್ಟು ನಿರ್ಬಂಧಗಳು ಇದ್ದವು. ಈ ಕಿರಿಕಿರಿ ಮಧ್ಯೆ ಮದುವೆ ಆದರೆ ಎಲ್ಲರಿಗೂ ಆಮಂತ್ರಣ ನೀಡೋಕೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಕೊವಿಡ್ ಸಂಪೂರ್ಣ ಕಡಿಮೆ ಆದ ಬಳಿಕವೇ ಈ ಜೋಡಿ ಮದುವೆ ಆಗಿದೆ.
On a scale of 10…
She’s Nayan & am the One ☝️☺️??
With God’s grace , the universe , all the blessings of our parents & best of friends
Jus married #Nayanthara ☺️?? #WikkiNayan #wikkinayanwedding pic.twitter.com/C7ySe17i8F
— Vignesh Shivan (@VigneshShivN) June 9, 2022
ಇದನ್ನೂ ಓದಿ: ನಯನತಾರಾ-ವಿಘ್ನೇಶ್ ಮದುವೆಗೆ ಬಂದ ಶಾರುಖ್ ಖಾನ್, ರಜನಿಕಾಂತ್; ಇಲ್ಲಿವೆ ಫೋಟೋಗಳು
ಅಟ್ಲೀ ನಿರ್ದೇಶನದ ‘ಜವಾನ್’ ಸಿನಿಮಾದಲ್ಲಿ ಶಾರುಖ್ಗೆ ಜತೆಯಾಗಿ ನಯನತಾರಾ ನಟಿಸುತ್ತಿದ್ದಾರೆ. ಹೀಗಾಗಿ, ಮದುವೆಗೆ ಶಾರುಖ್ಗೆ ಆಮಂತ್ರಣ ಸಿಕ್ಕಿದೆ. ಅವರು ಮದುವೆಯಲ್ಲಿ ಮಿಂಚಿದ್ದಾರೆ. ಇನ್ನು, ಬೋನಿ ಕಪೂರ್ ಸೇರಿ ಚಿತ್ರರಂಗದ ಅನೇಕರು ಈ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಸಂಜೆಯವರೆಗೆ ಮದುವೆ ಕಾರ್ಯಗಳು ನಡೆಯಲಿದೆ. ಹೀಗಾಗಿ, ಇನ್ನೂ ಕೆಲ ಸೆಲೆಬ್ರಿಟಿಗಳು ಮದುವೆಗೆ ಆಗಮಿಸುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.