ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಬಗ್ಗೆ ವರಸೆ ಬದಲಿಸಿದ ರಶ್ಮಿಕಾ ಮಂದಣ್ಣ

Rashmika Mandanna: ಈ ಹಿಂದಿನ ಸಂದರ್ಶನಗಳಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಬಗ್ಗೆ ಲಘುವಾಗಿ ಮಾತನಾಡಿ ಟೀಕೆಗೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ತಮ್ಮ ತಪ್ಪು ತಿದ್ದಿಕೊಂಡಂತಿದೆ.

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಬಗ್ಗೆ ವರಸೆ ಬದಲಿಸಿದ ರಶ್ಮಿಕಾ ಮಂದಣ್ಣ
ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ-ರಶ್ಮಿಕಾ ಮಂದಣ್ಣ
Follow us
ಮಂಜುನಾಥ ಸಿ.
|

Updated on: May 30, 2023 | 8:02 PM

ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾದಿಂದ ನಟನಾ ವೃತ್ತಿ ಆರಂಭಿಸಿದ ರಶ್ಮಿಕಾ ಮಂದಣ್ಣ (Rashmika Mandanna) ಈಗ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಹಳ ಬ್ಯುಸಿ ನಟಿ. ಹಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ರಶ್ಮಿಕಾಗೆ ಟ್ರೋಲ್ ಕಾಟ ತುಸು ಹೆಚ್ಚೇ ಇದೆ. ತಮ್ಮ ಹೇಳಿಕೆಗಳಿಂದ, ವರ್ತನೆಗಳಿಂದ ಟೀಕೆಗೆ ಗುರಿಯಾಗುತ್ತಲೇ ಇರುತ್ತಾರೆ. ಅದರಲ್ಲಿಯೂ ಕನ್ನಡಿಗರಿಂದ ತುಸು ಹೆಚ್ಚಾಗಿಯೇ ಟೀಕೆಗೆ, ನಿಂದನೆಗೆ ಈ ನಟಿ ಒಳಗಾಗಿದ್ದಾರೆ. ಅದಕ್ಕೆ ಹಲವು ಕಾರಣಗಳಿವೆ, ಕನ್ನಡ ಸರಿಯಾಗಿ ಬರುವುದಿಲ್ಲ ಎಂದಿದ್ದು, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಯ ಬಗ್ಗೆ ಸಂದರ್ಶನಗಳಲ್ಲಿ ಲಘುವಾಗಿ ಮಾತನಾಡಿದ್ದು, ಸ್ಟಾರ್ ನಟಿಯನ್ನಾಗಿ ಮಾಡಿದ ಮೊದಲ ಸಿನಿಮಾದ ಬಗ್ಗೆ ಲಘುವಾಗಿ ಮಾತನಾಡಿದ್ದು ಸಹ ಇದಕ್ಕೆ ಕಾರಣ. ಆದರೆ ಈಗ ರಶ್ಮಿಕಾಗೆ ಬುದ್ಧಿ ಬಂದಂತಿದೆ, ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಬಗ್ಗೆ ತಮ್ಮ ವರಸೆ ಬದಲಾಯಿಸಿದ್ದಾರೆ ನಟಿ.

ಇತ್ತೀಚೆಗೆ ತೆಲುಗಿನ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ರಶ್ಮಿಕಾ ಮಂದಣ್ಣ, ತಮ್ಮ ಮೊದಲ ಸಿನಿಮಾದ ಬಗ್ಗೆ ಮಾತನಾಡಿದ್ದು, ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರುಗಳ ಬಗ್ಗೆ ಗೌರವದಿಂದ ಮಾತನಾಡಿದ್ದಾರೆ. ”ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ನನಗೆ ಚಿತ್ರರಂಗದ ದಾರಿ ತೋರಿಸಿದರು. ನಾನು ನಟಿಯಾಗಬಲ್ಲೆ ಎಂಬುದು ಗೊತ್ತಿಲ್ಲದ ಸಮಯದಲ್ಲಿ ಸಿನಿಮಾ ಅವಕಾಶ ಕೊಟ್ಟಿದ್ದು ಬಹಳ ದೊಡ್ಡ ವಿಷಯ ಅವರು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟರು” ಎಂದಿದ್ದಾರೆ.

ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು. ಕಿರಿಕ್ ಪಾರ್ಟಿ ಹಾಗೂ ಅಂಜನಿಪುತ್ರ ಸಿನಿಮಾದ ಪೂರ್ಣ ಜರ್ನಿ ನನಗೆ ಇಂದಿಗೂ ನೆನಪಿದೆ. ಈ ವರೆಗೆ ನಾನು ಅತ್ಯದ್ಭುತವಾದ ತಂಡಗಳೊಟ್ಟಿಗೆ ಕೆಲಸ ಮಾಡಿದ್ದೇನೆ. ರಿಷಬ್ ಹಾಗೂ ರಕ್ಷಿತ್ ಸಾನ್ವಿ ಪಾತ್ರ ಬರೆದರು, ನನಗೆ ಸಾನ್ವಿಯೊಟ್ಟಿಗೆ ಪರಿಚಯ ಮಾಡಿಸಿದರು, ನನ್ನನ್ನು ಅದ್ಭುತವಾಗಿ ಪ್ರಪಂಚಕ್ಕೆ ತೋರಿಸಿದರು. ನಾನು ನಿಜಕ್ಕೂ ಆಭಾರಿಯಾಗಿದ್ದೇನೆ” ಎಂದಿದ್ದಾರೆ.

ಕೆಲ ತಿಂಗಳ ಹಿಂದಿನ ಸಂದರ್ಶನದಲ್ಲಿ, ಸಿನಿಮಾದಲ್ಲಿ ನಟಿಸುವುದಿಲ್ಲ ಎಂದರೂ ಕೆಲವರು (ರಿಷಬ್-ರಕ್ಷಿತ್) ನನ್ನ ಹಿಂದೆ ಬಿದ್ದು ಪಾತ್ರ ನೀಡಿದರು ಎಂದು ಹೇಳಿಕೊಂಡಿದ್ದ ರಶ್ಮಿಕಾ ಮಂದಣ್ಣ, ಹೊಸ ಸಂದರ್ಶನದಲ್ಲಿ, ತಮಗೆ ನಟಿಯಾಗಲು ಇಷ್ಟವಿತ್ತೆಂದು, ಅದೇ ಕಾರಣಕ್ಕೆ ಸುಮಾರು 20 ಸಿನಿಮಾಗಳಿಗೆ ಆಡಿಷನ್ ನೀಡಿದ್ದೆ, ಗೆಳೆಯರೇ-ಗೆಳತಿಯರೇ ಹೆಸರಿನ ಸಿನಿಮಾಕ್ಕೆ ಸೆಲೆಕ್ಟ್ ಆಗಿ ತರಬೇತಿ ಕಾರ್ಯಗಾರ ಸಹ ಮಾಡಿದ್ದೆ ಆದರೆ ಆ ಸಿನಿಮಾ ನಿಂತು ಹೋಯಿತು. ಅದೇ ಸಮಯಕ್ಕೆ ಕಿರಿಕ್ ಪಾರ್ಟಿ ಸಿನಿಮಾದಿಂದ ಅವಕಾಶ ಬಂತು ಎಂದು ಹೇಳಿದ್ದಾರೆ. ತಾವು ಅಮ್ಮನ ಅನುಮತಿ ಕೇಳಿ ಸಿನಿಮಾ ಒಪ್ಪಿಕೊಂಡೆ, ಮೊದಲಲ್ಲೇ ಚೆಕ್ ಒಂದನ್ನು ಚಿತ್ರತಂಡದವರು ನನಗೆ ನೀಡಿದ್ದರು ಎಂದು ಸಹ ಹೇಳಿದ್ದಾರೆ.

ಈ ಹಿಂದಿನ ಕೆಲವು ಸಂದರ್ಶನಗಳಲ್ಲಿ ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ಕಿರಿಕ್ ಪಾರ್ಟಿ ಸಿನಿಮಾದ ಬಗ್ಗೆ ಲಘುವಾಗಿ ಮಾತನಾಡಿದ್ದರು, ಇದರಿಂದಾಗಿ ಸತತ ಟ್ರೋಲ್​ಗೆ ರಶ್ಮಿಕಾ ಗುರಿಯಾಗಬೇಕಾಯ್ತು, ಸ್ವತಃ ರಿಷಬ್ ಶೆಟ್ಟಿ ತಾವು ನೀಡಿದ ಸಂದರ್ಶನವೊಂದರಲ್ಲಿ ರಶ್ಮಿಕಾರನ್ನು ಪರೋಕ್ಷವಾಗಿ ಟೀಕಿಸಿದ್ದರು. ಆದರೆ ಈಗ ತಮ್ಮ ತಪ್ಪು ತಿದ್ದಿಕೊಂಡಂತೆ ಕಾಣುತ್ತಿದೆ ರಶ್ಮಿಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ