ಮತ್ತೆ ಬಂತು ‘ಪಂಚಾಯತ್’ ವೆಬ್ ಸರಣಿ, ಬಿಡುಗಡೆ ಯಾವಾಗ?

ಪ್ರೈಮ್ ವಿಡಿಯೋ 'ಪಂಚಾಯತ್ ಸೀಸನ್ 5' ರ ಪೋಸ್ಟರ್ ಅನ್ನು ಹಂಚಿಕೊಂಡಿದೆ ಮತ್ತು ಅದರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ‘ಸ್ವಲ್ಪ ಜಗಳ ಸ್ವಲ್ಪ ಪ್ರೀತಿ ಇರುತ್ತದೆ, ಫುಲೇರಾ ನಿಮ್ಮ ನಿರೀಕ್ಷೆಯಲ್ಲಿದೆ’ ಎಂಬ ಕ್ಯಾಪ್ಷನ್ ಅನ್ನು ಸಹ ನೀಡಲಾಗಿದೆ. ‘ಪಂಚಾಯತ್ ಸೀಸನ್ 5’ ಇದೇ ಡಿಸೆಂಬರ್ 3ರಂದು ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ. ವೆಬ್ ಸರಣಿಯ ಪ್ರಚಾರದ ಟೀಸರ್ ಸಹ ಈಗಾಗಲೇ ರಿಲೀಸ್ ಆಗಿದೆ.

ಮತ್ತೆ ಬಂತು ‘ಪಂಚಾಯತ್’ ವೆಬ್ ಸರಣಿ, ಬಿಡುಗಡೆ ಯಾವಾಗ?
Panchayat

Updated on: Nov 18, 2026 | 2:57 PM

ಭಾರತದ ಬಲು ಜನಪ್ರಿಯ ವೆಬ್ ಸರಣಿ ‘ಪಂಚಾಯತ್’. ಪುಲೇರಾ ಎಂಬ ಒಂದು ಹಳ್ಳಿಯಲ್ಲಿ ಪಂಚಾಯಿತಿ ಮತ್ತು ಅದರ ಅಧಿಕಾರದ ಸುತ್ತ ನಡೆಯುವ ಘಟನೆಗಳನ್ನೇ ಇರಿಸಿಕೊಂಡು ನಿರ್ಮಾಣವಾದ ಈ ವೆಬ್ ಸರಣಿ ಭಾರತದಾದ್ಯಂತ ಜನಪ್ರಿಯತೆ ಗಳಿಸಿಕೊಂಡಿದೆ. ಈ ವೆಬ್ ಸರಣಿಯ ನಾಲ್ಕು ಸೀಸನ್​​ಗಳು ಈಗಾಗಲೇ ಬಿಡುಗಡೆ ಆಗಿದ್ದು, ಇದೀಗ ಐದನೇ ಸೀಸನ್​​ ಬಿಡುಗಡೆಗೆ ಮುಹೂರ್ತ ನಿಗದಿಪಡಿಸಲಾಗಿದೆ. ‘ಪಂಚಾಯತ್’ ವೆಬ್ ಸರಣಿಯ ಐದನೇ ಸೀಸನ್ ತಡವಾಗಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಇದೀಗ ಕೊನೆಗೂ ಅಮೆಜಾನ್ ಪ್ರೈಂ ರಿಲೀಸ್ ದಿನಾಂಕವನ್ನು ಬಹಿರಂಗಗೊಳಿಸಿದೆ.

ಪ್ರೈಮ್ ವಿಡಿಯೋ ‘ಪಂಚಾಯತ್ ಸೀಸನ್ 5’ ರ ಪೋಸ್ಟರ್ ಅನ್ನು ಹಂಚಿಕೊಂಡಿದೆ ಮತ್ತು ಅದರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ‘ಸ್ವಲ್ಪ ಜಗಳ ಸ್ವಲ್ಪ ಪ್ರೀತಿ ಇರುತ್ತದೆ, ಫುಲೇರಾ ನಿಮ್ಮ ನಿರೀಕ್ಷೆಯಲ್ಲಿದೆ’ ಎಂಬ ಕ್ಯಾಪ್ಷನ್ ಅನ್ನು ಸಹ ನೀಡಲಾಗಿದೆ. ‘ಪಂಚಾಯತ್ ಸೀಸನ್ 5’ ಇದೇ ಡಿಸೆಂಬರ್ 3ರಂದು ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ. ವೆಬ್ ಸರಣಿಯ ಪ್ರಚಾರದ ಟೀಸರ್ ಸಹ ಈಗಾಗಲೇ ರಿಲೀಸ್ ಆಗಿದೆ.

Loading...

ಪಂಚಾಯತ್ ಸೀಸನ್ 4 ರ ಹಳ್ಳಿಯ ಚುನಾವಣೆಯಲ್ಲಿ ಮಂಜು ದೇವಿ ಅವರನ್ನು ಸೋಲಿಸುವ ಮೂಲಕ ಕ್ರಾಂತಿ ದೇವಿ ಫುಲೇರಾದ ಹೊಸ ಅಧ್ಯಕ್ಷರಾಗಿ ಹೊರಹೊಮ್ಮಿದರು. ಆ ಮೂಲಕ ಕ್ರಾಂತಿ ದೇವಿಯ ಪತಿ ಭೂಷಣ್ ಶರ್ಮಾ ಅಲಿಯಾಸ್ ಬನ್ರಾಕಾಸ್ ಕೈಗೆ ಅಧಿಕಾರ ದೊರಕಿತ್ತು. ಮುಂಬರುವ ಸೀಸನ್ ಅವರು ತಮ್ಮ ಭರವಸೆಗಳನ್ನು ಈಡೇರಿಸಬಹುದೇ ಮತ್ತು ಫುಲೇರಾವನ್ನು ಉತ್ತಮಗೊಳಿಸಬಹುದೇ ಅಥವಾ ಅವರ ಮಾತುಗಳು ಕೇವಲ ಮತ್ತೊಂದು ರಾಜಕೀಯ ಗಿಮಿಕ್ ಆಗಿದೆಯೇ ಎಂಬುದು ತಿಳಿಯಲಿದೆ. ಆದರೆ ಬನ್ರಾಕಸ್​​ಗೆ ಕೈಗೆ ಅಧಿಕಾರ ಸಿಕ್ಕಿದ್ದರಿಂದ ಪಂಚಾಯಿತಿ ಅಧಿಕಾರಿ ಅಭಿಷೇಕ್ ಕತೆ ಏನಾಗುತ್ತದೆ ಎಂಬುದನ್ನು ನೋಡಬೇಕಿದೆ.

ಇದನ್ನೂ ಓದಿ:ಜನಪ್ರಿಯ ‘ಬ್ರೇಕಿಂಗ್ ಬ್ಯಾಡ್’ ವೆಬ್ ಸರಣಿ ನಟ ಆರ್​​​ಜೆ ಮಿಟಿ ನಿಧನ

ಇದೀಗ ಬಿಡುಗಡೆ ಆಗಲಿರುವ ‘ಪಂಚಾಯತ್ ಸೀಸನ್ 5’ ಅನ್ನು ದಿ ವೈರಲ್ ಫೀವರ್ (TVF) ನಿರ್ಮಿಸಿದ್ದು, ದೀಪಕ್ ಕುಮಾರ್ ಮಿಶ್ರಾ ನಿರ್ದೇಶನ ಮಾಡಿದ್ದಾರೆ. ದೀಪಕ್ ಕುಮಾರ್ ಮಿಶ್ರಾ, ಚಂದನ್ ಕುಮಾರ್ ಮತ್ತು ಅರುಣಾಭ್ ಕುಮಾರ್ ಅವರು ವೆಬ್ ಸರಣಿಯ ಕತೆ, ಚಿತ್ರಕತೆ ರಚಿಸಿದ್ದಾರೆ. ಈ ಹಿಂದಿನ ಸೀಸನ್​​ಗಳಲ್ಲಿ ನಟನೆ ಮಾಡಿದ್ದ ಜಿತೇಂದ್ರ ಕುಮಾರ್, ರಘುಬೀರ್ ಯಾದವ್, ನೀನಾ ಗುಪ್ತಾ, ಸುನಿತಾ ರಾಜ್‌ವರ್, ಫೈಸಲ್ ಮಲಿಕ್, ಚಂದನ್ ರಾಯ್, ಸನ್ವಿಕಾ, ದುರ್ಗೇಶ್ ಕುಮಾರ್ ಮತ್ತು ಅಶೋಕ್ ಪಾಠಕ್ ಮುಂತಾದವರು ಹೊಸ ಸೀಸನ್​​ನಲ್ಲಿಯೂ ಮುಂದುರೆಯಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us