ರಮ್ಯಾ v/s ‘ಹಾಸ್ಟೆಲ್ ಹುಡುಗರು’: ನ್ಯಾಯಾಲಯ ಹೇಳಿದ್ದೇನು?

Ramya vs Hostel Hudugaru: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಹಾಗೂ ರಮ್ಯಾ ಪ್ರಕರಣದಲ್ಲಿ ನ್ಯಾಯಾಲಯ ಗಮನಿಸಿದ್ದೇನು? ಪ್ರಕರಣದ ಬಗ್ಗೆ ನ್ಯಾಯಾಲಯ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿವರ

ರಮ್ಯಾ v/s 'ಹಾಸ್ಟೆಲ್ ಹುಡುಗರು': ನ್ಯಾಯಾಲಯ ಹೇಳಿದ್ದೇನು?
ಹಾಸ್ಟೆಲ್ ಹುಡುಗರು-ರಮ್ಯಾ
Follow us
ಮಂಜುನಾಥ ಸಿ.
|

Updated on: Jul 20, 2023 | 10:59 PM

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel Hudugaru Bekagiddare) ಸಿನಿಮಾ ಬಿಡುಗಡೆಗೆ ನಟಿ ರಮ್ಯಾ (Ramya) ತಂದಿದ್ದ ತಡೆಯಾಜ್ಞೆ ತೆರವಾಗಿದೆ. ಪ್ರಕರಣದಲ್ಲಿ ಆರಂಭಿಕ ಗೆಲುವು ‘ಹಾಸ್ಟೆಲ್ ಹುಡುಗರ’ದ್ದಾಗಿದೆಯಾದರೂ ಪ್ರಕರಣ ಇನ್ನೂ ಅಂತ್ಯವಾಗಿಲ್ಲ. ರಮ್ಯಾ ಹಾಗೂ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ವಿವರವಾದ ವಾದ ಆಲಿಸಿದ ನ್ಯಾಯಾಲಯ ಸದ್ಯಕ್ಕೆ ತಡೆಯಾಜ್ಞೆ ತೆರವು ಮಾಡಿದೆಯಾದರೂ 50 ಲಕ್ಷ ರೂಪಾಯಿ ಹಣವನ್ನು ಭದ್ರತೆಯಾಗಿ ನ್ಯಾಯಾಲಯಕ್ಕೆ ಡೆಪಾಸಿಟ್ ಮಾಡುವಂತೆ ಚಿತ್ರತಂಡಕ್ಕೆ ಆದೇಶಿಸಿದೆ. ಈ ನಿಗದಿತ ಪ್ರಕರಣದಲ್ಲಿ ನ್ಯಾಯಾಲಯ ಮುಖ್ಯವಾಗಿ ಗುರುತಿಸಿದ ಅಂಶಗಳೇನು? ಸಾರಾಂಶ ಇಲ್ಲಿದೆ.

ಅರ್ಜಿದಾರರಾದ ರಮ್ಯಾ, ಸಿನಿಮಾ ಬಿಡುಗಡೆಗೆ ಮುನ್ನವೇ ತಮ್ಮ ಆಕ್ಷೇಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈಗ ಅವರ ಭಾಗಗಳನ್ನು ತೆಗೆದು ಬಿಡುಗಡೆ ಮಾಡುವಂತೆ ಆದೇಶ ಮಾಡಬಹುದಾದರೂ ಚಿತ್ರತಂಡವು (ಪ್ರತಿವಾದಿ) ಈಗಾಗಲೇ ರಮ್ಯಾರ ದೃಶ್ಯಗಳನ್ನು ಒಳಗೊಂಡಂತೆ ಸಿನಿಮಾವನ್ನು ಸಿಬಿಎಫ್​ಸಿಗೆ ಸಲ್ಲಿಸಿ ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಪ್ರಮಾಣ ಪತ್ರ ಪಡೆದ ಬಳಿಕ ಸಿನಿಮಾದ ಯಾವುದೇ ಭಾಗವನ್ನು ತೆಗೆಯುವುದಾಗಲಿ ಸೇರಿಸುವುದಾಗಲಿ ಸಾಧ್ಯವಾಗದು. ಅಲ್ಲದೆ ರಮ್ಯಾ ಇರುವ ಭಾಗಗಳನ್ನು ಡಿಲೀಟ್ ಮಾಡಿ ಮತ್ತೊಮ್ಮೆ ಶೂಟ್ ಮಾಡಿ, ಪ್ರಮಾಣ ಪತ್ರ ಪಡೆಯುವುದು ಬಹಳ ಸಮಯ ಹಿಡಿಯುವ ಕಾರ್ಯ ಹಾಗೂ ಖರ್ಚಿನ ಕಾರ್ಯ ಇದರಿಂದ ನಿರ್ಮಾಪಕರಿಗೆ ನಷ್ಟವಾಗಲಿದೆ.

ಇದನ್ನೂ ಓದಿ:ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಕ್ಕೆ ರಮ್ಯಾ ಪಡೆಯಲಿರುವ ಸಂಭಾವನೆ ಎಷ್ಟು?

ರಮ್ಯಾ, ಒಪ್ಪಂದದಂತೆ ಸಿನಿಮಾದ ಚಿತ್ರೀಕರಣದಲ್ಲಿ ನಟಿಸಿದ್ದಾರೆ, ಸಿನಿಮಾಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾದ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕಿನ ಮಾರಾಟದ ಹಣದ 5% ನೀಡುವುದಾಗಿ ಒಪ್ಪಂದ ಸಹ ಆಗಿದೆ. ಚಿತ್ರೀಕರಣದ ದೃಶ್ಯಗಳನ್ನು ರಮ್ಯಾರಿಗೆ ಚಿತ್ರತಂಡ ಕಳಿಸಿತ್ತು. ಆದರೆ ರಮ್ಯಾ, ಆ ದೃಶ್ಯಗಳನ್ನು ಸಿನಿಮಾಗಳಲ್ಲಿ ಬಳಸಬೇಡಿ ಎಂದು ಹೇಳಿದ್ದರು. ಅಂತೆಯೇ ನಿರ್ಮಾಪಕ, ನಿರ್ದೇಶಕ ಸಹ ಆ ದೃಶ್ಯಗಳನ್ನು ಸಿನಿಮಾದಲ್ಲಿ ಬಳಸುವುದಿಲ್ಲ ಎಂದು ‘ಜಂಟಲ್​ಮ್ಯಾನ್ ಪ್ರಾಮಿಸ್’ ಮಾಡಿದ್ದರು ಎಂಬುದು ಅವರ ವಾಟ್ಸ್​ಆಪ್ ಚಾಟ್​ನಿಂದ ತಿಳದು ಬರುತ್ತಿದೆ.

ಪ್ರಕರಣ ನೋಡಿದಾಗ ಚಿತ್ರತಂಡವು ಒಪ್ಪಂದ ಮುರಿದಿರುವುದು ಕಂಡು ಬರುತ್ತಿದೆ. ಒಪ್ಪಂದದ 1,2 ಹಾಗೂ 5 ನೇ ನಿಯಮಗಳನ್ನು ಚಿತ್ರತಂಡ ಮುರಿದಿದೆ ಎಂದು ತೋರುತ್ತಿದೆ. ಟ್ರೈಲರ್​ನಲ್ಲಿ ತಮ್ಮನ್ನು ತೋರಿಸುವುದಿಲ್ಲ ಎಂದು ಚಿತ್ರತಂಡ ನೀಡಿದ್ದ ಭರವಸೆಯನ್ನೂ ಅವರು ಉಳಿಸಿಕೊಂಡಿಲ್ಲ. ಸಿನಿಮಾದ ಭಾಗವಾಗಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರೂ ಚಿತ್ರತಂಡ ಉದ್ದೇಶಪೂರ್ವಕವಾಗಿ ಟ್ರೈಲರ್ ಬಿಡುಗಡೆ ಮಾಡಿದೆ. ಇದು ಒಪ್ಪಂದದ 1,2 ಹಾಗೂ 5 ನೇ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.

ಒಪ್ಪಂದವನ್ನು ಮುರಿಯುವ ಅವಕಾಶ ಒಪ್ಪಂದದಿಲ್ಲಿಯೇ ಇದೆಯಾದರೂ ಅದನ್ನು ರಮ್ಯಾ ಬಳಸುವಂತಿಲ್ಲ. ಒಪ್ಪಂದವನ್ನು ಯಾವ ಸಮಯದಲ್ಲಿ ಮುರಿಯಬಹುದು ಎಂಬುದನ್ನು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿದೆ. ಹಾಗಾಗಿ, ಮೇಲ್ನೋಟಕ್ಕೆ ಚಿತ್ರತಂಡವು ನಿಯಮಗಳನ್ನು ಉಲ್ಲಂಘಿಸಿದ್ದರೂ ಸಹ ಒಪ್ಪಂದವನ್ನು ರದ್ದುಪಡಿಸುವ ಅಧಿಕಾರ ರಮ್ಯಾ ಅವರಿಗೆ ಇಲ್ಲ. ಹಾಗಾಗಿ ರಮ್ಯಾ ಇನ್ನೂ ಒಪ್ಪಂದದ ನಿಯಮಗಳಿಗೆ ಒಳಪಟ್ಟೇ ಇದ್ದಾರೆ.

ಒಪ್ಪಂದದ ನಿಯಮಗಳನ್ನು ಮುರಿದು ಅದಕ್ಕೆ ಪರಿಹಾರ ನೀಡದೇ ಇದ್ದಾಗ ‘ಭಾರತೀಯ ಒಪ್ಪಂದ ಕಾಯ್ದೆ’ ಸೆಕ್ಷನ್ 73 ರ ಅನ್ವಯ ಸಂತ್ರಸ್ತರು ಅಥವಾ ಒಪ್ಪಂದ ನಿಯಮ ಮುರಿದಿದ್ದರಿಂದ ನಷ್ಟಹೊಂದಿದವರು ಪರಿಹಾರಕ್ಕೆ ಅರ್ಹರಾಗುತ್ತಾರೆ. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಚಿತ್ರತಂಡ ಒಪ್ಪಂದದ ನಿಯಮಗಳನ್ನು ಮುರಿದಿದ್ದು ಕಂಡು ಬರುತ್ತಿದೆ. ಹಾಗಿದ್ದರೂ, ಒಂದೊಮ್ಮೆ ಸಿನಿಮಾವು ನಿಗದಿತ ದಿನಾಂಕದಂದು ಬಿಡುಗಡೆ ಆಗದಿದ್ದರೆ ಚಿತ್ರತಂಡಕ್ಕೆ ಬಹಳ ದೊಡ್ಡ ನಷ್ಟವಾಗಲಿದೆ. ಈಗಾಗಲೇ ಸಿನಿಮಾದ ಟಿಕೆಟ್​ಗಳು ಸಹ ಬುಕ್ ಆಗಿವೆ. ಅಲ್ಲದೆ, ಸಿನಿಮಾದಲ್ಲಿ ರಮ್ಯಾರ ಪಾತ್ರ ಎರಡು ನಿಮಿಷದ್ದು ಹಾಗೂ ಸಿಬಿಎಫ್​ಸಿ ಈಗಾಗಲೇ ಅವರ ದೃಶ್ಯ ಸೇರಿದಂತೆ ಇಡೀಯ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಿದೆ. ಹಾಗಾಗಿ ರಮ್ಯಾರ ದೃಶ್ಯಗಳು ನೋಡಲರ್ಹ, ನಿಯಮದನ್ವಯವೇ ಇದೆಯೆಂದು ನಂಬಬಹುದಾಗಿದೆ. ಹಾಗಾಗಿ ಸಿನಿಮಾ ಬಿಡುಗಡೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ.

ಆದರೆ ಒಪ್ಪಂದದ ನಿಯಮಗಳ ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಉಲ್ಲಂಘನೆ ಆಗಿರುವುದಕ್ಕೆ ರಮ್ಯಾ, ಪರಿಹಾರವನ್ನು ಕೇಳಲು ಅರ್ಹರಾಗಿದ್ದಾರೆ. ಹಾಗಾಗಿ ತಾತ್ಕಾಲಿಕ ತಡೆಯಾಜ್ಞೆಯನ್ನು ಷರತ್ತುಗಳನ್ನು ವಿಧಿಸಿ ತೆರವು ಮಾಡುವುದು ಸೂಕ್ತ ಎನಿಸುತ್ತದೆ. ಪ್ರತಿವಾದಿ 1,3 ಮತ್ತು 4 ಅವರುಗಳು ಇನ್ನೊಂದು ವಾರದ ಒಳಗಾಗಿ 50 ಲಕ್ಷ ರೂಪಾಯಿ ಮೊತ್ತವನ್ನು ಭದ್ರತೆಯಾಗಿ ಇಡಬೇಕು. ಒಂದೊಮ್ಮೆ ಸೂಚಿಸಿದ ಸಮಯದ ಒಳಗಾಗಿ ಹಣ ಡೆಪಾಸಿಟ್ ಇಡದಿದ್ದಲ್ಲಿ ತಡೆಯಾಜ್ಞೆ ತೆರವು ಮಾಡಿ ನೀಡಲಾಗಿರುವ ಆದೇಶವನ್ನು ರದ್ದು ಮಾಡಬಹುದಾಗಿದೆ ಎಂದು ಕೋರ್ಟ್ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್