ಮೆಲ್ಬೋರ್ನ್ ಸಿನಿಮೋತ್ಸವದಲ್ಲಿ ಕನ್ನಡ ಕಲರವ, ಬಾಲಿವುಡ್ ನಟರೊಟ್ಟಿಗೆ ಸೆಣೆಸಲಿರುವ ಕನ್ನಡ ನಟ-ನಟಿ

Film Festival: ಮೆಲ್ಬೋರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದು, ಇತರೆ ಚಿತ್ರರಂಗದ ನಟ-ನಟಿಯರ ಜೊತೆ ಸ್ಪರ್ಧಿಸುತ್ತಿದ್ದಾರೆ ಕನ್ನಡದ ನಟ-ನಟಿಯರು.

ಮೆಲ್ಬೋರ್ನ್ ಸಿನಿಮೋತ್ಸವದಲ್ಲಿ ಕನ್ನಡ ಕಲರವ, ಬಾಲಿವುಡ್ ನಟರೊಟ್ಟಿಗೆ ಸೆಣೆಸಲಿರುವ ಕನ್ನಡ ನಟ-ನಟಿ
ಚಲನಚಿತ್ರೋತ್ಸವ
Follow us
ಮಂಜುನಾಥ ಸಿ.
|

Updated on: Jul 14, 2023 | 6:35 PM

ಕನ್ನಡ ಚಿತ್ರರಂಗದ (Sandalwood) ಹೊಸ ಎತ್ತರಗಳನ್ನು ಏರುವತ್ತ ದಾಪುಗಾಲು ಹಾಕುತ್ತಿದೆ. ಸೀಮಿತ ಮಾರುಕಟ್ಟೆ, ಸೀಮಿತ ಮನಸ್ಥಿತಿಯನ್ನು ಮೀರಿ ಗಡಿಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಕನ್ನಡದ ಸಿನಿಮಾಗಳು ಈಗ ವಿದೇಶದಲ್ಲೂ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಿವೆ ಮಾತ್ರವಲ್ಲ ತಮ್ಮ ಗುಣಮಟ್ಟದಿಂದ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೂ ಭಾಜನವಾಗಿವೆ ಹಾಗೂ ನೆರೆ-ಹೊರೆಯ ಚಿತ್ರರಂಗದವರಿಗೆ ಗುಣಮಟ್ಟದಲ್ಲಿ, ಪ್ರತಿಭೆಯಲ್ಲಿ ಪ್ರಬಲ ಪ್ರತಿಸ್ಪರ್ಧೆ ಒಡ್ಡುತ್ತಿವೆ. ಇದೀಗ ಮೆಲ್ಬೋರ್ನ್ ಸಿನಿಮೋತ್ಸವದಲ್ಲಿ ಕನ್ನಡದ ಸಿನಿಮಾಗಳು ಗಮನ ಸೆಳೆಯುತ್ತಿವೆ, ಖ್ಯಾತನಾಮ ನಟ-ನಟಿಯರೊಟ್ಟಿಗೆ ಕನ್ನಡದ ನಟ-ನಟಿಯರು ಸ್ಪರ್ಧೆಗೆ ಇಳಿದಿದ್ದಾರೆ.

ಮೆಲ್ಬೋರ್ನ್​ ಭಾರತೀಯ ಸಿನಿಮೋತ್ಸವವು (Film Festival) ಆಗಸ್ಟ್ 11 ರಿಂದ ಪ್ರಾರಂಭವಾಗಲಿದ್ದು, ಈ ಸಿನಿಮೋತ್ಸವದಲ್ಲಿ ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳ ಸಿನಿಮಾಗಳು ಪರಸ್ಪರ ಸೆಣೆಸಲಿವೆ. 2022ರ ಹಲವು ಅತ್ಯುತ್ತಮ ಸಿನಿಮಾಗಳು ಸ್ಪರ್ಧೆಯಲ್ಲಿದ್ದು ಕನ್ನಡದ ಕೆಲವು ಸಿನಿಮಾಗಳು ಸಹ ನಾಮಿನೇಟ್ ಆಗಿದ್ದು ಪ್ರಶಸ್ತಿಯ ನಿರೀಕ್ಷೆಯಲ್ಲಿವೆ. ಮಾತ್ರವೇ ಅಲ್ಲದೆ ಕನ್ನಡದ ನಟರು ಸಹ ಬಾಲಿವುಡ್ ಸೇರಿದಂತೆ ನರೆ-ಹೊರೆಯ ದೊಡ್ಡ ನಟರ ಎದುರು ಸ್ಪರ್ಧಿಸುತ್ತಿದ್ದಾರೆ.

ಹದಿನೇಳೆಂಟು, ಕೋಳಿ ಎಸ್ರು, ಕಾಡಿನ ಜೀವಂತಿಕೆ, ಶಿವಮ್ಮ ಸಿನಿಮಾಗಳು ಮೆಲ್ಬೋರ್ನ್ ಭಾರತೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕನ್ನಡ ಸಿನಿಮಾಗಳಾಗಿವೆ. ಇನ್ನು ‘ಕೋಳಿ ಎಸ್ರು’ ಸಿನಿಮಾದ ನಟಿ ಅಕ್ಷತಾ ಪಾಂಡವಪುರ, ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದು, ಐಶ್ವರ್ಯಾ ರೈ, ರಾಣಿ ಮುಖರ್ಜಿ, ಕಾಜಲ್, ನೀನಾ ಗುಪ್ತಾ, ಸಾಯಿ ಪಲ್ಲವಿ, ಆಲಿಯಾ ಭಟ್, ಭೂಮಿ ಪಡ್ನೇಕರ್, ಮೃಣಾಲ್ ಠಾಕೂರ್ ಅವರುಗಳ ಎದುರು ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವ 2023: ನಾಮಿನೇಟ್ ಆದ ‘ಕಾಂತಾರ’, ‘ಹದಿನೇಳೆಂಟು’ ಸಿನಿಮಾ

ಇನ್ನು ಅತ್ಯುತ್ತಮ ನಟ ವಿಭಾಗದಲ್ಲಿ ‘ಕಾಂತಾರ’ ಸಿನಿಮಾದ ನಟ ರಿಷಬ್ ಶೆಟ್ಟಿ ಪ್ರಶಸ್ತಿಗೆ ರೇಸ್​ನಲ್ಲಿದ್ದಾರೆ. ಅತ್ಯುತ್ತಮ ನಟ ವಿಭಾಗದಲ್ಲಿಯೂ ಭಾರಿ ಸ್ಪರ್ಧೆಯೇ ಇದ್ದು, ಶಾರುಖ್ ಖಾನ್, ಚಿಯಾನ್ ವಿಕ್ರಂ, ದುಲ್ಕರ್ ಸಲ್ಮಾನ್, ವಿಜಯ್ ವರ್ಮಾ, ಪರೇಶ್ ರಾವಲ್, ರಾಜ್​ ಕುಮಾರ್ ರಾವ್, ಮನೋಜ್ ಭಾಜಪೇಯಿ, ಕಪಿಲ್ ಶರ್ಮಾ, ಮೋಹಿತ್ ಅಗರ್ವಾಲ್ ಅವರುಗಳು ಸಹ ಇದ್ದಾರೆ.

ಇನ್ನು ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಕನ್ನಡದ ‘ಕಾಂತಾರ’ ಸಿನಿಮಾ ಇದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ಸಿನಿಮಾ ಆಗಿದೆ. ಇದೇ ವಿಭಾಗದಲ್ಲಿ ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಸೀತಾರಾಮಮ್’, ತಮಿಳಿನ ‘ಪೊನ್ನಿಯಿನ್ ಸೆಲ್ವನ್’, ಹಿಂದಿಯ ‘ಬೇಡಿಯಾ’, ‘ಡಾರ್ಲಿಂಗ್ಸ್’, ‘ಬ್ರಹ್ಮಾಸ್ತ್ರ’, ‘ಪಠಾಣ್’, ‘ಮೋನಿಕಾ ಮೈ ಡಾರ್ಲಿಂಗ್’, ‘ಜೋಗಿ’, ‘ಡಾರ್ಲಿಂಗ್ಸ್’ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಬಹುತೇಕ ಹಿಂದಿ ಸಿನಿಮಾಗಳೇ ಎಲ್ಲ ವಿಭಾಗದಲ್ಲಿಯೂ ಹೆಚ್ಚಿಗಿವೆ. ಅತ್ಯುತ್ತಮ ಭಾರತೀಯ ಸಿನಿಮಾ ವಿಭಾಗದಲ್ಲಿ ಕನ್ನಡದ ‘ಹದಿನೇಳೆಂಟು’ ಸಿನಿಮಾ ಸ್ಥಾನ ಪಡೆದಿದೆ. ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ‘ಹದಿನೇಳೆಂಟು’ ಸಿನಿಮಾದ ನಿರ್ದೇಶಕ ಪೃಥ್ವಿ ಕೋಣೂರು ಸ್ಪರ್ಧೆಯಲ್ಲಿದ್ದಾರೆ.

ಅತ್ಯುತ್ತಮ ಸಿನಿಮಾ, ಅತ್ಯುತ್ತಮ ವೆಬ್ ಸರಣಿ, ಅತ್ಯುತ್ತಮ ಡಾಕ್ಯುಮೆಂಟರಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಿನಿಮಾ ನಟ, ಅತ್ಯುತ್ತಮ ಸಿನಿಮಾ ನಟಿ, ಅತ್ಯುತ್ತಮ ವೆಬ್ ಸರಣಿ ನಟ, ಅತ್ಯುತ್ತಮ ವೆಬ್ ಸರಣಿ ನಟಿ ಇನ್ನೂ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಮೆಲ್ಬೋರ್ನ್ ಭಾರತೀಯ ಸಿನಿಮೋತ್ಸವವು ಆಗಸ್ಟ್ 11ರಿಂದ ಪ್ರಾರಂಭವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ