
ಪ್ರಶಾಂತ್ ನೀಲ್ (Prashant Neel) ಸಿನಿಮಾಗಳಲ್ಲಿ ಸಾಕಷ್ಟು ಆಕ್ಷನ್, ಹಿಂಸಾಚಾರದ ದೃಶ್ಯಗಳು ಇರುತ್ತವೆ. ಆದರೆ ಅವರ ಸಿನಿಮಾಗಳೆಂದೂ ಸಿಬಿಎಫ್ಸಿಯಲ್ಲಿ ಸಮಸ್ಯೆಗೆ ಒಳಪಟ್ಟಿಲ್ಲ. ಎಲ್ಲವನ್ನೂ ತುಸು ಮಿತಿಯಲ್ಲಿಯೇ ಚಿತ್ರೀಕರಣ ಮಾಡುತ್ತಾರೆ ಪ್ರಶಾಂತ್ ನೀಲ್. ಆದರೆ ಇತ್ತೀಚೆಗೆ ಪ್ರಶಾಂತ್ ನೀಲ್ ಪ್ರಸ್ತುತ ಪಡಿಸುತ್ತಿರುವ ಸಿನಿಮಾ ಒಂದು ಸಿಬಿಎಫ್ಸಿಯಲ್ಲಿ ಸಿಲುಕಿಕೊಂಡಿತ್ತು. ಸಿಬಿಎಫ್ಸಿಯು, ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿತ್ತು. ಆದರೆ ಇದೀಗ ಕೊನೆಗೂ ಸಿನಿಮಾಕ್ಕೆ ಪ್ರಮಾಣ ಪತ್ರ ದೊರೆತಿದೆ. ಯಾವುದು ಆ ಸಿನಿಮಾ? ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದು ಏಕೆ?
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿ, ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡುತ್ತಿರುವ ‘418’ ಹೆಸರಿನ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ ಈ ಸಿನಿಮಾಕ್ಕೆ ಸಿಬಿಎಫ್ಸಿಯು ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿತ್ತು. ‘418’ ಒಂದು ಹಾರರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಅತಿಯಾಗಿ ಹೆದರಿಸುವ ದೃಶ್ಯಗಳಿವೆ. ಸಿನಿಮಾನಲ್ಲಿರುವ ಹಾರರ್ ದೃಶ್ಯಗಳು ಎಲ್ಲ ವಯೋವರ್ಗದ ಪ್ರೇಕ್ಷಕರಿಗೂ ಸಮಸ್ಯೆ ಉಂಟು ಮಾಡಬಲ್ಲವು ಎಂಬ ಕಾರಣ ನೀಡಿ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಿರಲಿಲ್ಲ. ಆದರೆ ಇದೀಗ ಕೆಲ ಬದಲಾವಣೆಗಳ ಬಳಿಕ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ.
‘418’ ಸಿಸಿನಿಮಾವನ್ನು ಕೀರ್ತನ್ ನಾಡಗೌಡ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿದ್ದಾರೆ. ಇದೊಂದು ಬಲು ಗಂಭೀರ ಹಾರರ್ ಥ್ರಿಲ್ಲರ್ ಆಗಿದ್ದು, ಸಿನಿಮಾನಲ್ಲಿ ಕೇವಲ ಹಾರರ್ ಮತ್ತು ಥ್ರಿಲ್ಲರ್ ಅಂಶಗಳು ಮಾತ್ರವೇ ಇವೆಯಂತೆ. ಇತ್ತೀಚೆಗೆ ಬರುತ್ತಿರುವ ಹಾರರ್ ಸಿನಿಮಾಗಳಲ್ಲಿ ಕಾಮಿಡಿ, ರೊಮ್ಯಾನ್ಸ್ ಇನ್ನಿತರೆ ಅಂಶಗಳನ್ನು ಸೇರಿಸಲಾಗುತ್ತದೆ. ಆದರೆ ಈ ಸಿನಿಮಾನಲ್ಲಿ ಮೊದಲಿನಿಂದ ಕೊನೆಯ ವರೆಗೆ ಕೇವಲ ಹಾರರ್ ಅಂಶಗಳೇ ಇವೆ ಎನ್ನಲಾಗಿದೆ. ತೀರಾ ಭಯಗೊಳಿಸುವ ದೃಶ್ಯಗಳು, ವಾತಾವರಣ, ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತಗಳಿಂದಾಗಿ ಸಿನಿಮಾ ಪ್ರೇಕ್ಷಕರನ್ನು ಸಾಕಷ್ಟು ಭೀತಿಗೆ ಒಳಪಡಿಸುತ್ತದೆ ಎನ್ನಲಾಗಿದೆ.
ಇದನ್ನೂ ಓದಿ:‘ಎಲ್ಲ ರೆಡಿ ಇದೆ’: ‘ಕೆಜಿಎಫ್ 3’ ಬಗ್ಗೆ ಪ್ರಶಾಂತ್ ನೀಲ್ ಮಾತು
ಸೆನ್ಸಾರ್ ಸಮಸ್ಯೆ ಉಂಟಾದ ಬಳಿಕ ಚಿತ್ರತಂಡವು ಸಾಕಷ್ಟು ದೃಶ್ಯಗಳನ್ನು ಬದಲಾಯಿಸಿ, ಹಿನ್ನೆಲೆ ಸಂಗೀತಗಳನ್ನು ಕಡಿಮೆ ಮಾಡಿ ಒಟ್ಟಾರೆಯಾಗಿ ತುಸು ಹಾರರ್ ಅಂಶಗಳನ್ನು ಕಡಿಮೆ ಮಾಡಿದ್ದು, ಇದೇ ಕಾರಣಕ್ಕೆ ಇದೀಗ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿದೆ. ಸಿನಿಮಾ ಸೆಪ್ಟೆಂಬರ್ 18ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಪೋಸ್ಟರ್ಗಳು ಸಹ ಸಾಕಷ್ಟು ಭಯಾನಕವಾಗಿವೆ. ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತ ಬಗ್ಗೆ ಬಿಡುಗಡೆ ಆದ ಪೋಸ್ಟನಲ್ಲಿ ಸಹ, ವ್ಯಕ್ತಿಯೊಬ್ಬ ರಕ್ತದಲ್ಲಿ ‘ಎ’ ಬರೆದಿರುವ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಪ್ರಶಾಂತ್ ನೀಲ್ ಶಿಷ್ಯ ನಿರ್ದೇಶಿಸಿರುವ ಸಿನಿಮಾ ಇದೆನ್ನಲಾಗುತ್ತಿದೆ.
ಪ್ರಶಾಂತ್ ನೀಲ್ ಪ್ರಸ್ತುತ ಜೂ ಎನ್ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದಾದ ಬಳಿಕ ಅವರು ‘ಸಲಾರ್ 2’ ನಿರ್ದೇಶಿಸಲಿದ್ದಾರೆ. ತಮಿಳಿನ ಅಜಿತ್ ಅವರೊಟ್ಟಿಗೆ ಸಿನಿಮಾ ಒಂದನ್ನು ಮಾಡಲಿದ್ದಾರೆ. ಅದಾದ ಬಳಿಕ ‘ಕೆಜಿಎಫ್ 3’ ಸಿನಿಮಾ ಅನ್ನು ಅವರು ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ