ಜೂ.​ ಎನ್​ಟಿಆರ್ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ 10 ಲಕ್ಷ ಜನ; ಸಿನಿಮಾ ಮಾತ್ರ ಫ್ಲಾಪ್  

| Updated By: ರಾಜೇಶ್ ದುಗ್ಗುಮನೆ

Updated on: May 20, 2024 | 9:06 AM

JR NTR Birthday: ಇಂದು ಜೂನಿಯರ್​ ಎನ್‌ಟಿಆರ್‌ ಜನ್ಮದಿನ. ಅವರು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹೆಸರಲ್ಲಿ ಒಳ್ಳೆಯ ಕಾರ್ಯ ನಡೆಯುತ್ತಿದೆ. ಈ ವೇಳೆ ಹಳೆಯ ಘಟನೆಯೊಂದನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್​ಟಿರ್ ಅವರನ್ನು ನೋಡಲು ಲಕ್ಷಗಟ್ಟಲೆ ಜನ ಜಮಾಯಿಸಿದ್ದರು.

ಜೂ.​ ಎನ್​ಟಿಆರ್ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ 10 ಲಕ್ಷ ಜನ; ಸಿನಿಮಾ ಮಾತ್ರ ಫ್ಲಾಪ್  
ಜೂನಿಯರ್ ಎನ್​ಟಿಆರ್
Follow us on

ಜೂ. ಎನ್​​ಟಿಆರ್ (JR NTR) ಎಂದೇ ಜಗತ್ತಿಗೆ ಪರಿಚಿತರಾದವರು ನಂದಮೂರಿ ತಾರಕ ರಾಮರಾವ್. ಜೂನಿಯರ್ ಕೇವಲ 8ನೇ ವಯಸ್ಸಿನಲ್ಲಿ ‘ಬ್ರಹ್ಮರ್ಷಿ ವಿಶ್ವಾಮಿತ್ರ’ ಚಿತ್ರದ ಮೂಲಕ ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಇಂದು ಜಾಗತಿಕ ತಾರೆಯಾಗಿದ್ದಾರೆ. ಅವರು ಈಗಾಗಲೇ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ಸೂಪರ್‌ಸ್ಟಾರ್. 2022ರಲ್ಲಿ ಬಿಡುಗಡೆಯಾದ ‘ಆರ್​ಆರ್​ಆರ್​’ ಚಿತ್ರದ ಮೂಲಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ಅವರ ಸಿನಿಮಾದ ಮ್ಯೂಸಿಕ್ ಕಾರ್ಯಕ್ರಮ ಒಂದಕ್ಕೆ ಬರೋಬ್ಬರಿ 10 ಲಕ್ಷ ಜನರು ಸೇರಿದ್ದರು. ಅಭಿಮಾನಿಗಳಿಗಾಗಿ ವಿಶೇಷ ಟ್ರೇನ್ ಕೂಡ ಬಿಡಲಾಗಿತ್ತು.

ಇಂದು (ಮೇ 20) ಜೂನಿಯರ್​ ಎನ್‌ಟಿಆರ್‌ ಜನ್ಮದಿನ. ಅವರು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹೆಸರಲ್ಲಿ ಒಳ್ಳೆಯ ಕಾರ್ಯ ನಡೆಯುತ್ತಿದೆ. ಈ ವೇಳೆ ಹಳೆಯ ಘಟನೆಯೊಂದನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್​ಟಿರ್ ಅವರನ್ನು ನೋಡಲು ಲಕ್ಷಗಟ್ಟಲೆ ಜನ ಜಮಾಯಿಸಿದ್ದರು. ಅವರ ಅಭಿಮಾನಿಗಳಿಗಾಗಿ 10 ವಿಶೇಷ ರೈಲುಗಳನ್ನು ಬಿಡಲಾಗಿತ್ತು. ತಮಗಾಗಿ ಇಷ್ಟೊಂದು ಜನ ಜಮಾಯಿಸಿದ್ದು ನೋಡಿ ಜೂ. ಎನ್‌ಟಿಆರ್‌ಗೂ ಅಚ್ಚರಿ ಆಗಿತ್ತು.

2004ರ ಜನವರಿ 1ರಂದು ನಡೆದ ಘಟನೆ ಇದು. ಜೂ. ಎನ್‌ಟಿಆರ್‌ ಅವರ ‘ಆಂಧ್ರವಾಲಾ’ ಹೆಸರಿನ ಸಿನಿಮಾ ಬಿಡುಗಡೆಯಾಯಿತು. ಇದಕ್ಕೂ ಮೊದಲು ಇದೇ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 10 ಲಕ್ಷ ಜನರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗಾಗಿ ಸರ್ಕಾರ 10 ವಿಶೇಷ ರೈಲುಗಳನ್ನು ಸಹ ಬಿಟ್ಟಿತ್ತು. ಕಾರ್ಯಕ್ರಮಕ್ಕೆ ಜನರು ಬರಲು ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಜೂ. ಎನ್​ಟಿಆರ್​ಗಾಗಿ ಇಷ್ಟೊಂದು ಜನ ಭಾಗವಹಿಸುತ್ತಾರೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಆ ಕಾರ್ಯಕ್ರಮದ ವಿಶೇಷವೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಆದರೆ ಕಾಲ್ತುಳಿತ ಆಗಿರಲಿಲ್ಲ. ಎಲ್ಲವೂ ಶಾಂತಿಯುತವಾಗಿ ನಡೆಯಿತು.

ಆ ಆಡಿಯೋ ಬಿಡುಗಡೆ ಕಾರ್ಯಕ್ರಮ ನಿರೀಕ್ಷೆಗಿಂತ ದೊಡ್ಡದಾಯಿತು. ಆಡಿಯೋ ಕಾರ್ಯಕ್ರಮಕ್ಕೆ ಜನರು ಬಂದರೇ ಹೊರತು ಥಿಯೇಟರ್​ಗೆ ಜನರು ಬರಲಿಲ್ಲ. ಅದರಿಂದ ಚಿತ್ರಕ್ಕೆ ಹೆಚ್ಚಿನ ಲಾಭವಾಗಲಿಲ್ಲ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದುರಂತ ಎಂದು ಸಾಬೀತಾಯಿತು. ಆ ಚಿತ್ರದ ಬಜೆಟ್ 14 ಕೋಟಿ ರೂಪಾಯಿ ಆಗಿತ್ತು. ಆದರೆ, ಸಿನಿಮಾದ ಗಳಿಕೆ ಕೇವಲ 7 ಕೋಟಿ ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ: ಕನ್ನಡದ ಮೇಲೆ ಇದೆ ಜೂನಿಯರ್​ ಎನ್​ಟಿಆರ್​ಗೆ ವಿಶೇಷ ಪ್ರೀತಿ; ಈ ಘಟನೆಗಳೇ ಸಾಕ್ಷಿ 

ಈ ಚಿತ್ರಗಳಲ್ಲಿ ಎನ್ ಟಿಆರ್ ಕಾಣಿಸಿಕೊಳ್ಳಲಿದ್ದಾರೆ

ಜೂನಿಯರ್​ ಎನ್​ಟಿಆರ್ ಅವರು ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದು ಜೂನಿಯರ್​ ಎನ್‌ಟಿಆರ್‌ ಅವರನ್ನು ಇನ್ನಷ್ಟು ದೊಡ್ಡ ಸ್ಟಾರ್ ಆಗಿಸುತ್ತದೆ. 300 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದೆ ‘ದೇವರ’ ಸಿನಿಮಾ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಈ ವರ್ಷ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಹಿಂದಿಯ YRF ಸ್ಪೈ ಯೂನಿವರ್ಸ್‌ನ ‘ವಾರ್ 2′ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಖಳನಾಯಕನಾಗುತ್ತಿದ್ದಾರೆ. ಈ ಚಿತ್ರವು 2025ರ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 9:06 am, Mon, 20 May 24