
ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡು ಎಲ್ಲರ ಗಮನ ಸೆಳೆದಿದ್ದ ‘ಪ್ರೇಮದ ಊರಲಿ’ ಸಿನಿಮಾ ಇದೀಗ ಡಿಜಿಟಲ್ ವೇದಿಕೆಗೆ ಎಂಟ್ರಿ ಕೊಟ್ಟಿದೆ. ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದ್ದ ಈ ಚಿತ್ರ, ಯಾವುದೇ ದೊಡ್ಡ ಮಟ್ಟದ ಪ್ರಚಾರವಿಲ್ಲದೆ ಸೈಲೆಂಟ್ ಆಗಿ ಒಟಿಟಿಗೆ ಲಗ್ಗೆ ಇಟ್ಟಿದೆ. ಸಿನಿಪ್ರಿಯರಿಗೆ ಇದೊಂದು ಭರ್ಜರಿ ಸಿಹಿಸುದ್ದಿಯಾಗಿದೆ.
ಸಾಮಾನ್ಯವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆದ ಸಿನಿಮಾಗಳು ಒಟಿಟಿಗೆ ಬರುವಾಗ ಸಾಕಷ್ಟು ಸದ್ದು ಮಾಡುತ್ತವೆ. ಆದರೆ, ‘ಪ್ರೇಮದ ಊರಲಿ’ ಚಿತ್ರದ ವಿಚಾರದಲ್ಲಿ ಹಾಗಾಗಿಲ್ಲ. ಸದ್ಯ ಈ ಸಿನಿಮಾ ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಕಲೆಕ್ಷನ್‌ಗೆ ಯಾವುದೇ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಚಿತ್ರತಂಡ ಈ ಸಿನಿಮಾವನ್ನು ಸದ್ದಿಲ್ಲದೆ ಒಟಿಟಿಗೆ ತಂದಿರುವ ಸಾಧ್ಯತೆಯಿದೆ.
ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲೂ ಈ ಸಿನಿಮಾ ದೊಡ್ಡ ಮೈಲಿಗಲ್ಲು ಸ್ಥಾಪಿಸಿದೆ. ಕೇವಲ 2 ರಿಂದ 3 ಕೋಟಿ ರೂಪಾಯಿಗಳ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ, ವಿಶ್ವದಾದ್ಯಂತ ಬರೋಬ್ಬರಿ 130 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ಅಚ್ಚರಿ ಮೂಡಿಸಿದೆ. ಸಣ್ಣ ಬಜೆಟ್‌ನ ಚಿತ್ರವೊಂದು ಇಷ್ಟೊಂದು ದೊಡ್ಡ ಕಲೆಕ್ಷನ್ ಮಾಡಿರುವುದು ಚಿತ್ರರಂಗದಲ್ಲೇ ಹೊಸ ದಾಖಲೆಯಾಗಿದೆ. 50 ದಿನ ಕಳೆದರೂ ಸಿನಿಮಾ ಲಕ್ಷಗಳಲ್ಲಿ ಕಲೆಕ್ಷನ್ ಮಾಡುತ್ತಿದೆ.
ಇದನ್ನೂ ಓದಿ: ‘ಪ್ರೇಮದ ಊರಲಿ’ ನಟಿ ಆರಾಧ್ಯಾ ನಾಯರ್ಗೆ ಮಲಯಾಳಂ ಸೀರಿಯಲ್ ಆಫರ್
ಥಿಯೇಟರ್‌ನಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರಿಗೆ ಈಗ ಒಟಿಟಿ ಮೂಲಕ ನೋಡುವ ಸುವರ್ಣಾವಕಾಶ ಸಿಕ್ಕಿದೆ. ಅಷ್ಟೇ ಅಲ್ಲದೆ, ಈಗಾಗಲೇ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡವರು ಕೂಡ ಮತ್ತೊಮ್ಮೆ ಕುಟುಂಬದವರ ಜೊತೆ ಕುಳಿತು ಎಂಜಾಯ್ ಮಾಡಬಹುದು.
‘ಪ್ರೇಮದ ಊರಲಿ’ ಸಿನಿಮಾ ಸದ್ಯ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಇಂದಿನಿಂದ (ನವೆಂಬರ್ 17) ಸಿನಿಮಾ ಪ್ರಸಾರ ಆರಂಭಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.