AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​ಟಿಆರ್ ಸಿನಿಮಾದಲ್ಲಿ ಬಾಲನಟಿಯಾಗಿ ಸ್ಟಾರ್ ನಟನ ಪುತ್ರಿ

Jr NTR: ಜೂ ಎನ್​ಟಿಆರ್ ನಟಿಸುತ್ತಿರುವ ಹೊಸ ಬಹುಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ 'ದೇವೆರ' ನಲ್ಲಿ ತೆಲುಗಿನ ಸ್ಟಾರ್ ನಟನ ಪುತ್ರಿ ಬಾಲನಟಿಯಾಗಿ ನಟಿಸಲಿದ್ದಾರೆ.

ಜೂ ಎನ್​ಟಿಆರ್ ಸಿನಿಮಾದಲ್ಲಿ ಬಾಲನಟಿಯಾಗಿ ಸ್ಟಾರ್ ನಟನ ಪುತ್ರಿ
ದೇವರ
ಮಂಜುನಾಥ ಸಿ.
|

Updated on: Jul 16, 2023 | 8:06 PM

Share

ಆರ್​ಆರ್​ಆರ್ (RRR) ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಆಗಿರುವ ಜೂ ಎನ್​ಟಿಆರ್ (jr NTR) ಇದೀಗ ಹೊಸ ಸಿನಿಮಾಕ್ಕೆ ಕೈ ಹಾಕಿದ್ದ್ದಾರೆ. ದೇವೆರಾ ಹೆಸರಿನ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಿದ್ದು, ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಆರ್​ಆರ್​ಆರ್ ಮಾದರಿಯಲ್ಲೇ ಅತ್ಯುತ್ತಮ ಗುಣಮಟ್ಟದ ಸಿನಿಮಾ ಮಾಡಲು ಜೂ ಎನ್​ಟಿಆರ್ ಆಸಕ್ತಿವಹಿಸಿದ್ದು, ಸಿನಿಮಾಕ್ಕೆ ಹಾಲಿವುಡ್​ನಿಂದ ಸ್ಟಂಟ್ ಕೊರಿಯೋಗ್ರಾಫರ್ ಅನ್ನು ಕರೆತಂದಿದ್ದಾರೆ. ಬಾಲಿವುಡ್ (Bollywood)​ ಸ್ಟಾರ್ ನಟನನ್ನು ವಿಲನ್ ಪಾತ್ರಕ್ಕಾಗಿ, ನಟಿಯನ್ನು ನಾಯಕಿ ಪಾತ್ರಕ್ಕೆ ಕರೆತಂದಿದ್ದಾರೆ. ಇದರ ನಡುವೆ ತೆಲುಗಿನ ಸ್ಟಾರ್ ನಟನ ಪುತ್ರಿಯನ್ನು ಬಾಲನಟಿಯ ಪಾತ್ರಕ್ಕೆ ಒಪ್ಪಿಸಿದ್ದಾರೆ.

ಜೂ ಎನ್​ಟಿಆರ್ ‘ದೇವರ’ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಆರ್ಹಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲು ಆರ್ಹಾಗೆ ಕ್ಯಾಮೆರಾ ಹೊಸದೇನೂ ಅಲ್ಲ. ಈ ಹಿಂದೆ ಯೂಟ್ಯೂಬ್​ಗಾಗಿ ಅಲ್ಲು ಅರ್ಜುನ್ ನಿರ್ಮಿಸಿದ್ದ ‘ಅಂಜಲಿ ಅಂಜಲಿ’ ಹಾಡಿನಲ್ಲಿ ಆರ್ಹಾ ನಟಿಸಿದ್ದರು. ಅದಾದ ಬಳಿಕ ಕೆಲ ತಿಂಗಳ ಹಿಂದೆ ಬಿಡುಗಡೆ ಆದ ಸಮಂತಾರ ಶಾಕುಂತಲಂ ಸಿನಿಮಾದಲ್ಲಿಯೂ ಅಲ್ಲು ಆರ್ಹಾ ಬಣ್ಣ ಹಚ್ಚಿದ್ದರು. ಅದು ಅವರ ಮೊದಲ ಸಿನಿಮಾ ಆಗಿತ್ತು. ಇದೀಗ ಜೂ ಎನ್​ಟಿಆರ್ ಅವರ ‘ದೇವರ’ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ:ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು

ಈ ಸಿನಿಮಾದಲ್ಲಿ ಜೂ ಎನ್​ಟಿಆರ್​ಗೆ ಎರಡು ಶೇಡ್​ನ ಪಾತ್ರವಿದ್ದು, ಜೂ ಎನ್​ಟಿಆರ್ ಮಗಳ ಪಾತ್ರದಲ್ಲಿ ಅಲ್ಲು ಆರ್ಹಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟು ಮಾತ್ರವೇ ಅಲ್ಲದೆ ಈ ಸಿನಿಮಾಕ್ಕಾಗಿ ಭಾರಿ ಮೊತ್ತದ ಸಂಭಾವನೆಯನ್ನೂ ಸಹ ಆರ್ಹಾ ಪಡೆಯುತ್ತಿದ್ದಾರೆ. ಆರ್ಹಾಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಈ ಸಿನಿಮಾದಲ್ಲಿ ಇಲ್ಲವಾದರೂ ಕೇವಲ ಒಂದೆರಡು ದಿನದ ಚಿತ್ರೀಕರಣಕ್ಕೆ ಆರ್ಹಾಗೆ ಬರೋಬ್ಬರಿ 20 ಲಕ್ಷ ರೂಪಾಯಿ ಸಂಭಾವನೆ ದೊರೆಯುತ್ತಿದೆ. ಅಲ್ಲು ಆರ್ಹಾ ನಟಿಸಿದ ಮೊದಲ ಸಿನಿಮಾ ‘ಶಾಕುಂತಲಂ’ಗೂ ದೊಡ್ಡ ಮೊತ್ತದ ಸಂಭಾವನೆಯೇ ಸಿಕ್ಕಿತ್ತು.

ಅಲ್ಲು ಅರ್ಜುನ್​ಗೆ ಇಬ್ಬರು ಮಕ್ಕಳು, ದೊಡ್ಡವನು ಅಲ್ಲು ಅಯಾನ್, ಮಗಳು ಆರ್ಹಾ. ಅಯಾನ್​ಗೆ ಸಿನಿಮಾಗಳ ಮೇಲೆ ಹೆಚ್ಚು ಆಸಕ್ತಿ ಇದ್ದಂತಿಲ್ಲ. ಆದರೆ ಆರ್ಹಾಗೆ ಕ್ಯಾಮೆರಾ ಕಂಡರೆ ಬಹು ಪ್ರೀತಿ. ಉತ್ತಮ ಚೆಸ್ ಆಟಗಾರ್ತಿಯೂ ಆಗಿರುವ ಆರ್ಹಾ, ಒಮ್ಮೆಲೆ ಹಲವರೊಟ್ಟಿಗೆ ಚೆಸ್ ಆಡಿ ಗೆಲ್ಲಬಲ್ಲ ಬುದ್ಧಿವಂತೆ ಸಹ. ಅಲ್ಲು ಆರ್ಹಾಗೆ ಈಗಿನ್ನೂ ಆರು ವರ್ಷ ವಯಸ್ಸು.

ಜೂ ಎನ್​ಟಿಆರ್​ರ ದೇವರ ಸಿನಿಮಾಕ್ಕೆ ಮರಳುವುದಾದರೆ, ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಾಯಕಿ. ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ವಿಲನ್. ಮಿಷನ್ ಇಂಪಾಸಿಬಲ್ ಸೇರಿದಂತೆ ಹಲವು ಅತ್ಯುತ್ತಮ ಹಾಲಿವುಡ್ ಸಿನಿಮಾಗಳ ಸ್ಟಂಟ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿರುವ ಕೆನ್ನಿ ಬೇಟ್ಸ್ ಈ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ