AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಪ್ರಿಯ ‘ಬ್ರೇಕಿಂಗ್ ಬ್ಯಾಡ್’ ವೆಬ್ ಸರಣಿ ನಟ ಆರ್​​​ಜೆ ಮಿಟಿ ನಿಧನ

‘ಬ್ರೇಕಿಂಗ್ ಬ್ಯಾಡ್’ ವಿಶ್ವದ ಬಲು ಜನಪ್ರಿಯ ವೆಬ್ ಸರಣಿ. ರಸಾಯನಶಾಸ್ತ್ರ ಶಿಕ್ಷಕನೊಬ್ಬ ಭೂಗತ ಲೋಕದ ದೊರೆಯಾಗಿ ಬೆಳೆದು ನಿಲ್ಲುವುದು ಮತ್ತು ಕೊನೆಗೆ ಎಲ್ಲವನ್ನೂ ಕಳೆದುಕೊಳ್ಳುವ ರೋಚಕ ಹಾಗೂ ಭಾವುಕ ಅಂಶಗಳನ್ನು ಒಳಗೊಂಡ ಕತೆಯ ಈ ವೆಬ್ ಸರಣಿ ವಿಶ್ವದಲ್ಲೇ ಅತಿ ಹೆಚ್ಚು ಐಎಂಡಿಬಿ ರೇಟಿಂಗ್ ಪಡೆದಿರುವ ವೆಬ್ ಸರಣಿಯೂ ಹೌದು. ಈ ವೆಬ್ ಸರಣಿಯಲ್ಲಿ ನಟಿಸಿದ್ದ ಎಲ್ಲರೂ ಸ್ಟಾರ್​ಗಳಾಗಿದ್ದರು. ಇದೀಗ ಈ ವೆಬ್ ಸರಣಿಯಲ್ಲಿ ನಟಿಸಿದ್ದ ನಟ ಆರ್​​ಜೆ ಮಿಟಿ ನಿಧನ ಹೊಂದಿದ್ದಾರೆ.

ಜನಪ್ರಿಯ ‘ಬ್ರೇಕಿಂಗ್ ಬ್ಯಾಡ್’ ವೆಬ್ ಸರಣಿ ನಟ ಆರ್​​​ಜೆ ಮಿಟಿ ನಿಧನ
Rj Mitte Breaking Bad
ಮಂಜುನಾಥ ಸಿ.
|

Updated on: Oct 13, 2026 | 11:41 AM

Share

‘ಬ್ರೇಕಿಂಗ್ ಬ್ಯಾಡ್’ ವಿಶ್ವದ ಬಲು ಜನಪ್ರಿಯ ವೆಬ್ ಸರಣಿ. ರಸಾಯನಶಾಸ್ತ್ರ ಶಿಕ್ಷಕನೊಬ್ಬ ಭೂಗತ ಲೋಕದ ದೊರೆಯಾಗಿ ಬೆಳೆದು ನಿಲ್ಲುವುದು ಮತ್ತು ಕೊನೆಗೆ ಎಲ್ಲವನ್ನೂ ಕಳೆದುಕೊಳ್ಳುವ ರೋಚಕ ಹಾಗೂ ಭಾವುಕ ಅಂಶಗಳನ್ನು ಒಳಗೊಂಡ ಕತೆಯ ಈ ವೆಬ್ ಸರಣಿ ವಿಶ್ವದಲ್ಲೇ ಅತಿ ಹೆಚ್ಚು ಐಎಂಡಿಬಿ ರೇಟಿಂಗ್ ಪಡೆದಿರುವ ವೆಬ್ ಸರಣಿಯೂ ಹೌದು. ಈ ವೆಬ್ ಸರಣಿಯಲ್ಲಿ ನಟಿಸಿದ್ದ ಎಲ್ಲರೂ ಸ್ಟಾರ್​ಗಳಾಗಿದ್ದರು. ಇದೀಗ ಈ ವೆಬ್ ಸರಣಿಯಲ್ಲಿ ನಟಿಸಿದ್ದ ನಟ ಆರ್​​ಜೆ ಮಿಟಿ ನಿಧನ ಹೊಂದಿದ್ದಾರೆ.

ವೆಬ್ ಸರಣಿಯ ಮುಖ್ಯ ಪಾತ್ರ ವಾಲ್ಟರ್ ವೈಟ್​​​ನ ಅಂಗವಿಕಲ ಪುತ್ರ ‘ವಾಲ್ಟರ್ ವೈಟ್ ಜೂನಿಯರ್’ ಪಾತ್ರದಲ್ಲಿ ನಟನೆ ಮಾಡಿದ್ದ ಆರ್​​ಜೆ ಮಿಟಿ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ವೆಬ್ ಸರಣಿಯಲ್ಲಿ ಆತ ಸೆಲೆಬ್ರಲ್ ಪ್ಯಾಲಸಿಗೆ ಒಳಗಾಗಿರುವ ಯುವಕನ ಪಾತ್ರದಲ್ಲಿ ನಟನೆ ಮಾಡಿದ್ದರು. ಅಂಗವಿಕಲ ಆದರೆ ಸಾಕಷ್ಟು ಆಸೆಗಳುಳ್ಳ ಆದರೆ ಕೆಡುಕನ್ನು ದ್ವೇಷಿಸುವ, ಒಳಿತನ ಪರವಾಗಿ ನಿಲ್ಲುವ ಪಾತ್ರ ಅದಾಗಿತ್ತು. ಆರ್​ಜೆ ಮಿಟಿ ಆ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದರು.

ಆರ್​​ಜೆ ಮಿಟಿ ಅವರ ಸಾವಿನ ಕಾರಣ ತಿಳಿದುಬಂದಿಲ್ಲ. ಆದರೆ ಅರು ಹಲವು ವರ್ಷಗಳಿಂದ ‘ಸೆಲೆಬ್ರಲ್ ಪ್ಯಾಲಸಿ’ ಸಮಸ್ಯೆಯಿಂದ ಬಳಲುತ್ತಿದ್ದರು. ‘ಬ್ರೇಕಿಂಗ್ ಬ್ಯಾಡ್’ ವೆಬ್ ಸರಣಿಯಲ್ಲಿಯೂ ಸಹ ಅವರು ಅದೇ ಕಾಯಿಲೆಯಿಂದ ಬಳಲುತ್ತಿರುವ ಯುವಕನ ಪಾತ್ರದಲ್ಲಿ ನಟನೆ ಮಾಡಿದ್ದರು. ಕಾಯಿಲೆಯಿಂದಾಗಿಯೇ ಆರ್​​ಜೆ ಮಿಟಿ ನಿಧನ ಹೊಂದಿದ್ದಾರೆಯೇ ಎಂಬ ಬಗ್ಗೆ ಖಾತ್ರಿ ಇಲ್ಲ. ಖುದ್ದು ಅಂಗವಿಕಲರಾಗಿದ್ದ ಆರ್​​ಜೆ ಮಿಟಿ ಅವರು ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಸಮಾಜಿಕ ಕಾರ್ಯಕರ್ತರೂ ಆಗಿದ್ದರು.

ಇದನ್ನೂ ಓದಿ:ಮತ್ತೆ ಬರುತ್ತಿದ್ದಾರೆ ಮಹಾನ್ ಕಳ್ಳರು, ಮುಗಿದಿಲ್ಲ ‘ಮನಿ ಹೈಸ್ಟ್’

ಟೆಕ್ಸಸ್​​ನ ಅವರ ನಿವಾಸದಲ್ಲಿ ಆರ್​​ಜೆ ಮಿಟಿ ನಿಧನ ಹೊಂದಿದ್ದು, ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ಆರ್​​ಜೆ ಮಿಟಿ ನಿಧನಕ್ಕೆ ಹಲವು ಅಭಿಮಾನಿಗಳು, ‘ಬ್ರೇಕಿಂಗ್ ಬ್ಯಾಡ್’ ವೆಬ್ ಸರಣಿಯ ಸಹ ನಟ-ನಟಿಯರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಬ್ರೇಕಿಂಗ್ ಬ್ಯಾಡ್’ ವೆಬ್ ಸರಣಿಯ ಮುಖ್ಯಪಾತ್ರಧಾರಿ ಕ್ರಾನ್‌ಸ್ಟನ್ ಆರ್​​ಜೆ ಮಿಟಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ‘ಬ್ರೇಕಿಂಗ್ ಬ್ಯಾಡ್ ವೆಬ್ ಸರಣಿ ಆರಂಭವಾದಾಗ ಮಿಟಿ ಅವರಿಗೆ 14 ವರ್ಷ. ಅವರು ಬಹಳ ಕಠಿಣ ಶೂಟಿಂಗ್ ಶೆಡ್ಯೂಲ್ ಇದ್ದರೂ ಎಲ್ಲ ಕಷ್ಟವನ್ನು ಎದುರಿಸಿದರು. “2007ರ ಫೆಬ್ರವರಿಯಲ್ಲಿ ನಾವು ಪೈಲಟ್ ಎಪಿಸೋಡ್ ಚಿತ್ರೀಕರಿಸಲು ಶುರು ಮಾಡಿದಾಗ ಆ ಹುಡುಗ ಇನ್ನೂ ಅನನುಭವಿಯಾಗಿದ್ದ. ಆದರೆ ಸ್ವಲ್ಪ ಸ್ವಲ್ಪವಾಗಿ ಅವನು ಒಬ್ಬ ಒಳ್ಳೆಯ ನಟನಾಗಿ ಬೆಳೆಯುವುದನ್ನು ನಾವು ನೋಡಿದೆವು’ ಎಂದು ಕ್ರಾನ್‌ಸ್ಟನ್ ಬರೆದುಕೊಂಡಿದ್ದಾರೆ.

ಅದೇ ಶೋನಲ್ಲಿ ಜೆಸ್ಸಿ ಪಿಂಕ್‌ಮನ್ ಪಾತ್ರದಲ್ಲಿ ನಟಿಸಿದ್ದ ಆರನ್ ಪಾಲ್, ‘ಈ ಸುದ್ದಿ ಕೇಳಿದ ಬಳಿಕ ಮಾತೇ ಬರುತ್ತಿಲ್ಲ, ‘ನನಗೆ ಅತ್ಯಂತ ಆಪ್ತವಾಗಿದ್ದರು ಆರ್​​ಜೆ ಮಿಟಿ’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ