Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ರಾಜ್​ಕುಮಾರ್ ಇಂದಾಗಿ ಪ್ರಿಯಾಮಣಿಗೆ ಸಿಕ್ತು ಶಾರುಖ್ ಜೊತೆ ಕೆಲಸ ಮಾಡುವ ಅವಕಾಶ

Priyamani: ಶಾರುಖ್ ಖಾನ್ ಜೊತೆ ನಟಿಸುವ ಕನಸು ನನಸಾಗಲು ಪುನೀತ್ ರಾಜ್​ಕುಮಾರ್ ಹೇಗೆ ಪರೋಕ್ಷವಾಗಿ ಕಾರಣರಾದರು ಎಂಬ ಬಗ್ಗೆ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ.

ಪುನೀತ್ ರಾಜ್​ಕುಮಾರ್ ಇಂದಾಗಿ ಪ್ರಿಯಾಮಣಿಗೆ ಸಿಕ್ತು ಶಾರುಖ್ ಜೊತೆ ಕೆಲಸ ಮಾಡುವ ಅವಕಾಶ
ಪ್ರಿಯಾಮಣಿ-ಪುನೀತ್-ಶಾರುಖ್ ಖಾನ್
Follow us
ಮಂಜುನಾಥ ಸಿ.
|

Updated on:Jun 27, 2023 | 5:48 PM

ಅಪ್ಪಟ ಕನ್ನಡತಿಯಾಗಿದ್ದರೂ ಪ್ರಿಯಾಮಣಿ (Priyamani) ಹೆಚ್ಚು ಮಿಂಚಿರುವುದು ಪರ ಭಾಷೆಯ ಸಿನಿಮಾಗಳಲ್ಲಿಯೇ. ತಮಿಳಿನ ಕಣ್ಗಳ್ ಖೈದು ಸೇಯ್ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಪ್ರಿಯಾಮಣಿ, ತಮಿಳಿನ ಪರತ್ತಿವೀರನ್ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರ ಪ್ರಶಸ್ತಿ ಸಹ ಪಡೆದಿದ್ದಾರೆ. ವೃತ್ತಿ ಬದುಕಿನ ಆರಂಭದಲ್ಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಪ್ರಿಯಾಮಣಿ ಕನ್ನಡಕ್ಕೆ ಬಂದಿದ್ದು ಪುನೀತ್ ರಾಜ್​ಕುಮಾರ್ (Puneeth Rajkumar) ನಟನೆಯ ರಾಮ್ ಸಿನಿಮಾ ಮೂಲಕ. ಪುನೀತ್ ಅವರ ಆತ್ಮೀಯ ಮಿತ್ರರಲ್ಲಿ ಒಬ್ಬರಾಗಿದ್ದ ಪ್ರಿಯಾಮಣಿ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮಗೆ ಶಾರುಖ್ ಖಾನ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಗುವಲ್ಲಿ ಹೇಗೆ ಪುನೀತ್ ರಾಜ್​ಕುಮಾರ್ ಸಹ ಕಾರಣರಾದರು ಎಂಬ ಬಗ್ಗೆ ಮಾತನಾಡಿದ್ದಾರೆ.

ಪ್ರಿಯಾಮಣಿಯವರ ಮೆಚ್ಚಿನ ನಟ ಶಾರುಖ್ ಖಾನ್, ಅವರೊಟ್ಟಿಗೆ ತೆರೆ ಹಂಚಿಕೊಳ್ಳಬೇಕು ಎಂಬುದು ಪ್ರಿಯಾಮಣಿಯ ಬಹು ವರ್ಷದ ಕನಸಾಗಿತ್ತಂತೆ. ಆ ಕನಸು ನನಸಾಗಿದ್ದು 2013ರಲ್ಲಿ. ಶಾರುಖ್ ಖಾನ್​ರ ಸೂಪರ್ ಹಿಟ್ ಸಿನಿಮಾ ಚೆನ್ನೈ ಎಕ್ಸ್​ಪ್ರೆಸ್​ನಲ್ಲಿ ಪ್ರಿಯಾಮಣಿ, ಶಾರುಖ್ ಖಾನ್ ಜೊತೆ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದರು. ಒನ್, ಟು, ತ್ರೀ ಫೋರ್ ಎಂದು ಶುರುವಾಗುವ ಈ ಹಾಡು ಸಖತ್ ವೈರಲ್ ಆಯಿತು. ಆದರೆ ಆ ಹಾಡಿನ ಅವಕಾಶ ಹೇಗೆ ಸಿಕ್ಕಿತು. ಅದಕ್ಕೆ ಪರೋಕ್ಷವಾಗಿ ಪುನೀತ್ ಹೇಗೆ ಕಾರಣರಾದರು ಎಂಬುದನ್ನು ಪ್ರಿಯಾಮಣಿ ವಿವರಿಸಿದ್ದಾರೆ.

ಒಮ್ಮೆ ಪ್ರಿಯಾಮಣಿ ಬೆಂಗಳೂರಿನ ತಮ್ಮ ಮನೆಯಲ್ಲಿದ್ದಾಗ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಕಚೇರಿಯಿಂದ ಕರೆ ಬಂತಂತೆ. ನೀವು ನಮ್ಮ ಸಿನಿಮಾದಲ್ಲಿ ಹಾಡೊಂದಕ್ಕೆ ಡ್ಯಾನ್ಸ್ ಮಾಡಬೇಕು ಎಂದಿದ್ದಾರೆ. ಮೊದಲಿಗೆ ಪ್ರಿಯಾಮಣಿ ನಂಬಲಿಲ್ಲವಂತೆ. ರೋಹಿತ್ ಶೆಟ್ಟಿ ಸಿನಿಮಾದಲ್ಲಿ ನನಗೆ ಏಕೆ ಅವಕಾಶ ಸಿಗುತ್ತದೆ ಎಂದುಕೊಂಡಿದ್ದಾರೆ. ಆದರೆ ಪ್ರಿಯಾಮಣಿಯ ಮ್ಯಾನೇಜರ್, ಇಲ್ಲ ನಿಜಕ್ಕೂ ರೋಹಿತ್ ಶೆಟ್ಟಿ ಸಿನಿಮಾದಲ್ಲಿ ನಿಮಗೆ ಡ್ಯಾನ್ಸ್ ಮಾಡಲಿಕ್ಕಿದೆ ಎಂದಾಗ ಪ್ರಿಯಾಮಣಿ ಮುಂಬೈಗೆ ಹೋದರಂತೆ.

ಇದನ್ನೂ ಓದಿ: ನನ್ನ ಶಕ್ತಿಯನ್ನು ನನಗೆ ಪರಿಚಯಿಸಿದ್ದು ಪುನೀತ್ ರಾಜ್​ಕುಮಾರ್, ಅವರನ್ನು ಭೇಟಿಯಾಗಿದ್ದು ಪುಣ್ಯ: ರಶ್ಮಿಕಾ ಮಂದಣ್ಣ

ರೋಹಿತ್ ಶೆಟ್ಟಿ ಕಚೇರಿಗೆ ಹೋದಾಗ ಗೊತ್ತಾಯಿತಂತೆ ತಾವು ಡ್ಯಾನ್ಸ್ ಮಾಡಬೇಕಿರುವುದು ಶಾರುಖ್ ಖಾನ್ ಜೊತೆಗೆ ಎಂದು. ನೀವು ಏಕೆ ನನ್ನನ್ನೇ ಈ ಹಾಡಿಗೆ ಆಯ್ದುಕೊಂಡಿರಿ ಎಂದು ಕೇಳಿದಾಗ ರೋಹಿತ್ ಹೇಳಿದರಂತೆ, ನಾವು ಯೂಟ್ಯೂಬ್​ನಲ್ಲಿ ನಿಮ್ಮ ಹಾಡೊಂದನ್ನು ನೋಡಿದೆವು. ಅದರಲ್ಲಿ ನೀವು ಪುನೀತ್ ರಾಜ್​ಕುಮಾರ್ ಜೊತೆ ಡ್ಯಾನ್ಸ್ ಮಾಡುತ್ತಿದ್ದಿರಿ. ಆ ಹಾಡು ನಮಗೆ ಬಹಳ ಇಷ್ಟವಾಯಿತು ಹಾಗಾಗಿ ನಾವು ಚೆನ್ನೈ ಎಕ್ಸ್​ಪ್ರೆಸ್ ಸಿನಿಮಾದ ಹಾಡಿಗೆ ನಿಮ್ಮನ್ನು ಆರಿಸಿಕೊಂಡೆವು ಎಂದಿದ್ದಾರೆ. ಪುನೀತ್ ರಾಜ್​ಕುಮಾರ್ ಜೊತೆ ಪ್ರಿಯಾಮಣಿ ನಟಿಸಿದ್ದ ರಾಮ್ ಸಿನಿಮಾದ ಹೊಸ ಗಾನ ಬಜಾನ ಹಾಡನ್ನು ನೋಡಿದ ರೋಹಿತ್ ಶೆಟ್ಟಿ, ಪ್ರಿಯಾಮಣಿಯನ್ನು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿದ್ದರಂತೆ.

ಸಂದರ್ಶನದಲ್ಲಿ ಸಹ ಪುನೀತ್ ಅನ್ನು ಪ್ರೀತಿಯಿಂದ ನೆನಪಿಸಿಕೊಂಡಿರುವ ಪ್ರಿಯಾಮಣಿ, ಪುನೀತ್ ಅದ್ಭುತವಾದ ವ್ಯಕ್ತಿ. ನನ್ನ ಅತ್ಯಂತ ಆತ್ಮೀಯ ಗೆಳೆಯ. ಅವರಷ್ಟು ಸಿಹಿಯಾದ ವ್ಯಕ್ತಿಯನ್ನು ನಾನು ನೋಡಿಲ್ಲ. ಈಗಲೂ ನನ್ನ ಪಾಲಿನ ಅತ್ಯಂತ ಆತ್ಮೀಯ ವ್ಯಕ್ತಿ ಅವರು. ಅವರ ನಗುವಿನಲ್ಲಿ ಸಾಂಕ್ರಾಮಿಕತೆ ಇತ್ತು, ನಗು ನೋಡಿದವರಿಗೂ ಮುಗುಳ್ನಗೆ ಮೂಡುತ್ತಿತ್ತು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Tue, 27 June 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ