AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲ ರೆಡಿ ಇದೆ’: ‘ಕೆಜಿಎಫ್ 3’ ಬಗ್ಗೆ ಪ್ರಶಾಂತ್ ನೀಲ್ ಮಾತು

‘ಕೆಜಿಎಫ್ 2’ ಸಿನಿಮಾ 2022 ರ ಏಪ್ರಿಲ್​ನಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದ ಅಂತ್ಯದಲ್ಲಿಯೇ ‘ಕೆಜಿಎಫ್ 3’ ಸಿನಿಮಾ ಬರುವ ಬಗ್ಗೆ ಸುಳಿವನ್ನು ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದರು. ಆಗಿನಿಂದಲೂ ಅಭಿಮಾನಿಗಳು ‘ಕೆಜಿಎಫ್ 3’ ಸಿನಿಮಾ ಬಗ್ಗೆ ಕೇಳುತ್ತಲೇ ಇದ್ದಾರೆ. ಆದರೆ ಪ್ರಶಾಂತ್ ನೀಲ್ ಪರಭಾಷೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಖುದ್ದು ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಎಲ್ಲ ರೆಡಿ ಇದೆ’: ‘ಕೆಜಿಎಫ್ 3’ ಬಗ್ಗೆ ಪ್ರಶಾಂತ್ ನೀಲ್ ಮಾತು
Yash Kgf3
ಮಂಜುನಾಥ ಸಿ.
|

Updated on: Sep 08, 2026 | 11:18 AM

Share

ಮುಖ್ಯಾಂಶಗಳು

  • ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾಗಳು.
  • ‘ಕೆಜಿಎಫ್ 3’ ಬರಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.
  • ಇದೀಗ ಖುದ್ದು ಪ್ರಶಾಂತ್ ನೀಲ್ ‘ಕೆಜಿಎಫ್ 3’ ಬಗ್ಗೆ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಸಿನಿಮಾಗಳು ‘ಕೆಜಿಎಫ್’ ಮತ್ತು ‘ಕೆಜಿಎಫ್ 2’. ಯಶ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ದಾಖಲೆಯನ್ನೇ ಬರೆದಿವೆ. ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾಗಳು ಇವು. ‘ಕೆಜಿಎಫ್ 2’ ಸಿನಿಮಾ 2022 ರ ಏಪ್ರಿಲ್​ನಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದ ಅಂತ್ಯದಲ್ಲಿಯೇ ‘ಕೆಜಿಎಫ್ 3’ ಸಿನಿಮಾ ಬರುವ ಬಗ್ಗೆ ಸುಳಿವನ್ನು ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದರು. ಆಗಿನಿಂದಲೂ ಅಭಿಮಾನಿಗಳು ‘ಕೆಜಿಎಫ್ 3’ ಸಿನಿಮಾ ಬಗ್ಗೆ ಕೇಳುತ್ತಲೇ ಇದ್ದಾರೆ. ಆದರೆ ಪ್ರಶಾಂತ್ ನೀಲ್ ಪರಭಾಷೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಖುದ್ದು ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ‘ಕೆಜಿಎಫ್ 3’ ಖಂಡಿತ ಆಗುತ್ತದೆ. ‘ಕೆಜಿಎಫ್ 3’ ಸಿನಿಮಾದ ಚಿತ್ರಕತೆ ಈಗಾಗಲೇ ರೆಡಿ ಆಗಿದೆ. ‘ಕೆಜಿಎಫ್ 3’ ಸಿನಿಮಾದ ಕತೆ ರೆಡಿ ಆಗಿದ್ದ ಕಾರಣಕ್ಕೆಯೇ ನಾವು ‘ಕೆಜಿಎಫ್ 2’ ಸಿನಿಮಾದ ಅಂತ್ಯದಲ್ಲಿ ನಾವು ‘ಕೆಜಿಫ್ 3’ ಸಿನಿಮಾ ಬರಲಿದೆ ಎಂದು ಹೇಳಿದ್ದೇವೆ. ನಾವು ಕೆಲವು ವಿಷಯಗಳನ್ನು ಹೊಂದಿಸಕೊಳ್ಳಬೇಕಿದೆ. ಯಶ್ ಸಹ ಬಿಡುವು ಮಾಡಿಕೊಳ್ಳಬೇಕಿದೆ’ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ಆ ಮೂಲಕ ಕೆಜಿಎಫ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನು, ಭರವಸೆಯನ್ನು ಪ್ರಶಾಂತ್ ನೀಲ್ ಮೂಡಿಸಿದ್ದಾರೆ.

‘ಕೆಜಿಎಫ್ 3’ ಸಿನಿಮಾ ಆಗುವುದಿಲ್ಲ ಎಂಬ ಅನುಮಾನ ಮೂಡಿತ್ತು. ಪ್ರಶಾಂತ್ ನೀಲ್ ಅವರು ಮುಂದಿನ ಮೂರು ನಾಲ್ಕು ವರ್ಷಗಳ ಕಾಲ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಕಾರಣದಿಂದ ‘ಕೆಜಿಎಫ್ 3’ ಅನಿಮಾನ ಎನ್ನಲಾಗಿತ್ತು. ಪ್ರಶಾಂತ್ ನೀಲ್ ಪ್ರಸ್ತುತ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ‘ಸಲಾರ್ 2’ ಸಿನಿಮಾ ನಿರ್ದೇಶಿಸಲಿದ್ದಾರೆ. ಅದರ ಬಳಿಕ ತಮಿಳಿನಲ್ಲಿ ಅಜಿತ್ ನಟನೆಯ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಾದ ಬಳಿಕ ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಇವುಗಳೆಲ್ಲ ಮುಗಿದ ಬಳಿಕವಷ್ಟೆ ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 3’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಸಿನಿಮಾದಲ್ಲೂ ‘ಕಾಮನ್ ಮ್ಯಾನ್’ ಸದ್ದು

ಇನ್ನು ಯಶ್ ಅವರು ‘ಟಾಕ್ಸಿಕ್’ ಮುಗಿಸಿ ಸಿನಿಮಾ ರಿಲೀಸ್ ಸಹ ಆಗಿದೆ. ಆದರೆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಆಗಿಲ್ಲ. ‘ರಾಮಾಯಣ’ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಸಿನಿಮಾದ ಬಿಡುಗಡೆ ಬಾಕಿ ಇದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಯಶ್ ಭಾಗಿ ಆಗಬೇಕಿದ್ದು, ಸಿನಿಮಾ ನವೆಂಬರ್​​ನಲ್ಲಿ ರಿಲೀಸ್ ಆಗಲಿದೆ. ಯಶ್ ಅವರು ಈ ವರ್ಷದ ಅಂತ್ಯಕ್ಕೆ ಫ್ರೀ ಆಗಲಿದ್ದಾರೆ ಆದರೆ ಪ್ರಶಾಂತ್ ನೀಲ್ ಮುಂದಿನ ಮೂರು-ನಾಲ್ಕು ವರ್ಷಗಳ ಕಾಲ ಬ್ಯುಸಿ ಇರಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us