Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಶಕ್ತಿಯನ್ನು ನನಗೆ ಪರಿಚಯಿಸಿದ್ದು ಪುನೀತ್ ರಾಜ್​ಕುಮಾರ್, ಅವರನ್ನು ಭೇಟಿಯಾಗಿದ್ದು ಪುಣ್ಯ: ರಶ್ಮಿಕಾ ಮಂದಣ್ಣ

Puneeth Rajkumar: ರಶ್ಮಿಕಾ ಮಂದಣ್ಣ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರಂತೆ ಪುನೀತ್ ರಾಜ್​ಕುಮಾರ್. ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.

ನನ್ನ ಶಕ್ತಿಯನ್ನು ನನಗೆ ಪರಿಚಯಿಸಿದ್ದು ಪುನೀತ್ ರಾಜ್​ಕುಮಾರ್, ಅವರನ್ನು ಭೇಟಿಯಾಗಿದ್ದು ಪುಣ್ಯ: ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ-ಪುನೀತ್ ರಾಜ್​ಕುಮಾರ್
Follow us
ಮಂಜುನಾಥ ಸಿ.
|

Updated on: May 31, 2023 | 9:29 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟಿ. ನಾನು ಇಷ್ಟು ಎತ್ತರಕ್ಕೆ ಏರಬಲ್ಲೆ ಎಂಬ ವಿಶ್ವಾಸ ಸ್ವತಃ ರಶ್ಮಿಕಾಗೆ ಇರಲಿಲ್ಲವಂತೆ. ಯಾರಾದರೂ ಸಹ ಅಚ್ಚರಿ ಪಡಬಹುದಾದಂಥಹಾ ಬೆಳವಣಿಗೆ ರಶ್ಮಿಕಾರದ್ದು. ಅತ್ಯಂತ ಕಡಿಮೆ ಅವಧಿಯಲ್ಲಿಯೇ ತೆಲುಗು, ತಮಿಳು ಈಗ ಬಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಒಬ್ಬರಾದ ಮೇಲೊಬ್ಬ ಸ್ಟಾರ್ ನಟರುಗಳೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆದರೆ ನಟನೆ ಆರಂಭಿಸಿದಾಗ ಇಷ್ಟು ದೊಡ್ಡದಾಗಿ ಅವರು ಯೋಚಿಸಿರಲೇ ಇಲ್ಲವಂತೆ ಆದರೆ ಅವರ ಶಕ್ತಿಯನ್ನು ಅವರಿಗೆ ಪರಿಚಯಿಸಿದ್ದು ಪುನೀತ್ ರಾಜ್​ಕುಮಾರ್ (Puneeth Rajkumar). ಈ ವಿಷಯವನ್ನು ಅವರು ಮತ್ತೊಮ್ಮೆ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಿರಿಕ್ ಪಾರ್ಟಿ ಆದ ಕೂಡಲೇ ನನಗೆ ಅಂಜನೀಪುತ್ರ ಸಿನಿಮಾದ ಅವಕಾಶ ದೊರಕಿತು. ಆ ಸಿನಿಮಾವನ್ನು ನಾನು ಮರೆಯಲಾರೆ. ಸ್ವತಃ ನನಗಿಂತಲೂ ನನ್ನಲ್ಲಿ ಹೆಚ್ಚಿನ ವಿಶ್ವಾಸ ಪುನೀತ್ ರಾಜ್​ಕುಮಾರ್ ತೋರಿಸಿದರು. ನಮೊದಲ ಸಿನಿಮಾ ಸೂಪರ್ ಹಿಟ್ ಆದಾಗ ಏನೋ ಅದೃಷ್ಟದಿಂದ ನಾನು ನಟಿಯಾಗಿದ್ದೇನೆ ಎಂದುಕೊಂಡಿದ್ದೆ. ಆದರೆ ನ್ನ ಶಕ್ತಿಯನ್ನು ನನಗೆ ಪರಿಚಯಿಸಿದ್ದೇ ಪುನೀತ್ ರಾಜ್​ಕುಮಾರ್. ನೀನು ಶ್ರದ್ಧೆವಹಿಸಿ ಕೆಲಸ ಮಾಡಿ ದೊಡ್ಡದಾಗಿ ಯೋಚಿಸಿದರೆ ಅದ್ಭುತಗಳನ್ನು ಸೃಷ್ಟಿಸಬಲ್ಲೆ ಎಂದು ಪುನೀತ್ ನನಗೆ ಹೇಳಿದರು” ಎಂದು ರಶ್ಮಿಕಾ ಮಂದಣ್ಣ ಯೂಟ್ಯೂಬ್ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಂಜನಿಪುತ್ರ ಸಿನಿಮಾ ಮೂಲಕ ನನಗೆ ದೊರೆತ ಆತ್ಮವಿಶ್ವಾಸದಿಂದಲೇ ಆಗ ನನಗೆ ಹೊಸ ಭಾಷೆಯಾಗಿದ್ದ ತೆಲುಗಿನಲ್ಲಿ ಛಲೋ ಸಿನಿಮಾದಲ್ಲಿ ನಟಿಸಲು ಸಾಧ್ಯವಾಯಿತು. ನಾನು ನನ್ನ ನಟನಾ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಹಾಗೂ ದೊಡ್ಡದಾಗಿ ಯೋಚನೆ ಮಾಡುವಲ್ಲಿ ಪುನೀತ್ ಅವರೇ ನನಗೆ ಸ್ಪೂರ್ತಿ ತುಂಬಿದರು. ನಾನು ಪುನೀತ್ ಅವರನ್ನು ಭೇಟಿ ಆದೆ ಎಂಬ ಬಗ್ಗೆ ನಾನೂ ಈಗಲೂ ದೇವರಿಗೆ ಧನ್ಯವಾದ ಹೇಳುತ್ತೇನೆ. ಅವರು ಹೇಳಿದ ಮಾತುಗಳಿಂದ ನಾನು ಇಂದು ನಾಲ್ಕು ಭಾಷೆಗಳಲ್ಲಿ ನಟಿಸುತ್ತಿದ್ದೇನೆ, ಈಗಲೂ ನಾನು ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ, ಪುನೀತ್ ಸರ್ ನೀವು ಸದಾ ಬೆಸ್ಟ್ ವ್ಯಕ್ತಿ” ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಇದನ್ನೂ ಓದಿ:ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಬಗ್ಗೆ ವರಸೆ ಬದಲಿಸಿದ ರಶ್ಮಿಕಾ ಮಂದಣ್ಣ

ಅದೇ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆಯೂ ಮಾತನಾಡಿರುವ ರಶ್ಮಿಕಾ ಮಂದಣ್ಣ, ”ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು. ಕಿರಿಕ್ ಪಾರ್ಟಿ ಹಾಗೂ ಅಂಜನಿಪುತ್ರ ಸಿನಿಮಾದ ಪೂರ್ಣ ಜರ್ನಿ ನನಗೆ ಇಂದಿಗೂ ನೆನಪಿದೆ. ಈ ವರೆಗೆ ನಾನು ಅತ್ಯದ್ಭುತವಾದ ತಂಡಗಳೊಟ್ಟಿಗೆ ಕೆಲಸ ಮಾಡಿದ್ದೇನೆ. ರಿಷಬ್ ಹಾಗೂ ರಕ್ಷಿತ್ ಸಾನ್ವಿ ಪಾತ್ರ ಬರೆದರು, ನನಗೆ ಸಾನ್ವಿಯೊಟ್ಟಿಗೆ ಪರಿಚಯ ಮಾಡಿಸಿದರು, ನನ್ನನ್ನು ಅದ್ಭುತವಾಗಿ ಪ್ರಪಂಚಕ್ಕೆ ತೋರಿಸಿದರು. ನಾನು ನಿಜಕ್ಕೂ ಆಭಾರಿಯಾಗಿದ್ದೇನೆ” ಎಂದಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಆ ಸಿನಿಮಾ ಹಿಟ್ ಆದ ಕೂಡಲೇ ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಜೊತೆಗೆ ನಟಿಸಿದರು. ಆಗಲೇ ಅವರಿಗೆ ತೆಲುಗಿನ ಛಲೋ ಸಿನಿಮಾದ ಅವಕಾಶವೂ ದೊರಕಿತು. ಆ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಕೊಂಡ ರಶ್ಮಿಕಾ, ಪೂರ್ಣ ಪ್ರಮಾಣದಲ್ಲಿ ತೆಲುಗು ಚಿತ್ರರಂಗದಲ್ಲಿಯೇ ತೊಡಗಿಕೊಂಡರು. ಅಂಜನಿಪುತ್ರ ಸಿನಿಮಾದ ಬಳಿಕ ಕೇವಲ ಮೂರು ಕನ್ನಡ ಸಿನಿಮಾಗಳಲ್ಲಿ ಮಾತ್ರವೇ ರಶ್ಮಿಕಾ ನಟಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು