AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lokesh Kanagaraj: ನಿವೃತ್ತಿ ಪಡೆಯುವ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ‘ಕೈದಿ’, ‘ವಿಕ್ರಮ್​’, ‘ಲಿಯೋ’ ಚಿತ್ರಗಳ ನಿರ್ದೇಶಕ ಲೋಕೇಶ್​ ಕನಗರಾಜ್​

ಲೋಕೇಶ್​ ಕನಗರಾಜ್​ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ಸ್ಟಾರ್​ ನಟರು ಕೂಡ ಬಯಸುತ್ತಿದ್ದಾರೆ. ಇಂಥ ಸಮಯದಲ್ಲಿ ಅವರು ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿರುವುದು ಬೇಸರ ಮೂಡಿಸಿದೆ.

Lokesh Kanagaraj: ನಿವೃತ್ತಿ ಪಡೆಯುವ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ‘ಕೈದಿ’, ‘ವಿಕ್ರಮ್​’, ‘ಲಿಯೋ’ ಚಿತ್ರಗಳ ನಿರ್ದೇಶಕ ಲೋಕೇಶ್​ ಕನಗರಾಜ್​
ಲೋಕೇಶ್​ ಕನಗರಾಜ್​
ಮದನ್​ ಕುಮಾರ್​
|

Updated on: Jun 20, 2023 | 7:15 AM

Share

ಕಾಲಿವುಡ್​ನ (Kollywood) ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ (Lokesh Kanagaraj) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರಭಾವಿ ನಿರ್ದೇಶಕರಲ್ಲಿ ಅವರು ಕೂಡ ಪ್ರಮುಖರಾಗಿದ್ದಾರೆ. ‘ಕೈದಿ’, ‘ವಿಕ್ರಮ್​’, ‘ಮಾಸ್ಟರ್​’ ಮುಂತಾದ ಗಮನಾರ್ಹ ಸಿನಿಮಾಗಳನ್ನು ನೀಡಿದ ಖ್ಯಾತಿ ಲೋಕೇಶ್​ ಕನಗರಾಜ್​ ಅವರಿಗೆ ಸಲ್ಲುತ್ತದೆ. ಈಗ ಅವರು ‘ಲಿಯೋ’ (Leo Movie) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಅವರೀಗ ನಿವೃತ್ತಿ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ. ಅದನ್ನು ಕೇಳಿ ಅವರ ಅಭಿಮಾನಿಗಳಿಗೆ ಶಾಕ್​ ಆಗಿದೆ. 10 ಸಿನಿಮಾ ಮಾಡಿದ ಬಳಿಕ ನಿರ್ದೇಶನವನ್ನು ತೊರೆಯುವುದಾಗಿ ಲೋಕೇಶ್​ ಕನಗರಾಜ್​ ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೋಕೇಶ್​ ಕನಗರಾಜ್​ ಅವರು ಈ ವಿಚಾರ ಹೇಳಿಕೊಂಡಿದ್ದಾರೆ. ‘ನನ್ನ ವೃತ್ತಿಜೀವನದಲ್ಲಿ ಹೆಚ್ಚು ಸಿನಿಮಾ ಮಾಡಬೇಕು ಎಂಬ ಪ್ಲ್ಯಾನ್​ ನನಗೆ ಇಲ್ಲ. ಚಿತ್ರರಂಗದಲ್ಲಿ ಏನಾದರೂ ಮಾಡೋಣ ಅಂತ ನಾನು ಈ ಕ್ಷೇತ್ರಕ್ಕೆ ಬಂದೆ ಅಷ್ಟೇ. ಲೋಕೇಶ್​ ಸಿನಿಮ್ಯಾಟಿಕ್​ ಯೂನಿವರ್ಸ್​ ಸಾಧ್ಯವಾಗಿದ್ದು ನಿರ್ಮಾಪಕರ ನೆರವಿನಿಂದ. ಹಾಗಾಗಿ ನಾನು ನಿರ್ಮಾಪಕರಿಗೆ ಮತ್ತು ಎಲ್ಲ ನಟರ ಅಭಿಮಾನಿಗಳಿಗೆ ಪ್ರಮಾಣಿಕನಾಗಿ ಇರುತ್ತೇನೆ. ನಾನು 10 ಸಿನಿಮಾ ಮಾಡಿದ ಬಳಿಕ ಚಿತ್ರರಂಗ ತೊರೆಯುತ್ತೇನೆ’ ಎಂದು ಲೋಕೇಶ್​ ಕನಗರಾಜ್​ ಹೇಳಿದ್ದಾರೆ.

ಲೋಕೇಶ್​ ಕನಗರಾಜ್​ ಅವರ ಮೇಲೆ ಹಾಲಿವುಡ್​ ನಿರ್ದೇಶಕ ಕ್ವಿಂಟಿನ್​ ಟೆರೆಂಟಿನೋ ಪ್ರಭಾವ ತುಂಬಾ ಇದೆ. ಅದನ್ನು ಅವರು ಕೆಲವು ಸಂದರ್ಶನದಲ್ಲೂ ಈ ಮೊದಲು ಹೇಳಿಕೊಂಡಿದ್ದರು. ಅಚ್ಚರಿ ಏನೆಂದರೆ ಕ್ವಿಂಟಿನ್​ ಟೆರೆಂಟಿನೋ ಅವರು ಕೂಡ ಬಹಳ ಹಿಂದೆಯೇ ಈ ರೀತಿ ನಿರ್ಧಾರ ತೆಗೆದುಕೊಂಡಿದ್ದರು. 10 ಸಿನಿಮಾ ಮಾಡಿದ ಬಳಿಕ ತಾವು ನಿರ್ದೇಶನದಿಂದ ನಿವೃತ್ತಿ ಹೊಂದುವುದಾಗಿ ಅವರು ಹೇಳಿಕೆ ನೀಡಿದ್ದರು. ಈಗ ಅವರು 10ನೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅವರ ರೀತಿಯೇ ಲೋಕೇಶ್​ ಕನಗರಾಜ್​ ಕೂಡ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ರೋಲೆಕ್ಸ್​ ಪಾತ್ರ ಇಟ್ಟುಕೊಂಡು ಪ್ರತ್ಯೇಕ ಸಿನಿಮಾ ಮಾಡ್ತಾರಾ ಲೋಕೇಶ್​ ಕನಗರಾಜ್​?

ಈವರೆಗೂ ಲೋಕೇಶ್​ ಕನಗರಾಜ್​ ಅವರು 5 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 6ನೇ ಚಿತ್ರವಾಗಿ ‘ಲಿಯೋ’ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್​ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಬಹಳ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ಹಲವು ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದಾರೆ. ಇದು ಕೂಡ ಲೋಕೇಶ್​ ಸಿನಿಮ್ಯಾಟಿಕ್​ ಯೂನಿವರ್ಸ್​ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಇದರ ನಂತರ ಅವರು ಮಾಡಲಿರುವುದು ಇನ್ನು ಕೇವಲ 4 ಚಿತ್ರಗಳು ಮಾತ್ರ ಎಂಬುದನ್ನು ಅಭಿಮಾನಿಗಳಿಗೆ ಒಪ್ಪಿಕೊಳ್ಳಲು ಕಷ್ಟ ಆಗುತ್ತಿದೆ.

ಇದನ್ನೂ ಓದಿ: ‘ವಿಕ್ರಮ್’ ಸಿನಿಮಾ ನಿರ್ದೇಶಕ ಲೋಕೇಶ್​ ಕನಗರಾಜ್​ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್

ಲೋಕೇಶ್​ ಕನಗರಾಜ್​ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ಸ್ಟಾರ್​ ನಟರು ಕೂಡ ಬಯಸುತ್ತಿದ್ದಾರೆ. ಇಂಥ ಸಮಯದಲ್ಲಿ ಅವರು ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿರುವುದು ಬೇಸರ ಮೂಡಿಸಿದೆ. ಲೋಕೇಶ್​ ಕನಗರಾಜ್​ ಅವರ ನಿರ್ದೇಶನದಲ್ಲಿ ಬಂದ ‘ವಿಕ್ರಮ್​’ ಸಿನಿಮಾದಲ್ಲಿ ಕಮಲ್​ ಹಾಸನ್​ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಆ ಚಿತ್ರದಲ್ಲಿ ನಟ ಸೂರ್ಯ ಅವರು ರೋಲೆಕ್ಸ್​ ಎಂಬ ವಿಲನ್​ ಮಾಡಿ ಸಖತ್​ ಹೈಲೈಟ್​ ಆಗಿದ್ದರು. ಇಷ್ಟೆಲ್ಲ ಕ್ರೇಜ್​ ಸೃಷ್ಟಿಸಿದ ಲೋಕೇಶ್​ ಕನಗರಾಜ್​ ಅವರು ನಿವೃತ್ತಿ ಬಗ್ಗೆ ಮಾತನಾಡಿದ್ದು ನಿಜಕ್ಕೂ ಅಚ್ಚರಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು