ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು, ‘ಜೆರಾಕ್ಸ್’ ಮಿಸ್ ಮಾಡ್ಬೇಡಿ

Updated on: Apr 25, 2026 | 7:53 PM

OTT Release this week: ಪ್ರತಿ ವಾರದಂತೆ ಈ ವಾರವೂ ಸಹ ಕೆಲ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಕನ್ನಡದ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಗೆ ಬರುವುದೇ ಅಪರೂಪ. ಆದರೆ ಈ ವಾರ ಒಟಿಟಿಯಲ್ಲಿ ಕನ್ನಡದ ಒಂದೊಳ್ಳೆ ವೆಬ್ ಸರಣಿ ಬಿಡುಗಡೆ ಆಗಿದೆ. ಅದರ ಜೊತೆಗೆ ಇನ್ನಷ್ಟು ಸಿನಿಮಾ, ವೆಬ್ ಸರಣಿಗಳ ಪಟ್ಟಿ ಇಲ್ಲಿದೆ...

1 / 6
ನಾಗಭೂಷಣ್, ಓಂ ಪ್ರಕಾಶ್ ರಾವ್ ಇನ್ನೂ ಹಲವು ಪ್ರತಿಭಾವಂತ ಕಲಾವಿದರು ನಟಿಸಿರುವ ‘ಜೆರಾಕ್ಸ್’ ಹೆಸರಿನ ಕನ್ನಡ ವೆಬ್ ಸರಣಿ ಈ ವಾರ ಒಟಿಟಿಗೆ ಬಂದಿದೆ. ಮನುಷ್ಯರನ್ನು ಝೆರಾಕ್ಸ್ ಮಾಡುವ ಭಿನ್ನ ರೀತಿಯ ಕಾನ್ಸೆಪ್ಟ್ ಅನ್ನು ಈ ವೆಬ್ ಸರಣಿ ಒಳಗೊಂಡಿದೆ. ವೆಬ್ ಸರಣಿಯನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.

2 / 6
ಮಲಯಾಳಂ ಸ್ಟಾರ್ ನಟ ನಿವಿನ್ ಪೌಲಿ ನಟಿಸಿರುವ ಥ್ರಿಲ್ಲರ್ ಸಿನಿಮಾ ‘ಪ್ರತಿಚಾಯ’ ಇದೇ ವಾರ ಒಟಿಟಿಗೆ ಬಂದಿದೆ. ಇದೊಂದು ರಾಜಕೀಯ ಥ್ರಿಲ್ಲರ್ ಕತೆಯನ್ನು ಒಳಗೊಂಡಿದ್ದು, ಸಿಎಂ ಪುತ್ರ ತನ್ನ ತಂದೆಯ ಮೇಲೆ ಬಂದಿರುವ ಆರೋಪವನ್ನು ತೊಡೆದುಹಾಕುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ಜಿಯೋ ಹಾಟ್​​ಸ್ಟಾರ್​ನಲ್ಲಿ ಲಭ್ಯವಿದೆ.

3 / 6
ಜಿವಿ ಪ್ರಕಾಶ್ ನಟನೆಯ ತೆಲುಗು ಮತ್ತು ತಮಿಳು ಭಾಷೆಯ ಕಾಮಿಡಿ ಡ್ರಾಮಾ ಸಿನಿಮಾ ‘ಹ್ಯಾಪಿ ರಾಜ್’ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾ ಅಪ್ಪ ಮತ್ತು ಮಗನ ನಡುವಿನ ಕತೆಯನ್ನು ಒಳಗೊಂಡಿದೆ.

4 / 6
ಅನಿಲ್ ಕಪೂರ್ ನಟನೆಯ ಈ ವೆಬ್ ಸರಣಿ ವ್ಯಕ್ತಿಯೊಬ್ಬ ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹಾಗೂ ಭಯೋತ್ಪಾದಕ ಕೃತ್ಯವನ್ನು ತಡೆಯಲು ಸಮಯದೊಂದಿಗೆ ರೇಸಿಗೆ ಬೀಳುವ ಕತೆಯನ್ನು ಒಳಗೊಂಡಿದೆ. ಆಕ್ಷನ್ ಥ್ರಿಲ್ಲರ್ ಗುಣದ ಈ ವೆಬ್ ಸರಣಿಯನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 6
ಖ್ಯಾತ ಹಾಲಿವುಡ್ ನಟ ಟಿಮಟಿ ಶಾಲೊಮೆ ನಟಿಸಿರುವ, ಆಸ್ಕರ್ ನಾಮನೇಟೆಡ್ ಸಿನಿಮಾ ‘ಮಾರ್ಟಿ ಸುಪ್ರೀಂ’ ಈ ವಾರ ಒಟಿಟಿಗೆ ಬಂದಿದೆ. ಥ್ರಿಲ್ಲರ್ ಕತೆಯುಳ್ಳ ಈ ಸಿನಿಮಾವನ್ನು ಇದೀಗ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಿಸಬಹುದು. ಸಿನಿಮಾ ಒಂಬತ್ತು ವಿಭಾಗಗಳಲ್ಲಿ 2026 ಆಸ್ಕರ್​​ಗೆ ನಾಮಿನೇಟ್ ಆಗಿತ್ತು.

6 / 6
ಸಾಕಷ್ಟು ವಿವಾದ, ವಿರೋಧಗಳ ನಡುವೆ ಇದೇ ಫೆಬ್ರವರಿಯಲ್ಲಿ ಬಿಡುಗಡೆ ಆದ ಸಿನಿಮಾ ‘ದಿ ಕೇರಳ ಸ್ಟೋರಿ 2’ ಈ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಪ್ರದರ್ಶನ ಕಂಡ ಈ ಸಿನಿಮಾ ಇದೀಗ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

Follow Us