‘BAD’ ಸಿನಿಮಾದಲ್ಲಿ ನಟಿ ಮಾನ್ವಿತಾ ಕಾಮತ್; ಯಾವುದಕ್ಕೂ ಅಂಜದ ಬೋಲ್ಡ್​ ಹುಡುಗಿ ಪಾತ್ರ

Manvitha Kamath: ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಮಾನ್ವಿತಾ ಕಾಮತ್​ ಅವರಿಗೆ ಖುಷಿ ಇದೆ. ಪವಿತ್ರಾ ಅಥವಾ ಪವಿ ಎಂಬ ಪಾತ್ರವನ್ನು ಅವರು ಮಾಡುತ್ತಿದ್ದಾರೆ.

‘BAD’ ಸಿನಿಮಾದಲ್ಲಿ ನಟಿ ಮಾನ್ವಿತಾ ಕಾಮತ್; ಯಾವುದಕ್ಕೂ ಅಂಜದ ಬೋಲ್ಡ್​ ಹುಡುಗಿ ಪಾತ್ರ
ಮಾನ್ವಿತಾ ಕಾಮತ್​
Follow us
ಮದನ್​ ಕುಮಾರ್​
|

Updated on: Jul 14, 2023 | 3:07 PM

ಶಿವರಾಜ್​ಕುಮಾರ್​ ನಟನೆ ‘ಟಗರು’, ವಿಕ್ಕಿ ಅಭಿನಯದ ‘ಕೆಂಡಸಂಪಿಗೆ’ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದ ನಟಿ ಮಾನ್ವಿತಾ ಕಾಮತ್ (Manvitha Kamath)​ ಅವರು ಈಗ ಒಂದಷ್ಟು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ (Sandalwood) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಬೋಲ್ಡ್​ ಪಾತ್ರಗಳು ಮಾನ್ವಿತಾಗೆ ಹೊಸದೇನೂ ಅಲ್ಲ. ಈಗ ಅವರು ಅಂಥದ್ದೇ ಮತ್ತೊಂದು ಪಾತ್ರದ ಮೂಲಕ ಜನರನ್ನು ರಂಜಿಸಲು ಸಜ್ಜಾಗಿದ್ದಾರೆ. ‘BAD’ ಸಿನಿಮಾಗೆ ಮಾನ್ವಿತಾ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಚಿತ್ರಕ್ಕೆ ಪಿ.ಸಿ. ಶೇಖರ್​ (PC Shekar) ನಿರ್ದೇಶನ ಮಾಡುತ್ತಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿ ಪಿ.ಸಿ. ಶೇಖರ್​ ಅನುಭವ ಪಡೆದಿದ್ದಾರೆ. ಅವರು ಅವರು ಕೈಗೆತ್ತಿಕೊಂಡಿರುವ ‘BAD’ ಸಿನಿಮಾ ಬೇರೆ ಬೇರೆ ಕಾರಣಗಳಿಂದ ಸುದ್ದಿ ಆಗುತ್ತಿದೆ. ನಕುಲ್ ಗೌಡ ಅವರು ಹೀರೋ ಆಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಫಸ್ಟ್​ ಲುಕ್​ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಸಿನಿಮಾದ ನಾಯಕಿ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

‘BAD’ ಸಿನಿಮಾದಲ್ಲಿ ಮಾನ್ವಿತಾ ಕಾಮತ್ ಅವರು ಮಾಡಲಿರುವ ಪಾತ್ರದ ಬಗ್ಗೆ ನಿರ್ದೇಶಕ ಪಿ.ಸಿ. ಶೇಖರ್ ಮಾತನಾಡಿದ್ದಾರೆ. ‘ಈ ಚಿತ್ರದಲ್ಲಿ ಮಾನ್ವಿತಾ ನಿಭಾಯಿಸಿರುವ ಪಾತ್ರದ ಹೆಸರು ಪವಿತ್ರಾ ಅಥವಾ ಪವಿ. ಇದು ತುಂಬಾ ಬೋಲ್ಡ್ ಆದಂತಹ ಪಾತ್ರ. ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ಅವರ ಕಥೆ ಸಾಗುತ್ತದೆ. ಈ ಮೊದಲೇ ನಾನು ತಿಳಿಸಿದಂತೆ ಕಾಮ, ಕ್ರೋಧ ಮುಂತಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ 6 ಪಾತ್ರಗಳು ಈ ಸಿನಿಮಾದಲ್ಲಿವೆ. ಅವುಗಳಲ್ಲಿ ಒಂದು ಪಾತ್ರವನ್ನು ಮಾನ್ವಿತಾ ಕಾಮತ್​ ನಿಭಾಯಿಸುತ್ತಿದ್ದಾರೆ’ ಎಂದು ಪಿ.ಸಿ. ಶೇಖರ್​ ಹೇಳಿದ್ದಾರೆ.

ಇದನ್ನೂ ಓದಿ: ಗ್ಲಾಮರಸ್ ಲುಕ್​ನಲ್ಲಿ ಮಾನ್ವಿತಾ ಕಾಮತ್

ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಮಾನ್ವಿತಾ ಕಾಮತ್​ ಅವರಿಗೆ ಖುಷಿ ಇದೆ. ‘ನನಗೆ ಈ ಚಿತ್ರದಲ್ಲಿನ ಪಾತ್ರ ತುಂಬ ಇಷ್ಟವಾಯ್ತು. ಪವಿತ್ರಾ ಎಂಬುದು ನನ್ನ ಪಾತ್ರದ ಹೆಸರು. ಯಾವುದಕ್ಕೂ ಅಂಜದಂತಹ ಬೋಲ್ಡ್ ವ್ಯಕ್ತಿತ್ವ ಇರುವ ಹುಡುಗಿಯ ಪಾತ್ರ ಅದು. ಈ ಮೊದಲು ನಿರ್ದೇಶಕ ಸೂರಿ ಅವರು ಪಾತ್ರದ ಕಾಸ್ಟ್ಯೂಮ್ಸ್ ಹಿಂಗೇ ಇರಬೇಕು ಎಂದು ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ಈಗ ನಿರ್ದೇಶಕ ಪಿ.ಸಿ. ಶೇಖರ್ ಅವರು ಸಹ ಕಾಸ್ಟ್ಯೂಮ್​ಗೆ ಹೆಚ್ಚು ಮಹತ್ವ ನೀಡಿದ್ದಾರೆ. ಈವರೆಗೂ ಬೇರೆ ಸಿನಿಮಾಗಳಲ್ಲಿ ನಾನು ಮಾಡಿರದಂತಹ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ’ ಎಂದು ಮಾನ್ವಿತಾ ಕಾಮತ್ ಹೇಳಿದ್ದಾರೆ.

ಇದನ್ನೂ ಓದಿ: ಮಾನ್ವಿತಾ ಕಾಮತ್​ ರಂಗುರಂಗಿನ ಫೋಟೋಶೂಟ್​

ಈ ಹಿಂದೆ ‘ಪ್ರೀತಿಯ ರಾಯಭಾರಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದ ನಕುಲ್ ಗೌಡ ಅವರು ‘BAD’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರ ಜೊತೆ ಮಾನ್ವಿತಾ ಕಾಮತ್​, ಅಪೂರ್ವ ಭಾರದ್ವಾಜ್, ಸಾಯಿ ಕೃಷ್ಣ, ಅಶ್ವಿನಿ, ಮಂಜುನಾಥ್ ಮುಂತಾದವರು ನಟಿಸುತ್ತಿದ್ದಾರೆ. ಎಸ್.ಆರ್. ವೆಂಕಟೇಶ್ ಗೌಡ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಪಿ.ಸಿ. ಶೇಖರ್ ಸಂಕಲನ, ಶಕ್ತಿ ಶೇಖರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಚಿನ್ ಬಿ. ಹೊಳಗುಂಡಿ ಸಂಭಾಷಣೆ ಅವರ ಬರೆದಿದ್ದು, ಜಿ. ರಾಜಶೇಖರ್ ಅವರು ಕಲಾ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್