ವಿಷ್ಣುವರ್ಧನ್ ಸ್ಮಾರಕದಲ್ಲಿ ಅನಿರುದ್ಧ್ ಹೊಸ ಸಿನಿಮಾಕ್ಕೆ ಚಾಲನೆ: ಕತೆ ತುಸು ಭಿನ್ನ

'ಜೊತೆ ಜೊತೆಯಲಿ' ಮೂಲಕ ಖ್ಯಾತಿಯನ್ನು ಮರುಗಳಿಸಿರುವ ನಟ ಅನಿರುದ್ದ್ ಹೀರೋ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅವರ ಹೊಸ ಸಿನಿಮಾದ ಚಿತ್ರಕತೆ ಪೂಜೆ ವಿಷ್ಣುವರ್ಧನ್ ಸ್ಮಾರಕದಲ್ಲಿ ನಡೆದಿದೆ.

ವಿಷ್ಣುವರ್ಧನ್ ಸ್ಮಾರಕದಲ್ಲಿ ಅನಿರುದ್ಧ್ ಹೊಸ ಸಿನಿಮಾಕ್ಕೆ ಚಾಲನೆ: ಕತೆ ತುಸು ಭಿನ್ನ
ಅನಿರುದ್ದ್
Follow us
ಮಂಜುನಾಥ ಸಿ.
|

Updated on: Jul 21, 2023 | 5:45 PM

ಜೊತೆ-ಜೊತೆಯಲಿ‘ (Jothe Jotheyali) ಧಾರಾವಾಹಿ (Serial) ಮೂಲಕ ಮತ್ತೆ ಕರ್ನಾಟಕದ ಮನೆ ಮಾತಾದ ನಟ ಅನಿರುದ್ಧ್ ಈಗ ಮತ್ತೆ ಸಿನಿಮಾ ಲೋಕಕ್ಕೆ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಾಲಕ್ಕೆ ದೊಡ್ಡ ನಟನಾಗಿ ಬೆಳೆಯುವ ಭರವಸೆ ಮೂಡಿಸಿದ್ದ ಆದರೆ ನಂತರದ ದಿನಗಳಲ್ಲಿ ಯಾಕೋ ಮಂಕಾಗಿದ್ದ ಅನಿರುದ್ಧ್​ಗೆ (anirudh jatkar) ಕಿರುತೆರೆ ಮತ್ತೆ ಜೋಷ್​ ತುಂಬಿದ್ದು ಅದೇ ಜೋಷ್​ನಲ್ಲಿ ಮತ್ತೆ ನಾಯಕನಾಗಿ ತೆರೆಗೆ ಬರುತ್ತಿದ್ದಾರೆ. ಅನಿರುದ್ಧ್​ರ ಅವರ ಹೊಸ ಸಿನಿಮಾಕ್ಕೆ ಇತ್ತೀಚೆಗಷ್ಟೆ ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ಚಾಲನೆ ದೊರೆತಿದೆ.

ಅನಿರುದ್ಧ್ ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾವನ್ನು ಎಂ.ಆನಂದರಾಜ್ ನಿರ್ದೇಶನ ಮಾಡಲಿದ್ದಾರೆ. ಈ ಮೊದಲು ಇವರು ‘ರಾಘು’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಇತ್ತೀಚೆಗೆ ಮೈಸೂರಿನ ಡಾ ವಿಷ್ಣುವರ್ಧನ್ ಸ್ಮಾರಕದಲ್ಲಿ ನೆರವೇರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಆಗಸ್ಟ್ 10 ನೇ ತಾರೀಖಿನಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮಂಗಳೂರು ತುಮಕೂರುನಲ್ಲಿ ಚಿತ್ರೀಕರಣ ನಡೆಯಲಿದೆ.‌ ರೂಪ ಡಿ.ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ.

ಇದನ್ನೂ ಓದಿ:Jothe Jotheyali: ಜೊತೆ ಜೊತೆಯಲಿ ಧಾರಾವಾಹಿ ವಿವಾದ ಸುಖಾಂತ್ಯ: ಅಸಮಾಧಾನ ಮರೆತು ಒಂದಾದ ಅನಿರುದ್ದ್, ಆರೂರು ಜಗದೀಶ್

ವಿಜಯ ರಾಘವೇಂದ್ರ ನಟಿಸಿದ್ದ ‘ರಾಘು’ ಸಿನಿಮಾವನ್ನು ‌ಆನಂದ್ ರಾಜ್ ನಿರ್ದೇಶನ ಮಾಡಿದ್ದರು. ಈಗ ಈ ಹೊಸ ಸಿನಿಮಾಕ್ಕೆ ಕೈ ಹಾಕಿದ್ದಾರೆ. ನಿರ್ದೇಶಕ ಆನಂದ್ ರಾಜ್ ಅವರೇ ಕಥೆ ಬರೆದಿದ್ದು, ಸಂಭಾಷಣೆ ಹಾಗೂ ಚಿತ್ರಕತೆಯನ್ನು ಗಣೇಶ್ ಪರಶುರಾಮ್ ಬರೆಯುತ್ತಿದ್ದಾರೆ. ಛಾಯಾಗ್ರಹಣ ಉದಯಲೀಲಾ , ವಿಜೇತ್ ಚಂದ್ರ ಎಡಿಟಿಂಗ್, ರಿತ್ವಿಕ್ ಮುರಳಿಧರ್ ಹಿನ್ನೆಲೆ ಸಂಗೀತ, ವಿಕ್ರಾಂತ್ ರೋಣಗೆ ಡಿಐ ಆಗಿದ್ದ ಆಶಿಕ್ ಕುಸುಗೊಳ್ಳಿ ಈ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ, ನರಸಿಂಹಮೂರ್ತಿ ಫೈಟ್ ಕೊರಿಯೊಗ್ರಫಿ ಹಾಗೂ ಮಾಧುರಿ ಪರಶುರಾಮ್ ಅವರ ಡ್ಯಾನ್ಸ್ ಕೊರಿಯೋಗ್ರಾಫಿ ಈ ಸಿನಿಮಾಕ್ಕಿದೆ. ಸಿನಿಮಾದ ಸೌಂಡ್ ಡಿಸೈನರ್ ಆಗಿ ಬಿ.ಆರ್ ನವೀನ್ ಕುಮಾರ್ ಕೆಲಸ ಮಾಡಲದ್ದಾರೆ.

ಸಿನಿಮಾದ ನಾಯಕಿಯರಾಗಿ ನಟಿಯರಾದ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್‌ ಇದ್ದಾರೆ. ರೆಚೆಲ್ ಡೇವಿಡ್ ಈ ಹಿಂದೆ ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಸಹ ನಟಿಸಿದ್ದರು. ಪೋಷಕ ಪಾತ್ರಗಳಲ್ಲಿ ಪ್ರತಿಭಾವಂತ ನಟ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಇನ್ನೂ ಕೆಲವರಿದ್ದಾರೆ. ಸಿನಿಮಾವು ಡಾರ್ಕ್ ಕಾಮಿಡಿ ಥ್ರಿಲ್ಲರ್ ಜಾನರ್​ಗೆ ಸೇರಿದ್ದಾಗಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಶೀಘ್ರದಲ್ಲಿಯೇ ಸಿನಿಮಾ ಹೆಸರನ್ನು ಘೋಷಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ