ಚಿತ್ರೀಕರಣ ಶುರುವಾಗುವ ಮುನ್ನವೇ ವಿಜಯ್ ಸಿನಿಮಾಕ್ಕೆ ಭಾರಿ ಬೇಡಿಕೆ

Vijay: ನಟ ವಿಜಯ್​ರ 68ನೇ ಸಿನಿಮಾ ಚಿತ್ರೀಕರಣ ಶುರುವಾಗುವ ಮುನ್ನವೇ ದಾಖಲೆಗಳನ್ನು ಬರೆಯುತ್ತಿದೆ.

ಚಿತ್ರೀಕರಣ ಶುರುವಾಗುವ ಮುನ್ನವೇ ವಿಜಯ್ ಸಿನಿಮಾಕ್ಕೆ ಭಾರಿ ಬೇಡಿಕೆ
ವಿಜಯ್
Follow us
ಮಂಜುನಾಥ ಸಿ.
|

Updated on: Jul 16, 2023 | 9:54 PM

ಸ್ಟಾರ್ ನಟ ವಿಜಯ್ (Vijay) ಹೊಸ ಸಿನಿಮಾ ‘ಲಿಯೋ’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾ ಬಿಡುಗಡೆಗೆ ಮುನ್ನವೇ ದಾಖಲೆಗಳನ್ನು ಬರೆಯುತ್ತಿದೆ. ‘ಮಾಸ್ಟರ್’ ಸಿನಿಮಾದ ಬಳಿಕ ನಿರ್ದೇಶಕ ಲೋಕೇಶ್ ಕನಗರಾಜ್ ಹಾಗೂ ವಿಜಯ್ ಒಂದಾಗಿ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಸತತ ಹಿಟ್ ನೀಡುತ್ತಾ ಬರುತ್ತಿರುವ ಲೋಕೇಶ್ ಕನಗರಾಜ್ (Lokesh Kanagaraj) ಅವರಿಂದಾಗಿ ಈ ಸಿನಿಮಾದ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಅದರಂತೆಯೇ ಸಿನಿಮಾಗೆ ಬಿಡುಗಡೆ ಮುನ್ನವೇ ಮಾರುಕಟ್ಟೆ ಸೃಷ್ಟಿಯಾಗಿದೆ. ಆದರೆ ವಿಷಯ ಈ ಸಿನಿಮಾದ್ದಲ್ಲ, ಈ ಸಿನಿಮಾದ ಬಳಿಕ ವಿಜಯ್ ನಟಿಸಲಿರುವ ಹೊಸ ಸಿನಿಮಾ ಇನ್ನೂ ಸೆಟ್ಟೇರಿಲ್ಲ ಅದಾಗಲೇ ಸಿನಿಮಾಕ್ಕೆ ಬೇಡಿಕೆ ಶುರುವಾಗಿದೆ.

‘ಲಿಯೋ’ ಸಿನಿಮಾದ ಬಳಿಕ ವಿಜಯ್ ತಮ್ಮ 68ನೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾವನ್ನು ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ, ಆದರೆ ಈಗಾಗಲೇ ಸಿನಿಮಾದ ಆಡಿಯೋ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಅದೂ ಸಾಮಾನ್ಯ ಮೊತ್ತಕ್ಕಲ್ಲ, ತಮಿಳು ಚಿತ್ರರಂಗದಲ್ಲಿಯೇ ಯಾವ ಸಿನಿಮಾದ ಆಡಿಯೋ ಹಕ್ಕುಗಳು ಸಹ ಮಾರಾಟವಾಗದ ಬೆಲೆಗೆ ಮಾರಾಟವಾಗಿ ದಾಖಲೆ ಬರೆದಿವೆ.

ದಳಪತಿ ವಿಜಯ್​ರ 68ನೇ ಸಿನಿಮಾದ ಆಡಿಯೋ ಹಕ್ಕನ್ನು ಟಿ-ಸೀರೀಸ್ ಪಡೆದುಕೊಂಡಿದೆ. ಸಿನಿಮಾದ ಚಿತ್ರೀಕರಣ ಶುರುವಾಗುವ ಮುನ್ನ ಸಿನಿಮಾದ ಆಡಿಯೋ ಟ್ರ್ಯಾಕ್​ಗಳನ್ನು ಕೇಳಿಯೇ ಟಿ-ಸೀರೀಸ್ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಸಿನಿಮಾದ ಹಾಡುಗಳು ಪಕ್ಕಾ ಸೂಪರ್ ಹಿಟ್ ಆಗಲಿವೆ ಎಂಬುದು ಟಿ-ಸೀರೀಸ್ ನಂಬಿಕೆ. ಅಂದಹಾಗೆ, ಈ ಸಿನಿಮಾದ ಆಡಿಯೋ ಹಕ್ಕುಗಳಿಗೆ ಟಿ-ಸೀರೀಸ್ ನೀಡಿರುವ ಮೊತ್ತ ಬರೋಬ್ಬರಿ 30 ಕೋಟಿ ರೂಪಾಯಿಗಳನ್ನು ನೀಡಲಾಗಿದೆಯಂತೆ.

ಇದನ್ನೂ ಓದಿ:‘ತಮನ್ನಾ ಮೇಲೆ ನನಗೆ ಹುಚ್ಚು ಪ್ರೀತಿ ಆಗಿದೆ’; ಪಬ್ಲಿಸಿಟಿ ಸ್ಟಂಟ್ಸ್​ ಎಂದವರಿಗೆ ವಿಜಯ್ ವರ್ಮಾ ಉತ್ತರ

ವಿಜಯ್​ರ 68ನೇ ಸಿನಿಮಾಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳ ಸಂಗೀತ ತಯಾರಾಗಿದ್ದು, ಟ್ರ್ಯಾಕ್ ಹಾಡುಗಳು ಸಹ ರೆಡಿಯಾಗಿವೆಯಂತೆ. ಹಿನ್ನೆಲೆ ಸಂಗೀತವನ್ನು ಚಿತ್ರೀಕರಣ ಮುಗಿದ ಬಳಿಕ ಸೇರಿಸಲಾಗುತ್ತದೆ. ಹಾಡುಗಳು ಬಹಳ ಚೆನ್ನಾಗಿ ಮೂಡಿ ಬಂದಿರುವ ಕಾರಣ ಟಿ-ಸೀರೀಸ್ ಭಾರಿ ದೊಡ್ಡ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದೆ.

ಇನ್ನು ದಳಪತಿ 68 ಸಿನಿಮಾವು ರಾಜಕೀಯ ವಿಷಯವನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಸಿನಿಮಾ ನಿರ್ದೇಶನ ಮಾಡುತ್ತಿರುವ ವೆಂಕಟ್ ಪ್ರಭು, ಭಿನ್ನ ರೀತಿಯ ಕತೆಗಳನ್ನು ಹೇಳುವ ನಿರ್ದೇಶಕ. ಈ ಹಿಂದೆ ಅವರು ‘ಮಾನಾಡು’, ‘ಮಂಕತ್ತ’ ಹಾಗೂ ‘ಕಸ್ಟಡಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಮೂರೂ ಸಿನಿಮಾಗಳು ಒಂದಕ್ಕಿಂತಲೂ ಒಂದು ಭಿನ್ನ ಕತೆಯನ್ನು ಹೊಂದಿದ ಥ್ರಿಲ್ಲರ್ ಸಿನಿಮಾಗಳಾಗಿದ್ದವು. ಇದೀಗ ವಿಜಯ್​ಗಾಗಿಯೂ ರಾಜಕೀಯ ಥ್ರಿಲ್ಲರ್ ಕತೆಯನ್ನು ಹೆಣೆದಿದ್ದಾರಂತೆ.

ವಿಜಯ್ ಇತ್ತೀಚೆಗಷ್ಟೆ ‘ಲಿಯೋ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿದ್ದು, ಬಾಲಿವುಡ್ ಸ್ಟಾರ್ ಸಂಜಯ್ ದತ್ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ