AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡೆಯಾಜ್ಞೆ ತೆರವು, ಕುಣಿದು ಕುಪ್ಪಳಿಸಿದ ‘ಹಾಸ್ಟೆಲ್ ಹುಡುಗರು’ ರಮ್ಯಾ ಬಗ್ಗೆ ಗೌರವ ಇದೆಯೆಂದ ನಿರ್ದೇಶಕ

Hostel hudugaru bekagiddare: ತಾವೇ ನಟಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಈ ಬಗ್ಗೆ ಸಿನಿಮಾದ ನಿರ್ದೇಶಕ ಮಾತನಾಡಿದ್ದಾರೆ.

ತಡೆಯಾಜ್ಞೆ ತೆರವು, ಕುಣಿದು ಕುಪ್ಪಳಿಸಿದ 'ಹಾಸ್ಟೆಲ್ ಹುಡುಗರು' ರಮ್ಯಾ ಬಗ್ಗೆ ಗೌರವ ಇದೆಯೆಂದ ನಿರ್ದೇಶಕ
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
Mangala RR
| Edited By: |

Updated on: Jul 20, 2023 | 5:08 PM

Share

ಕಳೆದ ಎರಡು ವರ್ಷಗಳಿಂದಲೂ ಚಿತ್ರೀಕರಣ (Shooting) ಮಾಡಿ, ಭಿನ್ನ ರೀತಿಯಲ್ಲಿ, ಕ್ರಿಯಾತ್ಮಕವಾಗಿ ಪ್ರೊಮೋಷನ್​ಗಳನ್ನು ಮಾಡುತ್ತಾ ಬಂದಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel hudugaru bekagiddare) ಸಿನಿಮಾ ಟೀಸರ್, ಟ್ರೈಲರ್ ಎಲ್ಲ ಬಿಡುಗಡೆ ಮಾಡಿ ಸಿನಿಮಾ ದಿನಾಂಕವನ್ನೂ ಘೋಷಿಸಿ ಬಿಡುಗಡೆಗೆ ರೆಡಿಯಾಗಿತ್ತು. ಅದೇ ಸಮಯಕ್ಕೆ ನಟಿ ರಮ್ಯಾ (Ramya) ಸಿನಿಮಾದ ಬಿಡುಗಡೆ ವಿರುದ್ಧ ತಡೆಯಾಜ್ಞೆ ತಂದಿದ್ದರು. ಇದು ಚಿತ್ರತಂಡವನ್ನು ತೀವ್ರ ಆಘಾತಕ್ಕೆ ನೂಕಿತ್ತು. ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ ಸುಖಾಂತ್ಯವಾಗಿದ್ದು, ಚಿತ್ರತಂಡದ ಪರವಾಗಿ ನ್ಯಾಯಾಲಯ ತೀರ್ಪು ನೀಡಿದ್ದು, ಮೊದಲೇ ನಿಗದಿಪಡಿಸಿದ್ದ ದಿನಾಂಕವಾದ ಜುಲೈ 21ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಪ್ರಕರಣದಲ್ಲಿ ತಮ್ಮ ಪರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದಕ್ಕೆ ಚಿತ್ರತಂಡ ಖುಷಿ ವ್ಯಕ್ತಪಡಿಸಿದ್ದು, ನರ್ತಕಿ ಚಿತ್ರಮಂದಿರದ ಮುಂದೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಿನಿಮಾದ ನಿರ್ದೇಶಕ ನಿತಿನ್, ”ರಮ್ಯಾ ಮೇಡಂ ತಡೆಯಾಜ್ಞೆ ತಂದಿದ್ದರು, ಆದರೆ ಈಗ ಯಾವುದೇ ತೊಂದರೆಯಿಲ್ಲ, ತಡೆಯಾಜ್ಞೆ ತೆರವಾಗಿದೆ. ಅಂದುಕೊಂಡಂತೆ ನಾಳೆ (ಜುಲೈ 21) ಸಿನಿಮಾ ಬಿಡುಗಡೆ ಆಗಲಿದೆ” ಎಂದಿದ್ದಾರೆ.

”ಎರಡು ವರ್ಷದಿಂದ ಕಷ್ಟಪಟ್ಟು ಮಾಡಿದ್ದಂಥಹಾ ಸಿನಿಮಾ, ಬಿಡುಗಡೆ ಆಗುವ ಸಂದರ್ಭದಲ್ಲಿ ಹೀಗಾಯ್ತಲ್ಲ ಎಂದು ಬೇಸರವಾಗಿತ್ತು. ನೋಟೀಸ್ ಮನೆಗೆ ಬಂದಿದ್ದು ಇವತ್ತು. ಮೇಲ್ ನಲ್ಲಿ ಮೊದಲೇ ಬಂದಿತ್ತು. ನೋಟೀಸ್ ನೋಡಿದಾಗ ಶಾಕ್ ಆಗಿತ್ತು. ಆದರೆ ಈಗ ಎಲ್ಲವೂ ಸರಿ ಹೋಗಿದೆ. ಆ ಬಗ್ಗೆ ಖುಷಿ ಇದೆ. ರಮ್ಯಾ ಮೇಡಂ ಕೂಡ ನಮ್ಮ ತಂಡದವರೇ, ಅವರಿಗೂ ಸೇರಿ ಜಯ ಸಿಕ್ಕಿದೆ. ಅವರ ಬಗ್ಗೆ ಗೌರವ ಇದೆ” ಎಂದು ನಿರ್ದೇಶಕ ನಿತೀನ್ ಹೇಳಿದ್ದಾರೆ.

ಇದನ್ನೂ ಓದಿ:ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ವಿರುದ್ಧ ರಮ್ಯಾ ಕೇಸ್: ನಿರ್ಮಾಪಕರು ಹೇಳಿದ್ದು ಹೀಗೆ

ಸಿನಿಮಾದಲ್ಲಿ ರಮ್ಯಾ ಮಾಡಿರುವ ಪಾತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ನಿತಿನ್, ”ಅತಿಥಿಯ ಪಾತ್ರ, ಆದ್ರೆ ಎಲ್ಲಿಯೂ ನೀವೂ ರಮ್ಯಾ ಮೇಡಂ ಅವರನ್ನ ಆ ರೀತಿ ನೋಡಿರಲ್ಲ, ಆ ರೀತಿಯ ಪಾತ್ರವನ್ನು ಅವರು ನಮ್ಮ ಸಿನಿಮಾದಲ್ಲಿ ಮಾಡಿದ್ದಾರೆ. ಬಹಳ ಕಡಿಮೆ ಸಮಯ ರಮ್ಯಾ ತೆರೆಯ ಮೇಲೆ ಇರುತ್ತಾರೆ. ಪ್ರೋಮೋ ಮತ್ತು ಸಿನಿಮಾ ಎರಡಕ್ಕೂ ರಮ್ಯಾ ಆಕ್ಟ್ ಮಾಡಿದ್ದಾರೆ. ನಟಿಸುವಾಗ ಬಹಳ ಖುಷಿಯಿಂದ ನಟಿಸಿದ್ದರು. ನಮಗೂ ಪ್ರೋತ್ಸಾಹ ನೀಡಿದ್ದರು. ಆದರೆ ಆ ಮೇಲೆ ತಡೆಯಾಜ್ಞೆ ತಂದರು. ಏನೇ ಆಗಲಿ ಅವರ ಬಗ್ಗೆ ಗೌರವ ಇದೆ. ಇದನ್ನೆಲ್ಲ ಪಬ್ಲಿಸಿಟಿ ಗಿಮಿಕ್ ಎಂದು ಬಹಳಷ್ಟು ಜನ ಅಂದುಕೊಂಡರು. ಆದರೆ ಇದು ಗಿಮಿಕ್ ಅಲ್ಲ. ನಿಜವಾಗಿಯೂ ನಡೆದಿದೆ” ಎಂದಿದ್ದಾರೆ ನಿತಿನ್.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಬಹುತೇಕ ಹೊಸಬರೇ ಸೇರಿ ಮಾಡಿದ್ದಾರೆ. ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಈಗಾಗಲೇ ಬಹಳ ಗಮನ ಸೆಳೆದಿದೆ. ಸಿನಿಮಾದಲ್ಲಿ ರಮ್ಯಾ ಮಾತ್ರವೇ ಅಲ್ಲದೆ ರಿಷಬ್ ಶೆಟ್ಟಿ, ಲೂಸಿಯಾ ಪವನ್ ಕುಮಾರ್, ನಟ ದಿಗಂತ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಅವರೇ ವಿತರಣೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ