AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ರಶ್ಮಿಕಾ ಮಂದಣ್ಣಗೆ ನೆನಪಾಯ್ತು ‘ಕಿರಿಕ್ ಪಾರ್ಟಿ’ ಸಿನಿಮಾ; ಪೋಸ್ಟರ್ ಹಂಚಿಕೊಂಡ ನಟಿ

ರಶ್ಮಿಕಾ ಮಂದಣ್ಣ ಅವರ ನಟನೆಯ ‘ಕಿರಿಕ್ ಪಾರ್ಟಿ’ ತೆರೆಗೆ ಬಂದ ನಂತರದಲ್ಲಿ ಪರಭಾಷೆಯಲ್ಲಿ ಬ್ಯುಸಿ ಆದರು. ಕೆಲವು ಕಡೆಗಳಲ್ಲಿ ಅವರು ಕನ್ನಡವನ್ನು, ಮೊದಲ ಚಿತ್ರವನ್ನು ಕಡೆಗಣಿಸಿದ್ದಿದೆ. ಇದರಿಂದ ಅನೇಕರ ಕೋಪಕ್ಕೆ ಅವರು ಕಾರಣರಾದರು.

Rashmika Mandanna: ರಶ್ಮಿಕಾ ಮಂದಣ್ಣಗೆ ನೆನಪಾಯ್ತು ‘ಕಿರಿಕ್ ಪಾರ್ಟಿ’ ಸಿನಿಮಾ; ಪೋಸ್ಟರ್ ಹಂಚಿಕೊಂಡ ನಟಿ
ರಶ್ಮಿಕಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Dec 30, 2022 | 5:51 PM

Share

2016ರ ಡಿಸೆಂಬರ್ 30ರಂದು ತೆರೆಗೆ ಬಂದ ‘ಕಿರಿಕ್ ಪಾರ್ಟಿ’ ಸಿನಿಮಾ (Kirik Party Movie) ಸೂಪರ್ ಹಿಟ್ ಆಯಿತು. ರಕ್ಷಿತ್ ಶೆಟ್ಟಿ ನಟನೆಯ, ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿತು. ಹಲವು ತಿಂಗಳು ಪ್ರದರ್ಶನ ಕಂಡ ಈ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ (Rashmika Mandanna) ಅವರು ಕರ್ನಾಟಕದ ಕ್ರಶ್ ಆದರು. ಈ ಚಿತ್ರದಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ರಶ್ಮಿಕಾಗೆ ಪರಭಾಷೆಯಿಂದ ಆಫರ್ ಬರಲು ಈ ಸಿನಿಮಾ ಪ್ರಮುಖ ಕಾರಣ ಆಗಿತ್ತು. ಈ ಸಿನಿಮಾ ತೆರೆಗೆ ಬಂದು 6 ವರ್ಷ ಕಳೆದಿದೆ. ಈ ಚಿತ್ರವನ್ನು ರಶ್ಮಿಕಾ ನೆನಪಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ನಟನೆಯ ‘ಕಿರಿಕ್ ಪಾರ್ಟಿ’ ತೆರೆಗೆ ಬಂದ ನಂತರದಲ್ಲಿ ಪರಭಾಷೆಯಲ್ಲಿ ಬ್ಯುಸಿ ಆದರು. ಕೆಲವು ಕಡೆಗಳಲ್ಲಿ ಅವರು ಕನ್ನಡವನ್ನು, ಮೊದಲ ಚಿತ್ರವನ್ನು ಕಡೆಗಣಿಸಿದ್ದಿದೆ. ಇದರಿಂದ ಅನೇಕರ ಕೋಪಕ್ಕೆ ಅವರು ಕಾರಣರಾದರು. ಈ ವಿಚಾರಕ್ಕೆ ಒಂದು ವರ್ಗದ ಜನರು ರಶ್ಮಿಕಾ ಅವರನ್ನು ದ್ವೇಷ ಮಾಡಲು ಆರಂಭಿಸಿದರು. ಈಗ ರಶ್ಮಿಕಾ ‘ಕಿರಿಕ್ ಪಾರ್ಟಿ’ ಸಿನಿಮಾ ನೆನಪಿಸಿಕೊಂಡಿದ್ದಾರೆ.

‘ಕಿರಿಕ್ ಪಾರ್ಟಿಗೆ ಆರು ವರ್ಷ. ಎಲ್ಲವೂ ಆರಂಭವಾದ ದಿನ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಜತೆಗೆ ‘ಕಿರಿಕ್ ಪಾರ್ಟಿ’ ಪೋಸ್ಟರ್ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಈ ಸ್ಟೇಟಸ್​​ನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ದಕ್ಷಿಣ ಚಿತ್ರರಂಗದ ಬಗ್ಗೆ ಕೀಳಾಗಿ ಮಾತನಾಡಿದ್ದ ರಶ್ಮಿಕಾ

ರಶ್ಮಿಕಾ ಮಂದಣ್ಣ ಅವರು ‘ಗುಡ್​ ಬೈ’ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಈ ಸಿನಿಮಾ ಫ್ಲಾಪ್ ಆಯಿತು. ಅವರ ಮುಂದಿನ ಸಿನಿಮಾ ‘ಮಿಷನ್ ಮಜ್ನು’ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಸುದ್ದಿಗೋಷ್ಠಿ ವೇಳೆ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದರು.

‘ದಕ್ಷಿಣ ಭಾರತದಲ್ಲಿ ಮಾಸ್​ ಮಸಾಲಾ, ಐಟಂ ಸಾಂಗ್​ಗಳು ಇರುತ್ತವೆ. ಆದರೆ ರೊಮ್ಯಾಂಟಿಕ್​ ಸಾಂಗ್​ ವಿಚಾರದಲ್ಲಿ ಬಾಲಿವುಡ್​ ಬೆಸ್ಟ್​. ಬಾಲಿವುಡ್​ನಲ್ಲಿ ನನ್ನ ಮೊದಲ ರೊಮ್ಯಾಂಟಿಕ್​ ಹಾಡು ಬರುತ್ತಿದೆ. ನೀವೆಲ್ಲ ಕೇಳಬೇಕು ಅಂತ ನಾನು ಸಖತ್​ ಎಗ್ಸೈಟ್​ ಆಗಿದೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:50 pm, Fri, 30 December 22