AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದ್ದಾರೆ ಮಹಾನ್ ಕಳ್ಳರು, ಮುಗಿದಿಲ್ಲ ‘ಮನಿ ಹೈಸ್ಟ್’

Money Heist new season: ಮನಿ ಹೈಸ್ಟ್ ಸರಣಿಯ ಐದು ಸೀಸನ್​​ಗಳು ಈ ವರೆಗೆ ಪ್ರಸಾರ ಆಗಿದ್ದು, ಐದನೇ ಸೀಸನ್ ಅನ್ನು ಈ ವೆಬ್ ಸರಣಿಯ ಕೊನೆಯ ಸರಣಿ ಎನ್ನಲಾಗಿತ್ತು. ಕತೆಯನ್ನು ಸಹ ಮುಗಿಸಲಾಗಿತ್ತು. ಆದರೆ ಇದೀಗ ನೆಟ್​​ಫ್ಲಿಕ್ಸ್​ ಹೊಸದೊಂದು ಟೀಸರ್ ಬಿಡುಗಡೆ ಮಾಡಿದ್ದು, ‘ಮನಿ ಹೈಸ್ಟ್’ ಮತ್ತೆ ಬರುತ್ತಿದೆ ಎಂದಿದೆ. ಇದು ವೆಬ್ ಸರಣಿಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಮತ್ತೆ ಬರುತ್ತಿದ್ದಾರೆ ಮಹಾನ್ ಕಳ್ಳರು, ಮುಗಿದಿಲ್ಲ ‘ಮನಿ ಹೈಸ್ಟ್’
Money Heist
ಮಂಜುನಾಥ ಸಿ.
|

Updated on: May 10, 2026 | 10:31 PM

Share

‘ಗೇಮ್ ಆಫ್ ಥ್ರೋನ್ಸ್’, ‘ಬ್ರೇಕಿಂಗ್ ಬ್ಯಾಡ್’, ‘ಡಾರ್ಕ್’ ಇನ್ನಿತರೆ ವಿಶ್ವ ವಿಖ್ಯಾತ ವೆಬ್ ಸರಣಿಗಳ ಸಾಲಿಗೆ ಸೇರುತ್ತದೆ ‘ಮನಿ ಹೈಸ್ಟ್’. ನೆಟ್​​ಫ್ಲಿಕ್ಸ್​​ನಲ್ಲಿ ಪ್ರಸಾರವಾಗಿದ್ದ ಈ ಸ್ಪ್ಯಾನಿಷ್ ಶೋ ಕೋವಿಡ್ ಸಮಯದಲ್ಲಿ ಭಾರಿ ಹಿಟ್ ಆಗಿತ್ತು. ಈ ಸರಣಿಯ ಐದು ಸೀಸನ್​​ಗಳು ಈ ವರೆಗೆ ಪ್ರಸಾರ ಆಗಿದ್ದು, ಐದನೇ ಸೀಸನ್ ಅನ್ನು ಈ ವೆಬ್ ಸರಣಿಯ ಕೊನೆಯ ಸರಣಿ ಎನ್ನಲಾಗಿತ್ತು. ಕತೆಯನ್ನು ಸಹ ಮುಗಿಸಲಾಗಿತ್ತು. ಆದರೆ ಇದೀಗ ನೆಟ್​​ಫ್ಲಿಕ್ಸ್​ ಹೊಸದೊಂದು ಟೀಸರ್ ಬಿಡುಗಡೆ ಮಾಡಿದ್ದು, ‘ಮನಿ ಹೈಸ್ಟ್’ ಮತ್ತೆ ಬರುತ್ತಿದೆ ಎಂದಿದೆ. ಇದು ವೆಬ್ ಸರಣಿಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

‘ಮನಿ ಹೈಸ್ಟ್’ ಎಂಬುದು ವಿಶ್ವದಾದ್ಯಂತ ಅತ್ಯಂತ ಜನಪ್ರಿಯತೆ ಗಳಿಸಿದ ಒಂದು ಸ್ಪ್ಯಾನಿಷ್ ವೆಬ್ ಸರಣಿ. ಇದರಲ್ಲಿ ‘ಪ್ರೊಫೆಸರ್’ ಎಂಬ ಬುದ್ಧಿವಂತ ವ್ಯಕ್ತಿಯ ನೇತೃತ್ವದಲ್ಲಿ ತಂಡವೊಂದು ದೊಡ್ಡ ಬ್ಯಾಂಕ್‌ಗಳಿಗೆ ನುಗ್ಗಿ, ಅತ್ಯಂತ ಚಾಣಾಕ್ಷತನದಿಂದ ಹಣವನ್ನು ದೋಚುವ ಕತೆ ಇದೆ. ಈ ಸರಣಿಯು ತನ್ನ ರೋಚಕ ತಿರುವುಗಳು ಮತ್ತು ಅದ್ಭುತ ಪಾತ್ರಗಳಿಂದಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದೆ. ಈ ಸರಣಿಯ ‘ಬೆಲ್ಲಾ ಚಾವ್’ ಹಾಡು ಕೂಡ ಬಹಳ ಜನಪ್ರಿಯವಾಗಿದೆ.

ಇದನ್ನೂ ಓದಿ:ವಿಶ್ವ ದಾಖಲೆ ಬರೆಯುತ್ತದೆಯೇ ‘ಮೈಖಲ್’ ಸಿನಿಮಾ: ಗಳಿಸಿರುವುದೆಷ್ಟು? ಗಳಿಸಬೇಕಾದ್ದೆಷ್ಟು?

ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ಹೊಸ ಟೀಸರ್‌ನಲ್ಲಿ ‘ಬೆಲ್ಲಾ ಚಾವೊ’ ಹಾಡಿನ ಸಂಗೀತದೊಂದಿಗೆ ಹಳೆಯ ಎಪಿಸೋಡ್​​ಗಳ ದೃಶ್ಯಗಳನ್ನು ತೋರಿಸಲಾಗಿದೆ. ಜೊತೆಗೆ ಕೊನೆಯ ಸೀಸನ್​ನ ಕೊನೆಯ ಎಪಿಸೋಡ್​​ನಲ್ಲಿ ಮನಿ ಹೈಸ್ಟ್ ತಂಡ ಕದ್ದಿದ್ದ ಚಿನ್ನ ಬೇರೆ ಯಾರಿಗೋ ಸಿಕ್ಕಿರುವ ದೃಶ್ಯವನ್ನು ಸಹ ತೋರಿಸಲಾಗಿದೆ. ವೆಬ್ ಸರಣಿಯಲ್ಲಿ ಕಳ್ಳರ ಗುಂಪು ಧರಿಸುತ್ತಿದ್ದ ಚಿತ್ರಕಾರ ಡಾಲಿಯ ಮಾಸ್ಕ್ ಅನ್ನು ಚಿನ್ನದ ಮಾಸ್ಕ್ ಅನ್ನಾಗಿ ತೋರಿಸಲಾಗಿದ್ದು, ‘ಮನಿ ಹೈಸ್ಟ್’ನ ಕತೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ಈಗ ಬರಲಿರುವ ‘ಮನಿ ಹೈಸ್ಟ್’ನಲ್ಲಿ ಹಳೆಯ ಪಾತ್ರಗಳೇ ಇರುತ್ತವೆಯೇ ಅಥವಾ ಹೊಸ ಪಾತ್ರಗಳ ಎಂಟ್ರಿ ಆಗಲಿದೆಯೇ ಎಂಬುದು ಕುತೂಹಲ. ಹಳೆಯ ಪಾತ್ರಗಳು ಪ್ರೇಕ್ಷಕರಿಗೆ ಬಹಳ ಕನೆಕ್ಟ್ ಆಗಿದ್ದವು. ಅಸಲಿಗೆ ‘ಮನಿ ಹೈಸ್ಟ್’ ಕೇವಲ ಒಂದು ದರೋಡೆಯ ಕಥೆಯಲ್ಲ, ಇದರಲ್ಲಿ ಭಾವನೆಗಳು, ಸ್ನೇಹ ಮತ್ತು ವ್ಯವಸ್ಥೆಯ ವಿರುದ್ಧದ ಹೋರಾಟದ ಕಥೆಯೂ ಇದೆ. ಈ ಸರಣಿ ಬಿಡುಗಡೆ ಆದ ಬಳಿಕ ನಡೆದ ಹಲವು ಪ್ರತಿಭಟನೆಗಳಲ್ಲಿ ಜನ ‘ಮನಿ ಹೈಸ್ಟ್’ನ ಕಳ್ಳರ ತಂಡದ ರೀತಿಯೇ ಉಡುಪು ಧರಿಸಿ ಪಾಲ್ಗೊಂಡಿದ್ದು ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​