‘ಪ್ರೇಮದ ಊರಲಿ’ ಟೈಟಲ್ ಟ್ರ್ಯಾಕ್ ಹಾಡಲು ಮಕ್ಕಳನ್ನೇ ಆಯ್ಕೆ ಮಾಡಿದ್ದೇಕೆ? ಗುಟ್ಟು ಬಿಚ್ಚಿಟ್ಟ ಸುನಾದ್

'ಪ್ರೇಮದ ಊರಲಿ' ಚಿತ್ರದ ಯಶಸ್ವಿ ಶೀರ್ಷಿಕೆ ಗೀತೆಗೆ ಶಾಲಾ ಮಕ್ಕಳ ಬಳಿ ಹಾಡಿಸಿದ ರಹಸ್ಯವನ್ನು ಸಂಗೀತ ನಿರ್ದೇಶಕ ಸುನಾದ್ ಗೌತಮ್ ಬಿಚ್ಚಿಟ್ಟಿದ್ದಾರೆ. ಕಥೆಗೆ ಹೊಂದುವಂತೆ ಹಾಗೂ ಎಲ್ಲರಿಗೂ ಸುಲಭವಾಗಿ ಇಷ್ಟವಾಗಲಿ ಎಂಬ ಉದ್ದೇಶದಿಂದ ನಿರ್ದೇಶಕರ ಜೊತೆ ಚರ್ಚಿಸಿ ಕಾರ್ಕಳದ ಜೆಸಿ ಶಾಲೆಯ ಮಕ್ಕಳಿಂದ ಹಾಡಿಸಿದ್ದಾಗಿ ಅವರು ತಿಳಿಸಿದ್ದಾರೆ.

‘ಪ್ರೇಮದ ಊರಲಿ’ ಟೈಟಲ್ ಟ್ರ್ಯಾಕ್ ಹಾಡಲು ಮಕ್ಕಳನ್ನೇ ಆಯ್ಕೆ ಮಾಡಿದ್ದೇಕೆ? ಗುಟ್ಟು ಬಿಚ್ಚಿಟ್ಟ ಸುನಾದ್
ಪ್ರೇಮದ ಊರಲಿ
Edited By:

Updated on: Oct 07, 2026 | 2:47 PM

ಮುಖ್ಯಾಂಶಗಳು

  • 'ಪ್ರೇಮದ ಊರಲಿ' ಸಕ್ಸಸ್‌ಗೆ ಮ್ಯೂಸಿಕ್ ಮೆರುಗು
  • ಹಿಟ್ ಶೀರ್ಷಿಕೆ ಗೀತೆಯ ಗುಟ್ಟು ರಟ್ಟು ಮಾಡಿದ ಸುನಾದ್
  • ಕಾರ್ಕಳದ ಚೋಟಾ ಸಿಂಗರ್ಸ್ ಕಮಾಲ್

ಹಾಡುಗಳು ಹಿಟ್ ಆದರೆ, ಸಿನಿಮಾ ಒಂದು ಹಂತಕ್ಕೆ ಯಶಸ್ಸು ಕಂಡಂತೆ ಎಂಬ ಮಾತು ಪ್ರಚಲಿತದಲ್ಲಿದೆ. ಇದು ‘ಪ್ರೇಮದ ಊರಲಿ’ ಸಿನಿಮಾ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ. ಮನೋಜ್ ಕುಮಾರ್ ಅವರು ಹೆಣೆದ ಗಟ್ಟಿ ಪ್ರೇಮಕಥೆಗೆ ಸುನಾದ್ ಗೌತಮ್ ಮ್ಯೂಸಿಕ್ ಉತ್ತಮ ಸಾತ್ ಕೊಟ್ಟಿದೆ. ‘ಪ್ರೇಮದ ಊರಲಿ’ ಚಿತ್ರದ ಹಾಡುಗಳು ದೊಡ್ಡ ಗೆಲುವು ಕಂಡಿವೆ. ಸಿನಿಮಾದ ಟೈಟಲ್ ಟ್ರ್ಯಾಕ್​ನ ಮಕ್ಕಳ ಬಳಿ ಹಾಡಿಸಲಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಸುನಾದ್ ವಿವರಿಸಿದ್ದಾರೆ. ಟಿವಿ9 ಕನ್ನಡ ಡಿಜಿಟಲ್ ಜೊತೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ರಿವೀಲ್ ಮಾಡಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿ ಸೇರಿದಂತೆ ಹಲವು ಹಿಟ್ ಸೀರಿಯಲ್​ಗಳಿಗೆ ಸುನಾದ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ಹಲವು ವರ್ಷ ಆ್ಯಕ್ಟಿವ್ ಆಗಿದ್ದರೂ ಸಿನಿಮಾ ರಂಗದಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಈ ಕೊರಗನ್ನು ‘ಪ್ರೇಮದ ಊರಲಿ’ ಸಿನಿಮಾ ನೀಗಿಸಿದೆ. ಈ ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ. ಚಿತ್ರ ಯಶಸ್ಸು ಕಾಣಲು ಹಾಡಿನ ಪಾತ್ರವೂ ತುಂಬಾನೇ ದೊಡ್ಡದಿದೆ.

‘ಪ್ರೇಮದ ಊರಲಿ’ ಸಿನಿಮಾದ ಟೈಟಲ್ ಟ್ರ್ಯಾಕ್​ ಹಾಡಿದ್ದು ಶಾಲಾ ಮಕ್ಕಳು. ಅವರು ಇದಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ‘ಈ ಸಿನಿಮಾದ ಬಾನಲಿ ಜಾರಿದ ಹಾಡನ್ನು ಮಕ್ಕಳ ಬಳಿ ಹಾಡಿಸಬೇಕು ಎಂಬ ಪ್ಲ್ಯಾನ್ ಇತ್ತು. ನಂತರ ಟೈಟಲ್ ಟ್ರ್ಯಾಕ್​ಗೆ ಸೇಮ್ ಟ್ಯೂನ್ ಬಳಕೆ ಮಾಡೋದು ಬೇಡ ಎಂದು ನಾವು ನಿರ್ಧರಿಸಿದೆವು. ಆ ಹಾಡನ್ನು ಮಕ್ಕಳ ಬಳಿ ಹಾಡಿಸಬೇಕು ಎಂದು ನಾನು ಹಾಗೂ ನಿರ್ದೇಶಕರು ಒಟ್ಟಾಗಿ ನಿರ್ಧರಿಸಿದೆವು. ಮಕ್ಕಳು ಹಾಡಿದರೆ ಎಲ್ಲರಿಗೂ ಇಷ್ಟ ಆಗುತ್ತದೆ. ಹಾಡೋಕೆ ಸುಲಭ ಆಗುತ್ತದೆ ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ಸುನಾದ್.

ಈ ಹಾಡನ್ನು ಹಾಡಿದ್ದು ಕಾರ್ಕಳದ ಜೆಸಿ ಶಾಲಾ ಮಕ್ಕಳು. ‘ಜೆಸಿ ಶಾಲೆಯಲ್ಲಿ ವಂದನಾ ರೈ ಹೆಸರಿನ ಟೀಚರ್ ಇದ್ದಾರೆ. ಅವರಿಗೆ ಕರೆ ಮಾಡಿ ನಾನು ಉತ್ತಮವಾಗಿ ಹಾಡುವ ಮಕ್ಕಳು ಬೇಕು ಎಂದು ಹೇಳಿದೆ. ಹೀಗೆ ಆಯ್ಕೆ ಆದ ಮಕ್ಕಳಿಗೆ ತರಬೇತಿ ಕೊಟ್ಟು ಹಾಡಿಸಿದ್ದೇವೆ’ ಎಂದು ಸುನಾದ್ ಹೇಳುತ್ತಾರೆ.

ಇದನ್ನೂ ಓದಿ: ತೆಲುಗು ರಾಜ್ಯಗಳಲ್ಲೂ ‘ಪ್ರೇಮದ ಊರಲಿ’ ಮ್ಯಾಜಿಕ್, ‘ಪ್ಯಾರಡೈಸ್’ ಅನ್ನೂ ಹಿಂದಿಕ್ಕಿದ ಕನ್ನಡ ಸಿನಿಮಾ

ಮುಂದಿನ ಯೋಜನೆ ಬಗ್ಗೆ ಸುನಾದ್ ಮಾತನಾಡಿದ್ದಾರೆ. ‘ಎರಡು ಸಿನಿಮಾ ಕಮಿಟ್ ಆಗಿದ್ದೇನೆ. ರುಕ್ಮಿಣಿ ರಾಧಾಕೃಷ್ಣ ಅಂತ ಸಿನಿಮಾ ಇದೆ. ಸಿದ್ ಶ್ರೀರಾಮ್ ಒಂದನ್ನು ಹಾಡಿದ್ದು, ಅದು ಎಲ್ಲರಿಗೂ ಇಷ್ಟ ಆಗಬಹುದು ಎಂದು ನಿರೀಕ್ಷಿಸಿದ್ದೇನೆ. ಹೊಸ ಜೀವನ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದೇನೆ. ಹೊಸ ಪ್ರಾಜೆಕ್ಟ್​​ಗಳು ತುಂಬಾನೇ ಬರುತ್ತಿವೆ’ ಎನ್ನುವ ಅವರು, ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುವ ಪ್ಲ್ಯಾನ್​ನಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:44 pm, Wed, 7 October 26

TV9 Web

TV9 Kannada

Read More
Loading...
Unable to load recommendations.
Follow Us