ಮತ್ತೆ ಮುಂದಕ್ಕೆ ಹೋಯ್ತು ಪ್ರಭಾಸ್ ಸಿನಿಮಾ ರಿಲೀಸ್

ಈ ವರ್ಷದ ಆರಂಭದಲ್ಲಿ ‘ರಾಜಾ ಸಾಬ್’ ಬಿಡುಗಡೆ ಆಯ್ತು. ಪ್ರಭಾಸ್ ಅಭಿಮಾನಿಗಳೇ ಸಿನಿಮಾ ಚೆನ್ನಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಆ ಬಳಿಕ ಇದೇ ವರ್ಷ ಪ್ರಭಾಸ್ ಇನ್ನೊಂದು ಸಿನಿಮಾ ಮೂಲಕ ಅಭಿಮಾನಿಗಳ ಅಸಮಾಧಾನ ದೂರ ಮಾಡುತ್ತಾರೆ ಎನ್ನಲಾಯ್ತು. ಅದೇ ಕಾರಣಕ್ಕೆ ‘ಫೌಜಿ’ ಸಿನಿಮಾದ ಚಿತ್ರೀಕರಣವನ್ನು ಲಘು-ಬಗನೆ ಮಾಡಲಾಗಿತ್ತು. ಇದೇ ವರ್ಷ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಈಗದು ಮುಂದೂಡಲಾಗಿದೆ.

ಮತ್ತೆ ಮುಂದಕ್ಕೆ ಹೋಯ್ತು ಪ್ರಭಾಸ್ ಸಿನಿಮಾ ರಿಲೀಸ್
Fauzi

Updated on: Sep 16, 2026 | 4:33 PM

ಮುಖ್ಯಾಂಶಗಳು

  • ಪ್ರಭಾಸ್ ನಟನೆಯ ಸಿನಿಮಾ ’ಫೌಜಿ’
  • ‘ಫೌಜಿ’ ಸಿನಿಮಾದ ಬಿಡುಗಡೆ ಮುಂದೂಡಿಕೆ ಸಾಧ್ಯತೆ
  • ಇದೇ ವರ್ಷದ ಅಂತ್ಯಕ್ಕೆ ಬಿಡುಗಡೆ ಆಗಬೇಕಿದ್ದ ಸಿನಿಮಾ

ಕಳೆದ ವರ್ಷ (2025) ಪ್ರಭಾಸ್ ನಾಯಕನಾಗಿ ನಟಿಸಿದ ಯಾವೊಂದು ಸಿನಿಮಾ ಸಹ ಬಿಡುಗಡೆ ಆಗಲಿಲ್ಲ. ಈ ವರ್ಷದ ಆರಂಭದಲ್ಲಿ ‘ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಯ್ತು, ಆದರೆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು. ಖುದ್ದು ಪ್ರಭಾಸ್ ಅಭಿಮಾನಿಗಳೇ ಸಿನಿಮಾ ಚೆನ್ನಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಆ ಬಳಿಕ ಇದೇ ವರ್ಷ ಪ್ರಭಾಸ್ ಇನ್ನೊಂದು ಸಿನಿಮಾ ಮೂಲಕ ಅಭಿಮಾನಿಗಳ ಅಸಮಾಧಾನ ದೂರ ಮಾಡುತ್ತಾರೆ ಎನ್ನಲಾಯ್ತು. ಅದೇ ಕಾರಣಕ್ಕೆ ‘ಫೌಜಿ’ ಸಿನಿಮಾದ ಚಿತ್ರೀಕರಣವನ್ನು ಲಘು-ಬಗನೆ ಮಾಡಲಾಗಿತ್ತು. ಇದೇ ವರ್ಷ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಈಗದು ಮುಂದೂಡಲಾಗಿದೆ.

ಪ್ರಭಾಸ್ ನಟನೆ ‘ಫೌಜಿ’ ಸಿನಿಮಾ ಇದೇ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಸಿನಿಮಾ ಚಿತ್ರತಂಡ ಅಧಿಕೃತವಾಗಿ ರಿಲೀಸ್ ಡೇಟ್ ಘೋಷಣೆ ಮಾಡಿರಲಿಲ್ಲವಾದರೂ ಬಹುತೇಕ ಡಿಸೆಂಬರ್ ತಿಂಗಳಲ್ಲೇ ಸಿನಿಮಾ ರಿಲೀಸ್ ಮಾಡಲು ತಯಾರಿ ನಡೆಸುತ್ತಿತ್ತು. ಆದರೆ ಈಗ ಕೆಲ ತಾಂತ್ರಿಕ ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದೆ.

ಪ್ರಭಾಸ್ ಅವರ ‘ಆದಿಪುರಷ್’ ಸಿನಿಮಾಕ್ಕೆ ಎದುರಾಗಿದ್ದ ಸಮಸ್ಯೆಯೇ ‘ಫೌಜಿ’ಗೂ ಎದುರಾಗಿದೆ ಎನ್ನಲಾಗುತ್ತಿದೆ. ಸಿನಿಮಾದ ಸಿಜಿಐ ಕೆಲಸ ತೃಪ್ತಿದಾಯಕವಾಗಿಲ್ಲ ಎಂಬ ಕಾರಣಕ್ಕೆ ಮತ್ತೊಮ್ಮೆ ಸಿಜಿಐ ಮಾಡಿಸಲು ಚಿತ್ರತಂಡ ಯೋಜಿಸಿದ್ದು, ಇದೇ ಕಾರಣದಿಂದಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿಧಾನ ಆಗಿವೆ. ಸಿನಿಮಾದ ಸಿಜಿಐ ಕೆಲಸ ನಿರ್ದೇಶಕ ರಘು ಹನುಪುಡಿ ಮತ್ತು ನಟ ಪ್ರಭಾಸ್ ಅವರಿಗೂ ಸಹ ತೃಪ್ತಿ ತಂದಿಲ್ಲ ಎನ್ನಲಾಗುತ್ತಿದೆ. ಅಲ್ಲದೆ, ಈಗ ‘ರಾಮಾಯಣ’ ಹಾಗೂ ಇನ್ನೂ ಕೆಲವು ಸಿನಿಮಾಗಳು ಅದ್ಭುತ ರೀತಿಯಲ್ಲಿ ಸಿಜಿಐ ಮಾಡಿ ತೋರಿಸಿದ್ದು, ಅದೇ ಗುಣಮಟ್ಟವನ್ನು ಪ್ರೇಕ್ಷಕರು ಎಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಅಲ್ಲದೆ, ಪ್ರಭಾಸ್ ಅವರ ‘ಆದಿಪುರುಷ್’ ಸಿನಿಮಾನಲ್ಲಿ ಕಳಪೆ ಸಿಜಿಐ ಕಾರಣಕ್ಕೆ ತೀವ್ರ ಟೀಕೆಯನ್ನು ಎದುರಿಸಿತ್ತು, ಹಾಗಾಗಿ ಈ ಬಾರಿ ಸಿಜಿಐನಲ್ಲಿ ಯಾವುದೇ ಕೊರತೆ ಇರದಂತೆ ಖುದ್ದು ಪ್ರಭಾಸ್ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಮೊದಲ ಬಾರಿಗೆ ಪ್ರಭಾಸ್ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಟ್, ಭವಿಷ್ಯ ನುಡಿದ ನಿರ್ದೇಶಕ

‘ಫೌಜಿ’ ಸಿನಿಮಾವನ್ನು ಮುಂದಿನ ವರ್ಷ ಜನವರಿ ತಿಂಗಳಲ್ಲಿ ವಿಶೇಷವಾಗಿ ಜನವರಿ ತಿಂಗಳ ಗಣರಾಜ್ಯೋತ್ಸವದಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ ಎನ್ನಲಾಗಿದೆ. ಈ ಸಿನಿಮಾವು ಭಾರತೀಯ ಸೈನಿಕರ ಕುರಿತಾದ ಕತೆಯನ್ನು ಒಳಗೊಂಡಿರುವ ಕಾರಣ ಗಣರಾಜ್ಯೋತ್ಸವ ದಿನ ಸೂಕ್ತವಾದ ದಿನವೆಂಬುದು ಚಿತ್ರತಂಡದ ಯೋಜನೆ. ಅಲ್ಲದೆ ಜನವರಿ 26ರಂದು ಬಿಡುಗಡೆಯಾದರೆ ಬಲವಾದ ರಜಾದಿನಗಳ ಲಾಭ ಸಿಗುವುದಲ್ಲದೆ, ಚಿತ್ರಮಂದಿರಗಳಲ್ಲಿ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಳ್ಳುವ ಸಾಧ್ಯತೆಯೂ ಇದೆ.

‘ಫೌಜಿ’ ಸಿನಿಮಾವನ್ನು ರಘು ಹನುಪುಡಿ ನಿರ್ದೇಶಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಸೀತಾ ರಾಮಂ’ ಸಿನಿಮಾ ಅನ್ನು ನಿರ್ದೇಶನ ಮಾಡಿದ್ದು ಇವರೇ. ಇನ್ನು ಈ ಸಿನಿಮಾನಲ್ಲಿ ಹೊಸ ನಟಿಯೊಬ್ಬರು ನಟನೆಗೆ ಪದಾರ್ಪಣೆ ಮಾಡಿದ್ದಾರೆ. ಸಿನಿಮಾ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Wed, 16 September 26

Loading...
Unable to load recommendations.
Follow Us