World Record Film set: ಕೊಡಗಿನಲ್ಲಿ ಕನ್ನಡ ಚಿತ್ರರಂಗದಿಂದ ಕೇವಲ 22 ಗಂಟೆಯಲ್ಲಿ ಸದ್ದಿಲ್ಲದೆ ಗಿನ್ನೆಸ್ ವರ್ಲ್ಡ್​​ ರೆಕಾರ್ಡ್​​! ನೀವೂ ನೋಡಿ

ಕೇವಲ 30 ದಿನಗಳಲ್ಲಿ ಶೂಟಿಂಗ್ ಮುಗಿಸಿ ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇವರದ್ದಾಗಿದೆ. ಹಾಗಾಗಿ ಹಗಲು ರಾತ್ರಿ ಎನ್ನದೆ ಕೆಲಸವಾಗುತ್ತಿದೆ. ಎಲ್ಲಾ ಕಲಾವಿದರು ಕೂಡ ಶೂಟಿಂಗ್ ಲೊಕೇಶನಲ್ಲೇ ಇದ್ದು ಚಿತ್ರದ ಯಶಸ್ಸಿಗೆ ದುಡಿಯುತ್ತಿದ್ದಾರೆ.

World Record Film set: ಕೊಡಗಿನಲ್ಲಿ ಕನ್ನಡ ಚಿತ್ರರಂಗದಿಂದ ಕೇವಲ 22 ಗಂಟೆಯಲ್ಲಿ ಸದ್ದಿಲ್ಲದೆ ಗಿನ್ನೆಸ್ ವರ್ಲ್ಡ್​​ ರೆಕಾರ್ಡ್​​! ನೀವೂ ನೋಡಿ
ಕೊಡಗಿನಲ್ಲಿ ಕನ್ನಡ ಚಿತ್ರರಂಗದಿಂದ ಗಿನ್ನೆಸ್ ವರ್ಲ್ಡ್​​ ರೆಕಾರ್ಡ್​​!
Follow us
| Updated By: ಸಾಧು ಶ್ರೀನಾಥ್​

Updated on: Jul 04, 2023 | 12:47 PM

ಕನ್ನಡ ಚಿತ್ರರಂಗದ (Kannada Film Industry) ಹೊಸ ತಂಡವೊಂದು ಸದ್ದಿಲ್ಲದೆ ಕೊಡಗಿನಲ್ಲಿ ಗಿನ್ನೆಸ್ ದಾಖಲೆ (Guinness World Record) ಮಾಡಿದೆ. ಕೇವಲ 22 ಗಂಟೆಗಳಲ್ಲಿ ಬೃಹತ್ ಸೆಟ್​ ಹಾಕುವ ಮೂಲಕ ಇಡೀ ಚಿತ್ರರಂಗ ತಮ್ಮತ್ತ ತಿರುಗಿ ನೋಡುವಂತೆ ಮಾಡಿದೆ. ವಿಶ್ವ ದಾಖಲೆಯೊಂದಿಗೆ ಚಿತ್ರದ ನಿರ್ಮಾಣದಲ್ಲೂ ದೇಶದ ಇತಿಹಾಸದಲ್ಲೇ ಹಲವು ಪ್ರಯೋಗಳನ್ನ ನಡೆಸಿ ಇಡೀ ಚಿತ್ರರಂಗದ ಗಮನ ಸೆಳೆದಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೆಲವು ಚಿತ್ರಗಳು ಭರ್ಜರಿ ಪ್ರದರ್ಶನದ ಮೂಲಕ ಸದ್ದು ಮಾಡಿದ್ರೆ ಇನ್ನು ಕೆಲವು ಚಿತ್ರಗಳು ಬೇರೆಯದ್ದೇ ಕಾರಣಗಳಿಂದ ಸದ್ದು ಮಾಡುತ್ತಿದೆ. ಈ ಸಾಲಿಗೆ ಇದೀಗ ದೇವರ ಆಟ ಬಲ್ಲವರಾರು ಸಿನಿಮಾವೂ ಸೇರಿದೆ. ಕೊಡಗು (Kodagu) ಜಿಲ್ಲೆಯ ಮಡಿಕೇರಿ ಸಮೀಪದ ಸುಂಟಿಕೊಪ್ಪದ ಎಸ್ಟೇಟ್​ ಒಂದರಲ್ಲಿ ಚಿತ್ರತಂಡ ಬೃಹತ್​ ಸೆಟ್​ ಒಂದನ್ನ ಕೇವಲ 22 ಗಂಟೆಗಳಲ್ಲಿ ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿದೆ. ಇದು ಅತಿವೇಗ ದಲ್ಲಿ ನಿರ್ಮಾಣಗೊಂಡ ಸಿನಿಮಾ ಸೆಟ್ ಅಂತ ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಲು ವೇದಿಕೆ (Film set) ಸಿದ್ದವಾಗಿದೆ.

ದೇವರ ಆಟ ಆಟ ಬಲ್ಲವರಾರು ಸಿನಿಮಾದಲ್ಲಿ ಇದು ಕುದುರೆ ಲಾಯವಾಗಿ ಬಳಕೆಯಾಗುತ್ತದೆ. 1970ರ ದಶಕದ ಕುದುರೆ ಲಾಯದ ಪ್ರತಿರೂಪವನ್ನ ಇಲ್ಲಿ ನಿರ್ಮಾಣ ಮಾಡಿರುವುದಾಗಿ ಚಿತ್ರದ ನಾಯಕ ನಟ ಅರ್ಜುನ್ ರಮೇಶ್ ತಿಳಿಸಿದ್ರು. 150 ಅಡಿ ಉದ್ದ 80 ಅಗಲ ಮತ್ತು 19 ಅಡಿ ಎತ್ತರದ ಈ ಸೆಟ್​ ಎಲ್ಲರ ಗಮನ ಸೆಳೆಯುತ್ತಿದೆ. ಜಿಟಿಪಿಟಿ ಮಳೆಯ ಮಧ್ಯೆಯೂ 120 ಕಾರ್ಮಿಕರು ಕಲಾ ನಿರ್ದೇಶಕರ ಸೂಚನೆಯಂತೆ ಕೆಲಸ ಮಾಡಿ ಸೆಟ್ ಕೆಲಸ ಮಾಡಿದ್ದಾರೆ. ಇವರೆಲ್ಲರೂ ತಮಿಳುನಾಡಿನಿಂದ ಬಂದಿದ್ದಾರೆ.

ಹನುಮಂತರಾಜು ಎನ್​ ಇದರ ನಿರ್ಮಾಪಕರಾಗಿದ್ದು ಆರ್​ ಹೆಚ್​ ಎಂಟರ್​ಪ್ರೈಸಸ್ ಬ್ಯಾನರ್​ ಅಡಿ ಸಿನಿಮಾ ನಿರ್ಮಾಣವಾಗುತ್ತಿದೆ. ಜನಾರ್ಧನ ಪಿ ಜಾನ್ ಅವರ ನಿರ್ದೇಶನ ಚಿತ್ರಕ್ಕಿದೆ. ಸಿಂಧೂ ಲೋಕನಾಥ್ ನಾಯಕಿ ನಟಿಯಾಗಿದ್ದು ಇವರ ಜೊತೆ ಕೇರಳ ಬೆಡಗಿ ವರ್ಷಾ ಕೂಡ ಬಣ್ಣ ಹಚ್ಚಿದ್ದಾರೆ. ಸಧ್ಯ ಸುಂಟಿಕೊಪ್ಪ ಮತ್ತು ಮಡಿಕೇರಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಡಬ್ಬಿಂಗ್, ಸಂಗೀತ ನಿರ್ದೇಶನ ಎಲ್ಲವೂ ಕೂಡ ಶೂಟಿಂಗ್ ಸ್ಥಳದಲ್ಲೇ ನಡೆಯುತ್ತಿದೆ. ಶೂಟಿಂಗ್ ಬೇಕಾದ ಕಾಸ್ಟ್ಯೂಮ್ ಗಳನ್ನ ಕೂಡ ಸ್ಥಳದಲ್ಲೇ ಹೊಲಿಯಲಾಗುತ್ತಿದೆ.

ಕೇವಲ 30 ದಿನಗಳಲ್ಲಿ ಶೂಟಿಂಗ್ ಮುಗಿಸಿ ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇವರದ್ದಾಗಿದೆ. ಹಾಗಾಗಿ ಹಗಲು ರಾತ್ರಿ ಎನ್ನದೆ ಕೆಲಸವಾಗುತ್ತಿದೆ. ಎಲ್ಲಾ ಕಲಾವಿದರು ಕೂಡ ಶೂಟಿಂಗ್ ಲೊಕೇಶನಲ್ಲೇ ಇದ್ದು ಚಿತ್ರದ ಯಶಸ್ಸಿಗೆ ದುಡಿಯುತ್ತಿದ್ದಾರೆ. ಈ ಮೂಲಕ ಚಿತ್ರವೊಂದನ್ನ ಕೇವಲ 30 ದಿನಗಳಲ್ಲಿ ಮುಗಿಸಿದ ದಾಖಲೆ ಬರೆಯುವ ಸಿದ್ದತೆಯಲ್ಲಿದ್ದಾರೆ. ಒಟ್ಟಾರೆ ದೇವರ ಆಟ ಬಲ್ಲವರಾರು ಸಿನಿಮಾ ತಂಡ ಹಲವು ದಾಖಲೆಗಳನ್ನ ಮಾಡುವ ಮೂಲಕ ಜನರ ಗಮನ ಸೆಳೆಯಲು ಯತ್ನಿಸುತ್ತಿದೆ.

ಕೊಡಗು ಜಿಲ್ಲೆಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ