ಈ ವಯಸ್ಸಲ್ಲಿ ಮಗು ಪಡೆದರೆ ಏನಾಗುತ್ತದೆ? ತಮ್ಮ ಮುಂದಿರುವ ಸಮಸ್ಯೆಗಳನ್ನು ಹೇಳಿದ ನರೇಶ್

Pavitra Lokesh: ನರೇಶ್ ಅವರಿಗೆ ಈಗ 63 ವಯಸ್ಸು. ಪವಿತ್ರಾ ಲೋಕೇಶ್ ಅವರಿಗೆ 44 ವರ್ಷ. ಇವರ ಮಧ್ಯೆ ಸುಮಾರು 19 ವರ್ಷಗಳ ಅಂತರ ಇದೆ. ಮಗು ಹೊಂದುವ ವಿಚಾರದ ಬಗ್ಗೆ ನರೇಶ್ ಮಾತನಾಡಿದ್ದಾರೆ.

ಈ ವಯಸ್ಸಲ್ಲಿ ಮಗು ಪಡೆದರೆ ಏನಾಗುತ್ತದೆ? ತಮ್ಮ ಮುಂದಿರುವ ಸಮಸ್ಯೆಗಳನ್ನು ಹೇಳಿದ ನರೇಶ್
ಪವಿತ್ರಾ-ನರೇಶ್
Follow us
ರಾಜೇಶ್ ದುಗ್ಗುಮನೆ
|

Updated on:May 31, 2023 | 8:13 AM

ಇತ್ತೀಚೆಗೆ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದ ಜೋಡಿಗಳ ಪೈಕಿ ಪವಿತ್ರಾ ಲೋಕೇಶ್ ಹಾಗೂ ನರೇಶ್ (Naresh) ಜೋಡಿ ಕೂಡ ಒಂದು. ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರದ್ದು ಹೃದಯಗಳ ಮದುವೆ ಎಂದು ಇತ್ತೀಚೆಗೆ ನರೇಶ್ ಹೇಳಿದ್ದರು. ಮದುವೆ ಆದ ಮೇಲೆ ‘ಮಕ್ಕಳು’ ಎನ್ನುವ ಪ್ರಶ್ನೆ ಬಂದೇ ಬರುತ್ತದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ (Pavitra Lokesh) ದಂಪತಿಗೂ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಇದರ ಬಗ್ಗೆ ಮಾತನಾಡಲು ಅವರು ಮುಜುಗುರ ಪಟ್ಟುಕೊಂಡಿಲ್ಲ. ಆದರೆ, ಈಗ ಮಕ್ಕಳು ಮಾಡಿಕೊಂಡರೆ ಮುಂದಾಗುವ ಸಮಸ್ಯೆಗಳು ಏನೇನು ಎನ್ನುವ ವಿಚಾರಗಳನ್ನು ಅವರು ವಿವರಿಸಿದ್ದಾರೆ.

ನರೇಶ್ ಅವರಿಗೆ ಈಗ 63 ವಯಸ್ಸು. ಪವಿತ್ರಾ ಲೋಕೇಶ್ ಅವರಿಗೆ 44 ವರ್ಷ. ಇವರ ಮಧ್ಯೆ ಸುಮಾರು 19 ವರ್ಷಗಳ ಅಂತರ ಇದೆ. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಸಮಸ್ಯೆ ಆಗಲೇ ಇಲ್ಲ. ನರೇಶ್ ನಾಲ್ಕನೇ ಮದುವೆ ಪ್ರಶ್ನಿಸಿ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಕಾನೂನಾತ್ಮಕ ಹೋರಾಟ ಮಾಡುತ್ತಿದ್ದಾರೆ. ಇತ್ತ ನರೇಶ್​-ಪವಿತ್ರಾ ಹಾಯಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರಿಗೆ ಮಕ್ಕಳನ್ನು ಪಡೆಯಬೇಕು ಎನ್ನುವ ಯಾವುದೇ ಆಲೋಚನೆ ಇಲ್ಲ. ಈ ಬಗ್ಗೆ ನರೇಶ್ ಅವರು ಮಾತನಾಡಿದ್ದಾರೆ.

‘ವೈದ್ಯಕೀಯದ ಸಹಾಯದಿಂದ ನಾವು ಮಕ್ಕಳನ್ನು ಹೊಂದಬಹುದು. ಆದರೆ ನನಗೆ 80 ವರ್ಷವಾದಾಗ ಮಗುವಿಗೆ 20 ವರ್ಷ ಆಗುತ್ತದೆ. ಅದು ಅಗತ್ಯವೇ? ನಾವು ಗಂಡ- ಹೆಂಡತಿಯಾಗಿ ಆರಾಮಾಗಿ ಇದ್ದೇವೆ. ಈಗಾಗಲೇ ನಾನು 3 ಮಕ್ಕಳನ್ನು ಹೊಂದಿದ್ದೇನೆ ಮತ್ತು ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ’ ಎಂದು ನರೇಶ್ ಉತ್ತರಿಸಿದರು.

ಇದನ್ನೂ ಓದಿ: ಪವಿತ್ರಾ ಲೋಕೇಶ್ ಜೊತೆಗಿನ ಲಿಪ್​ಲಾಕ್ ಬಗ್ಗೆ ವಿವರಣೆ ನೀಡಿದ ನರೇಶ್: ಆ ದೃಶ್ಯದ ಹಿನ್ನೆಲೆ ಏನು?

ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ ‘ಮಳ್ಳಿ ಪೆಳ್ಳಿ’ ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾ ಕನ್ನಡದಲ್ಲಿ ‘ಮತ್ತೆ ಮದುವೆ’ ಹೆಸರಿನಲ್ಲಿ ಡಬ್ ಆಗಿದ್ದು, ಈ ವಾರ ರಿಲೀಸ್ ಆಗಲಿದೆ. ತೆಲುಗು ರಾಜ್ಯದಲ್ಲಿ ಮಿಶ್ರಪ್ರತಿಕ್ರಿಯೆ ಪಡೆದಿರುವುದರಿಂದ ಈ ಸಿನಿಮಾ ಇಲ್ಲಿ ಸದ್ದು ಮಾಡುವುದು ಅನುಮಾನ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:02 am, Wed, 31 May 23

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ