ಜೋಗ ಜಲಪಾತದ ತುದಿಯಲ್ಲಿ ಪುನೀತ್ ರಾಜ್​ಕುಮಾರ್ ಪುಶಪ್ಸ್: ಈ ವಿಡಿಯೋ ನೋಡಿದ್ದೀರ

Puneeth Rajkumar: ಜನ ನಿಲ್ಲಲೂ ಭಯ ಪಡುವ ಜೋಗ ಜಲಪಾತದ ತುದಿಯಲ್ಲಿ ಪುನೀತ್ ರಾಜ್​ಕುಮಾರ್ ಪುಶ್ ಅಪ್ ಮಾಡಿದ್ದರು. ಇಲ್ಲಿದೆ ವಿಡಿಯೋ

ಜೋಗ ಜಲಪಾತದ ತುದಿಯಲ್ಲಿ ಪುನೀತ್ ರಾಜ್​ಕುಮಾರ್ ಪುಶಪ್ಸ್: ಈ ವಿಡಿಯೋ ನೋಡಿದ್ದೀರ
ಪುನೀತ್ ರಾಜ್​ಕುಮಾರ್
Follow us
ಮಂಜುನಾಥ ಸಿ.
|

Updated on: Jul 13, 2023 | 9:17 PM

ಪುನೀತ್ ರಾಜ್​ಕುಮಾರ್ (Puneeth Rajkumar) ಅಗಲಿ ವರ್ಷಕ್ಕೂ ಹೆಚ್ಚು ಕಾಲವಾಯ್ತು. ಆದರೆ ಅವರ ನೆನಪು ಕನ್ನಡ ಸಿನಿಮಾ ಪ್ರೇಕ್ಷಕರಿಂದ ತುಸುವೂ ಮಾಸಿಲ್ಲ. ಈಗಲೂ ಜಾತ್ರೆಗಳಲ್ಲಿ, ಹಬ್ಬಗಳಲ್ಲಿ ಪುನೀತ್ ಭಾವಚಿತ್ರವನ್ನು ದೇವರ ಜೊತೆಗೆ ಮೆರವಣಿಗೆ ಮಾಡುವ ದೃಶ್ಯಗಳು ಕಾಣಸಿಗುತ್ತವೆ. ಕೇವಲ ಸಿನಿಮಾದಿಂದಲೇ ಕನ್ನಡ ಜನರಿಗೆ ಇಷ್ಟು ಆಪ್ತವಾಗಿಬಿಟ್ಟದ್ದರಾ ಪುನೀತ್? ಅಲ್ಲ ಎನಿಸುತ್ತದೆ, ಪುನೀತ್ ರನ್ನು ಜನರಿಗೆ ಆಪ್ತವಾಗಿಸಿದ್ದು ಅವರ ಸರಳವಾದ ವ್ಯಕ್ತಿತ್ವ, ಸ್ಟಾರ್ ಎಂಬ ಹಮ್ಮು ಕಳಚಿ ಅವರು ಎಲ್ಲರೊಟ್ಟಿಗೆ ಬೆರೆಯುತ್ತಿದ್ದ ರೀತಿ, ಎಲ್ಲದರ ಬಗ್ಗೆ ವ್ಯಕ್ತಪಡಿಸುತ್ತಿದ್ದ ಸಹಜ ಕುತೂಹಲ, ಬದುಕುತ್ತಿದ್ದ ರೀತಿಯೇ ಅವರನ್ನು ಜನರಿಗೆ ಹತ್ತಿರವಾಗಿಸಿದೆ.

ಪುನೀತ್ ರಾಜ್​ಕುಮಾರ್ ಫೀಟ್​ನೆಸ್​ ಬಗ್ಗೆ ಅತೀವ ಕಾಳಜಿ ವುಳ್ಳವರಾಗಿದ್ದರು ಎಂಬುದು ಎಲ್ಲರಿಗೂ ತಿಳಿದಿರುವುದೇ. ಜೊತೆಗೆ ಅವರು ಪ್ರಕೃತಿಯ ಬಗ್ಗೆಯೂ ವಿಶೇಷ ಪ್ರೀತಿ ಹೊಂದಿದ್ದರು. ಆಗಾಗ್ಗೆ ಅರಣ್ಯ ಪ್ರವಾಸ, ಅರಣ್ಯವಾಸಗಳನ್ನು ಮಾಡುತ್ತಿದ್ದರು ಪುನೀತ್. ಇದೀಗ ಪುನೀತ್​ರ ಹೊಸ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಜೋಗ ಜಲಪಾತದ ತುತ್ತ ತುದಿಯಲ್ಲಿ ಪುನೀತ್ ರಾಜ್​ಕುಮಾರ್ ದಂಡ (ಪುಶಪ್ಸ್) ಹೊಡೆದಿದ್ದಾರೆ. ಸಮತಟ್ಟಲ್ಲದ, ಏರು ರೀತಿಯಲ್ಲಿರುವ ಜಾರುವ ಬಂಡೆಯ ಮೇಲೆ ದೇಹದ ತೂಕವನ್ನೆಲ್ಲ ಕೈಗಳ ಮೇಲೆ ಹಾಕಿ ದಂಡ ಹೊಡೆದಿದ್ದಾರೆ ಪುನೀತ್ ರಾಜ್​ಕುಮಾರ್.

ಪುನೀತ್ ರಾಜ್​ಕುಮಾರ್ ಹೀಗೆ ಜಲಪಾತದ ತುದಿಯಲ್ಲಿ ದಂಡ ಹೊಡೆಯುತ್ತಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಪುನೀತ್ ಅಭಿಮಾನಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪುನೀತ್​ರ ಪ್ರಕೃತಿ ಪ್ರೇಮ ಹಾಗೂ ಫಿಟ್​ನೆಸ್​ ಬಗ್ಗೆ ಅವರಿಗಿದ್ದ ಕಾಳಜಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ:ಪುನೀತ್ ರಾಜ್​ಕುಮಾರ್ ಇಂದಾಗಿ ಪ್ರಿಯಾಮಣಿಗೆ ಸಿಕ್ತು ಶಾರುಖ್ ಜೊತೆ ಕೆಲಸ ಮಾಡುವ ಅವಕಾಶ

ಪುನೀತ್​ ರಾಜ್​ಕುಮಾರ್ ಅವರು ಬ್ಲಾಕ್ ಫ್ಲಿಪ್, ಜಂಪ್​ಗಳಲ್ಲೆಲ್ಲ ಬಹಳ ಪ್ರವೀಣರು, ಅವರ ಫಿಟ್​ನೆಸ್​ನ ಹಲವು ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತಿದ್ದವು. ತಮ್ಮ ಸಿನಿಮಾಗಳಲ್ಲಿ ಸಹ ಅಪ್ಪು ಡ್ಯೂಪ್​ಗಳನ್ನು ಬಳಸುತ್ತಿದ್ದು ಬಹಳ ಕಡಿಮೆಯೇ. ಕಠಿಣಾತಿ ಕಠಿಣ ಸ್ಟಂಟ್​ಗಳನ್ನು ಸ್ವತಃ ಅವರೇ ನಿರ್ವಹಿಸುತ್ತಿದ್ದರು. ಅಪ್ಪು, ಆಕಾಶ್​ ಕಾಲದಿಂದಲೂ ಫೈಟ್​ಗಳಲ್ಲಿ ಸ್ಟಂಟ್​ಗಳನ್ನು ಮಾಡುತ್ತಾ ಬಂದವರು ಅಪ್ಪು. ಫಿಟ್​ನೆಸ್​ ಬಗ್ಗೆ ಅಷ್ಟೋಂದು ಕಾಳಜಿ ವಹಿಸಿದ್ದಾಗಿಯೂ ಅಪ್ಪು ಅಕಾಲ ಮರಣಕ್ಕೆ ತುತ್ತಾಗಿದ್ದು ಕನ್ನಡಿಗರ ಪಾಲಿಗೆ ತೀರದ ನೋವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!