
ಪಾಪ್ ಲಿಜೆಂಡ್ ಮೈಖಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಬರೆಯಿತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಮೈಖಲ್’ ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನ ಪಿಕಾಕ್ ಹಬ್ನಲ್ಲಿ ವೀಕ್ಷಿಸಬಹುದಾಗಿದೆ.
ರಾಜ್ ಬಿ ಶೆಟ್ಟಿ ನಟಿಸಿರುವ ಮೊದಲ ಹಿಂದಿ ಸಿನಿಮಾ ‘ಬಂದರ್’ ಈ ವಾರ ಒಟಿಟಿಗೆ ಬಂದಿದೆ. ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಅನ್ನು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಒಂದು ಹಾಡಂತೂ ದೊಡ್ಡ ಹಿಟ್ ಆಗಿದೆ. ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಕೆಲಸದಿಂದ ಅಮಾನತ್ತಾಗಿರುವ ಎಎಸ್ಐ ಬಬಿತಾ ಸಿಂಗ್, ತನ್ನ ಸಹೋದರಿಯ ಸೀಮಂತದಲ್ಲಿ ಪಾಲ್ಗೊಳ್ಳಲು ಹಳ್ಳಿಗೆ ಹೋಗುತ್ತಾಳೆ. ಅಲ್ಲಿ ಆಕೆಯ ಬಾಲ್ಯದ ಗೆಳೆಯನ ಕೊಲೆ ಆಗುತ್ತದೆ. ಅಮಾನತ್ತಿನಲ್ಲಿದ್ದರೂ ಆ ಕೇಸಿನ ತನಿಖೆಯನ್ನು ಬಬಿತಾ ಮಾಡುತ್ತಾಳೆ ಆ ಹಾದಿಯಲ್ಲಿ ಎದುರಾಗುವ ಕಷ್ಟಗಳ ಕತೆಯನ್ನು ‘ಬಬಿತಾ ಸಿಂಗ್ ರಿಪೋರ್ಟಿಂಗ್’ ಸಿನಿಮಾ ಒಳಗೊಂಡಿದೆ. ನಿಮಿಷಾ ಸಜಯನ್ ಸಿನಿಮಾದ ನಾಯಕಿ. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಲಭ್ಯವಿದೆ.
ಆಲಿಯಾ ಭಟ್, ಶರ್ವರಿ ವಾಘ್ ನಟನೆಯ ‘ಆಲ್ಫಾ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಯಶ್ ರಾಜ್ ಫಿಲಮ್ಸ್ ಅವರ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಇದೊಂದು ಸ್ಪೈ ಯೂನಿವರ್ಸ್ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಈ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.
ಹಾಸ್ಯಮಯ ಲವ್ ಸ್ಟೋರಿ ಸಿನಿಮಾ ‘ಅನ್ಬೆ ಡಯಾನ’. ಚೆನ್ನೈನಲ್ಲಿ ವಾಸವಾಗಿರುವ ತೆಲುಗು ಕುಟುಂಬದ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಸೋನಿ ಲಿವ್ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಗಮನ ಸೆಳೆದಿದೆ.
ಪೃಥ್ವಿರಾಜ್ ಸುಕುಮಾರನ್ ಹಾಗೂ ಪಾರ್ವತಿ ಮೆನನ್ ಒಟ್ಟಿಗೆ ನಟಿಸಿರುವ ಮಲಯಾಳಿ ಸಿನಿಮಾ ‘ಐ ನೋಬಡಿ’ ಈ ವಾರ ಒಟಿಟಿಗೆ ಬಂದಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯ ಸನ್ನಿವೇಶದಲ್ಲಿ ಸಿಲುಕಿಕೊಂಡ ಮೇಲೆ ಅವನ ಬದುಕೇ ಬದಲಾಗಿ ಹೋಗುತ್ತದೆ. ಸಾಮಾನ್ಯನೊಬ್ಬನ ಅಸಾಮಾನ್ಯ ಕತೆ ‘ಐ ನೋಬಡಿ’. ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.