Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಸಿನಿಮಾ ಪಂಚ್ ಡೈಲಾಗ್ ಲೀಕ್: ‘ತಗ್ಗೇದೆ ಲೇ’ನಷ್ಟು ಪಂಚ್ ಇಲ್ಲವೇ?

Allu Arjun: 'ಪುಷ್ಪ' ಸಿನಿಮಾದ 'ತಗ್ಗೇದೆ ಲೇ' ಸಂಭಾಷಣೆ ಸಖತ್ ವೈರಲ್ ಆಗಿತ್ತು, ಇದೀಗ 'ಪುಷ್ಪ 2' ಸಿನಿಮಾದ ಪಂಚ್ ಡೈಲಾಗ್ ಲೀಕ್ ಆಗಿದೆ.

'ಪುಷ್ಪ 2' ಸಿನಿಮಾ ಪಂಚ್ ಡೈಲಾಗ್ ಲೀಕ್: 'ತಗ್ಗೇದೆ ಲೇ'ನಷ್ಟು ಪಂಚ್ ಇಲ್ಲವೇ?
ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: Jul 21, 2023 | 7:04 PM

ಕೋವಿಡ್ (COIVD) ಬಳಿಕ ದಕ್ಷಿಣದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಇರುವ ದೊಡ್ಡ ಮಾರುಕಟ್ಟೆಯ ಪರಿಚಯ ಮಾಡಿಕೊಟ್ಟಿದ್ದು ‘ಪುಷ್ಪ‘ (Pushpa) ಸಿನಿಮಾ. ತೆಲುಗು ರಾಜ್ಯಗಳಲ್ಲಿ ಗಳಿಸಿದ್ದಷ್ಟೆ ದೊಡ್ಡ ಮೊತ್ತವನ್ನು ಬಾಲಿವುಡ್ ಪ್ರದೇಶದಲ್ಲಿಯೂ ಈ ಸಿನಿಮಾ ಗಳಿಸಿತ್ತು. ‘ಪುಷ್ಪ’ ಸಿನಿಮಾದ ಉದಾಹರಣೆ ತೋರಿಸಿ, ಇಂಥಹಾ ಕತೆಗಳು ನಮಗೂ ಬೇಕೆಂದು ಬಾಲಿವುಡ್ ಅನ್ನು ಅಲ್ಲಿನ ಪ್ರೇಕ್ಷಕರು ಒತ್ತಾಯಿಸಿದ್ದರು. ಅಷ್ಟು ಮೋಡಿ ಮಾಡಿತ್ತು ಆ ಸಿನಿಮಾ. ಅದರಲ್ಲಿಯೂ ಸಿನಿಮಾದ ಹಾಡುಗಳು, ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಕುವ ಸರಳ ಸ್ಟೆಪ್ಪು, ‘ತಗ್ಗೇದೆ ಲೇ’ ಡೈಲಾಗ್ ಮತ್ತು ಅದಕ್ಕೆ ಅಲ್ಲು ತೋರುವ ಮ್ಯಾನರಿಸಂ ಅಂತೂ ಸೂಪರ್ ವೈರಲ್ ಆಗಿತ್ತು.

‘ತಗ್ಗೇದೆ ಲೇ’ ಡೈಲಾಗ್ ಹಿಂದಿಯಲ್ಲಿ ‘ಜುಕೂಂಗ ನೈ ಸಾಲ’ ಎಂದು ಕನ್ನಡದಲ್ಲಿ ‘ತಗ್ಗೋದೆ ಇಲ್ಲ’ ಎಂದು ವೈರಲ್ ಆಗಿದ್ದವು. ಇದೀಗ ‘ಪುಷ್ಪ 2’ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. ಇದರ ಬೆನ್ನಲ್ಲೆ ಸಿನಿಮಾದ ಪಂಚ್ ಡೈಲಾಗ್ ಲೀಕ್ ಆಗಿದೆ. ಲೀಕ್ ಮಾಡಿರುವುದು ಸ್ವತಃ ಅಲ್ಲು ಅರ್ಜುನ್. ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಲ್ಲು ಅರ್ಜುನ್, ‘ಪುಷ್ಪ 2′ ಬಗ್ಗೆ ಮಾತನಾಡಲು ನಾನಿಲ್ಲಿ ಬಂದಿಲ್ಲ ಆದರೆ ಡೈಲಾಗ್ ಹೇಳಲಾರದೆ ಇರಲಾಗುತ್ತಿಲ್ಲ ಎಂದು ಸಿನಿಮಾದ ಪಂಚ್ ಡೈಲಾಗ್ ಅನ್ನು ವಗಾಯಿಸಿದ್ದಾರೆ.

”ಈಡಂತ ಜರುತ್ತನ್ನದಿ ಒಗಟೇ ರೂಲ್​ಮಿದ ಜರುಗುತಾ ಉಂಡಾದಿ, ಪುಷ್ಪಾಗಾಡಿ ರೂಲ್’ (ಇಲ್ಲೆಲ್ಲ ನಡೀತಿರೋದು ಒಂದೇ ರೂಲ್​ ಮೇಲೆ ಅದು ಪುಷ್ಪನ ರೂಲ್) ಎಂಬ ಡೈಲಾಗ್ ಹೊಡೆದಿದ್ದಾರೆ. ‘ಪುಷ್ಪ 2’ ಸಿನಿಮಾಕ್ಕೆ ಟ್ಯಾಗ್​ಲೈನ್ ಸಹ ‘ದಿ ರೂಲ್’ ಎಂದೇ ಇದ್ದು, ಅದರ ಆಧಾರದಲ್ಲಿಯೇ ಪಂಚ್ ಡೈಲಾಗ್ ಬರೆದಂತಿದೆ ನಿರ್ದೇಶಕ ಸುಕುಮಾರ್.

ಇದನ್ನೂ ಓದಿ:‘ಪುಷ್ಪ 2’ ಚಿತ್ರದಲ್ಲಿ ರಣವೀರ್ ಸಿಂಗ್ ಅತಿಥಿ ಪಾತ್ರ? ಪೊಲೀಸ್ ಆಗಿ ಬರ್ತಾರೆ ಬಾಲಿವುಡ್ ಹೀರೋ

‘ಪುಷ್ಪ’ ಸಿನಿಮಾದಲ್ಲಿ ಕೂಲಿ ಆಳಾಗಿ ದುಡಿಯುವ ವ್ಯಕ್ತಿಯಿಂದ ಆರಂಭಿಸಿ ಕೊನೆಗೆ ರಕ್ತಚಂದನ ಸಾಗಾಟ ಮಾಡುವ ಗುಂಪಿನ ನಾಯಕನಾಗಿ ಪುಷ್ಪ ಬೆಳೆದಿದ್ದ. ‘ಪುಷ್ಪ 2’ ಸಿನಿಮಾದಲ್ಲಿ ಪುಷ್ಪ ಇನ್ನೂ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದು, ಇಡೀ ಜಿಲ್ಲೆಯ ಜನರ ಮೆಚ್ಚಿನ ನಾಯಕ ಆಗಿಬಿಟ್ಟಿದ್ದಾನೆ. ರಕ್ತ ಚಂದನ ಕಳ್ಳಸಾಗಣೆಯಿಂದ ಬಂದ ಹಣದಲ್ಲಿ ಬಡ ಜನರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾನೆ. ಇನ್ನೂ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾನೆ. ಆದರೆ ಅವನಿಗೆ ವಿರೋಧಿಗಳು ಸಹ ದೊಡ್ಡ ಸಂಖ್ಯೆಯಲ್ಲಿ ಹುಟ್ಟಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆ ಆದ ಟ್ರೈಲರ್​ನಿಂದ ‘ಪುಷ್ಪ 2’ ಸಿನಿಮಾದ ಕೆಲವು ಝಲಕ್​ಗಳನ್ನು ನಿರ್ದೇಶಕ ಸುಕುಮಾರ್ ನೀಡಿದ್ದರು.

‘ಪುಷ್ಪ 2’ ಸಿನಿಮಾದಲ್ಲಿ ಪುಷ್ಪ ಜೈಲುಪಾಲಾಗಿ ಅಲ್ಲಿಂದ ತಪ್ಪಿಸಿಕೊಂಡು ಅರಣ್ಯದಲ್ಲಿ ಒಬ್ಬನೇ ಅಲೆಯುತ್ತಿದ್ದಾನೆ ಆದರೆ ಅವನ ಪರವಾಗಿ ಜನ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ನ್ಯೂಸ್ ಪ್ರೈಂ ಟೈಂನಲ್ಲಿ ಅವನ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ ಎಂದೆಲ್ಲ ಟ್ರೈಲರ್​ನಲ್ಲಿ ತೋರಿಸಲಾಗಿತ್ತು. ‘ಪುಷ್ಪ 2’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು ಸಿನಿಮಾ ಡಿಸೆಂಬರ್ 22 ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು