‘ಪುಷ್ಪ 2’ ತಂಡಕ್ಕೆ ‘ಎದ್ದೇಳು ಮಂಜುನಾಥ..’ ಸಾಂಗ್ ಕೇಳಿಸಿದ ಅಲ್ಲು ಅರ್ಜುನ್ ಅಭಿಮಾನಿಗಳು

ಕೆಲವು ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿರುತ್ತವೆ. ಅದರೆ ಬಗ್ಗೆ ಯಾವುದೇ ಅಪ್​ಡೇಟ್ ಸಿಗದೇ ಇದ್ದರೆ ಫ್ಯಾನ್ಸ್ ಸಿಟ್ಟಾಗುತ್ತಾರೆ. ಈಗ ಅಲ್ಲು ಅರ್ಜುನ್ ಫ್ಯಾನ್ಸ್​ ಕೂಡ ಕುಪಿತಗೊಂಡಿದ್ದಾರೆ.

‘ಪುಷ್ಪ 2’ ತಂಡಕ್ಕೆ ‘ಎದ್ದೇಳು ಮಂಜುನಾಥ..’ ಸಾಂಗ್ ಕೇಳಿಸಿದ ಅಲ್ಲು ಅರ್ಜುನ್ ಅಭಿಮಾನಿಗಳು
ಫಹಾದ್-ಅಲ್ಲು ಅರ್ಜುನ್

Updated on: Aug 06, 2023 | 8:09 AM

‘ಪುಷ್ಪ’ ಸಿನಿಮಾ (Pushpa Movie) ರಿಲೀಸ್ ಆಗಿದ್ದು 2021ರ ಡಿಸೆಂಬರ್ ತಿಂಗಳಲ್ಲಿ. ಈ ಚಿತ್ರ ಬಿಡುಗಡೆ ಆಗಿ ಹಲವು ದಾಖಲೆಗಳನ್ನು ಬರೆದಿತ್ತು. ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷದ ಮೇಲಾಗಿದೆ. ಆದರೆ, ‘ಪುಷ್ಪ 2’ ಸಿನಿಮಾ ಬಗ್ಗೆ ಚಿತ್ರತಂಡದಿಂದ  ಸರಿಯಾಗಿ ಯಾವುದೇ ಅಪ್​ಡೇಟ್ ಸಿಗುತ್ತಿಲ್ಲ. ಚಿತ್ರದ ಶೂಟಿಂಗ್ ಯಾವ ಹಂತದಲ್ಲಿದೆ? ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬಿತ್ಯಾದಿ ವಿಚಾರಗಳನ್ನು ತಂಡ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ‘ಪುಷ್ಪ 2’ ಟೀಂ ಹಾಗೂ ಮೈತ್ರಿ ಮೂವೀ ಮೇಕರ್ಸ್​ನ ಟ್ರೋಲ್ ಮಾಡಲಾಗುತ್ತಿದೆ.

ಕೆಲವು ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿರುತ್ತವೆ. ಅದರೆ ಬಗ್ಗೆ ಯಾವುದೇ ಅಪ್​ಡೇಟ್ ಸಿಗದೇ ಇದ್ದರೆ ಫ್ಯಾನ್ಸ್ ಸಿಟ್ಟಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಲು ಸಾಲು ಟ್ವೀಟ್ ಮಾಡುತ್ತಾರೆ. ಈಗ ಅಲ್ಲು ಅರ್ಜುನ್ ಫ್ಯಾನ್ಸ್​ ಸಿಟ್ಟಾಗಿದ್ದಾರೆ. ‘WakeUpTeamPushpa’ ಎಂದು ಟ್ವೀಟ್ ಮಾಡುತ್ತಿದ್ದಾರೆ. ಅಂದರೆ, ಪುಷ್ಪ ತಂಡದವರೇ ಎದ್ದೇಳಿ ಎಂದರ್ಥ. ಈ ಹ್ಯಾಶ್​​ಟ್ಯಾಗ್ ಅಡಿಯಲ್ಲಿ ಸಾವಿರಾರು ಟ್ವೀಟ್​ಗಳನ್ನು ಮಾಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಟ್ವೀಟ್​ಗಳು ಹರಿದಾಡಿವೆ. ಸಾಕಷ್ಟು ಮಂದಿ ಮೈತ್ರಿ ಮೂವೀ ಮೇಕರ್ಸ್​ನ ಪ್ರಶ್ನೆ ಮಾಡಿದ್ದಾರೆ. ಪ್ರಭಾಸ್ ಅಭಿಮಾನಿಗಳು ಈ ಮೊದಲು ಈ ರೀತಿ ಮಾಡುತ್ತಿದ್ದರು. ಪ್ರಭಾಸ್ ಸಿನಿಮಾ ಬಗ್ಗೆ ಅಪ್​​ಡೇಟ್ ಸಿಕ್ಕಿಲ್ಲ ಎಂದರೆ ಈ ರೀತಿಯ ಟ್ವೀಟ್​ಗಳನ್ನು ಮಾಡುತ್ತಿದ್ದರು. ಈ ಟ್ರೆಂಡ್​ನ ಅಲ್ಲು ಅರ್ಜುನ್ ಫ್ಯಾನ್ಸ್ ಕೂಡ ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರೀಕರಣಕ್ಕೆ ತೆರಳಿದ್ದ ಕಲಾವಿದರ ಬಸ್​ ಅಪಘಾತ; ಫೋಟೋ ನೋಡಿ ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗಾಬರಿ

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇವರಿಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಸುಕುಮಾರ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಫಹಾದ್ ಫಾಸಿಲ್ ಸೇರಿ ಅನೇಕ ಕಲಾವಿದರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:04 am, Sun, 6 August 23

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us