ನರೇಶ್-ಪವಿತ್ರಾ ನಟನೆಯ ‘ಮಳ್ಳಿ ಪೆಳ್ಳಿ’ ಸಿನಿಮಾ ಹೇಗಿದೆ? ನಿಜ ಜೀವನದ ಕತೆಯಾ?

Naresh-Pavitra Lokesh: ನರೇಶ್-ಪವಿತ್ರಾ ಲೋಕೇಶ್ ನಟಿಸಿರುವ ಮಳ್ಳಿ ಪೆಳ್ಳಿ ಸಿನಿಮಾ ಇಂದು (ಮೇ 26) ಬಿಡುಗಡೆ ಆಗಿದ್ದು, ಸಿನಿಮಾ ಹೇಗಿದೆ? ಸಿನಿಮಾದಲ್ಲಿ ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್, ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿಯ ಪಾತ್ರವಿದೆಯೇ?

ನರೇಶ್-ಪವಿತ್ರಾ ನಟನೆಯ 'ಮಳ್ಳಿ ಪೆಳ್ಳಿ' ಸಿನಿಮಾ ಹೇಗಿದೆ? ನಿಜ ಜೀವನದ ಕತೆಯಾ?
ಮಳ್ಳಿ ಪೆಳ್ಳಿ
Follow us
ಮಂಜುನಾಥ ಸಿ.
|

Updated on: May 26, 2023 | 10:18 PM

ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ನಟನೆಯ ‘ಮಳ್ಳಿ ಪೆಳ್ಳಿ’ ಸಿನಿಮಾ ಇಂದು (ಮೇ 26) ತೆಲುಗಿನಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾ ಹಲವು ಕಾರಣಕ್ಕೆ ಕುತೂಹಲ ಕೆರಳಿಸಿತ್ತು. ನರೇಶ್ ಹಾಗೂ ಪವಿತ್ರಾರ ಸಂಬಂಧದ ಕುರಿತ ವಿವಾದದ ಕುರಿತು ಕಳೆದ ವರ್ಷ ನಡೆದ ಘಟನೆಗಳನ್ನೇ ಆಧರಿಸಿ ಈ ಸಿನಿಮಾ ಮಾಡಲಾಗಿದೆ ಎನ್ನಲಾಗಿತ್ತು. ಸಿನಿಮಾದ ಟ್ರೈಲರ್​ನಲ್ಲಿ ಸಹ ಇದಕ್ಕೆ ಸಾಕಷ್ಟು ಸಾಕ್ಷ್ಯಗಳಿದ್ದವು. ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ ತಮ್ಮ ಹಾಗೂ ಪವಿತ್ರಾರ ವಿರುದ್ಧ ಮಾಡಿದ್ದ ಆರೋಪಗಳಿಗೆ ನರೇಶ್ ಮಳ್ಳಿ ಪೆಳ್ಳಿ ಸಿನಿಮಾ ಮೂಲಕ ಉತ್ತರ ನೀಡುತ್ತಿದ್ದಾರೆ ಎಂದೆನ್ನಲಾಗಿತ್ತು. ಇಂದು ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಳ್ಳಿ ಪೆಳ್ಳಿ ಸಿನಿಮಾ ನೋಡಿದ ಅನೇಕರು ಸಿನಿಮಾ ಸಾಧಾರಣವಾಗಿದೆ ಎಂದಿದ್ದಾರೆ. ಸಿನಿಮಾದಲ್ಲಿನ ಹಾಸ್ಯ ಚೆನ್ನಾಗಿದೆಯೆಂದು ಆದರೆ ಸಿನಿಮಾ ಗಂಭೀರವಾಗಿ ಸಂದೇಶ ನೀಡಲು ಯತ್ನಿಸುವ ಸನ್ನಿವೇಶಗಳು ಬಹಳ ಬೋರಿಂಗ್ ಆಗಿದೆಯೆಂದು ಹೇಳಿದ್ದಾರೆ. ಅಲ್ಲದೆ ಹಲೆವೆಡೆ ಹಾಸ್ಯಕ್ಕಾಗಿ ದ್ವಂದ್ವಾರ್ಥ ಸಂಭಾಷಣೆಯನ್ನು ಬಳಸಿರುವ ಬಗ್ಗೆ ಕೆಲವರು ಆಕ್ಷೇಪವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಸಿನಿಮಾ ಪ್ರೇಕ್ಷಕರು ಕೆಲವರು ಸಿನಿಮಾ ಮಹಾಬೋರು ಎಂದಿದ್ದರೆ, ತುಸು ಗಂಭೀರ ಸಿನಿಮಾ ವೀಕ್ಷಕರು ಸಿನಿಮಾ ಅಂದುಕೊಂಡಷ್ಟು ಕೆಟ್ಟದಾಗಿಲ್ಲ, ಬದಲಿಗೆ ಹಾಸ್ಯದ ಕಾರಣಕ್ಕೆ ಆರಾಮವಾಗಿ ನೋಡಿಸಿಕೊಳ್ಳುತ್ತದೆ ಎಂದಿದ್ದಾರೆ.

ಹಲವರ ಊಹೆಯಂತೆ ಮಳ್ಳಿ-ಪೆಳ್ಳಿ ಸಿನಿಮಾ ನರೇಶ್ ಹಾಗೂ ಪವಿತ್ರಾ ಲೋಕೇಶ್​ರ ಜೀವನದ ಕುರಿತಾದದ್ದೇ ಆಗಿದ್ದು, ತಮ್ಮ ಬಗ್ಗೆ ತಾವು ಸ್ಪಷ್ಟನೆ ನೀಡಲೆಂದು, ನಾವು ತಪ್ಪಿತಸ್ಥರಲ್ಲ ಎಂದು ತೋರಿಸಲೆಂದೇ ಈ ಸಿನಿಮಾ ತೆಗೆದಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ನೀಡಿರುವ ಕೆಲವರು, ನರೇಶ್ ಹಾಗೂ ಪವಿತ್ರಾ ತಮ್ಮ ವಿರೋಧಿ ವ್ಯಕ್ತಿಗಳನ್ನು ಅತ್ಯಂತ ಕೆಟ್ಟದಾಗಿ ಮಳ್ಳಿ ಪೆಳ್ಳಿ ಸಿನಿಮಾದಲ್ಲಿ ಚಿತ್ರೀಕರಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನರೇಶ್ ಹಾಗೂ ಪವಿತ್ರಾ ಇಬ್ಬರೂ ಏಕೆ ತಮ್ಮ ಈ ಹಿಂದಿನ ಸಂಗಾತಿಗಳನ್ನು ತ್ಯಜಿಸಿ ಒಟ್ಟಿಗೆ ಸೇರಿದರು ಎಂಬ ಸಿನಿಮಾದಲ್ಲಿ ತೋರಿಸಲಾಗಿದ್ದು, ತಮ್ಮ ಪರ ಸಹಾನುಭೂತಿ ವ್ಯಕ್ತವಾಗುವಂತೆ ಅದೇ ಸಮಯದಲ್ಲಿ ತಮ್ಮ ಮಾಜಿ ಸಂಗಾತಿಗಳ ಬಗ್ಗೆ ದ್ವೇಷ ಹುಟ್ಟುವಂತೆ ಪಾತ್ರಗಳನ್ನು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ ಎಂದು ಸಿನಿಮಾ ನೋಡಿದವರು ವಿಮರ್ಶಿಸಿದ್ದಾರೆ. ಪವಿತ್ರಾ ಲೋಕೇಶ್ ಪತಿಯನ್ನು ಮಹಾನ್ ಜಾತಿವಾದಿಯೆಂದು, ತನ್ನ ಜಾತಿಯೇ ದೊಡ್ಡದೆಂಬ ಅಹಂವುಳ್ಳ, ಮಹಿಳೆಯರ ಬಗ್ಗೆ ನಿಕೃಷ್ಟ ಭಾವವುಳ್ಳ ವ್ಯಕ್ತಿಯನ್ನಾಗಿ ಚಿತ್ರಿಸಲಾಗಿದೆಯಂತೆ. ಆದರೆ ಈ ಪಾತ್ರ ಪವಿತ್ರಾರ ಮಾಜಿ ಪತಿ ಸುಚೇಂದ್ರ ಪ್ರಸಾದ್ ಅವರನ್ನು ಪ್ರತಿನಿಧಿಸುತ್ತದೆಯೇ ಅಥವಾ ಪವಿತ್ರಾರ ಮೊದಲ ಪತಿಯನ್ನು ಗಮನದಲ್ಲಿಟ್ಟುಕೊಂಡು ಪಾತ್ರವನ್ನು ಚಿತ್ರಿಸಲಾಗಿದೆಯೇ ಎಂಬುದು ಸ್ಪಷ್ಟವಿಲ್ಲ.

ಇದನ್ನೂ ಓದಿ:ದುಷ್ಟಶಕ್ತಿಗಳಿಂದ ನನ್ನನ್ನು ಕಾಪಾಡಿ ಹೊಸ ಜೀವನ ಕೊಟ್ಟ ಮಹಾಪುರುಷ ನರೇಶ್: ಪವಿತ್ರಾ ಲೋಕೇಶ್ ಬಣ್ಣನೆ

ಅಂತೆಯೇ ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿಯನ್ನಂತೂ ತೀರ ರಾಕ್ಷಸಿಯಂತೆ ಸಿನಿಮಾದಲ್ಲಿ ಚಿತ್ರಿಸಲಾಗಿದ್ದು, ಆಕೆಗೆ ಬೇರೊಬ್ಬರೊಟ್ಟಿಗೆ ಅಕ್ರಮ ಸಂಬಂಧ ಇದೆಯೆಂದು, ಸಿಗರೇಟು ಸೇದುತ್ತಾಳೆಂದು, ನರೇಶ್​ರ ತಾಯಿಗೆ ಸದಾ ಅವಮಾನಿಸುತ್ತಿದ್ದರೆಂದು, ಮಹಾನ್ ಮುಂಗೋಪಿ, ಕೆಟ್ಟ ವ್ಯಕ್ತಿದವಳಂತೆ, ನರೇಶ್​ರ ಕೋಟ್ಯಂತರ ರೂಪಾಯಿ ಹಣವನ್ನು ತನ್ನ ಮೋಜಿಗಾಗಿ ಖರ್ಚು ಮಾಡಿದ್ದಾಳೆಂದು  ಚಿತ್ರಿಸಲಾಗಿದೆಯಂತೆ. ಸಿನಿಮಾದಲ್ಲಿ ರಮ್ಯಾ ರಘುಪತಿಯ ಪಾತ್ರಕ್ಕೆ ಸೌಮ್ಯಾ ಸೇತುಪತಿ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ಸೂಪರ್ ಸ್ಟಾರ್ ಕೃಷ್ಣ, ಸ್ಟಾರ್ ನಟ ಮಹೇಶ್ ಬಾಬು ಪಾತ್ರಗಳು ಇವೆಯಾದರೂ ಕೇವಲ ಒಂದೊಂದು ದೃಶ್ಯಗಳಿಗೆ ಮಾತ್ರವೇ ಅವು ಸೀಮಿತವಾಗಿವೆಯಂತೆ. ಒಟ್ಟಾರೆಯಾಗಿ ಸಿನಿಮಾದಲ್ಲಿ ಹಾಸ್ಯ ಚೆನ್ನಾಗಿದೆ ಆದರೆ ಉಳಿದ ಅಂಶಗಳು ಚೆನ್ನಾಗಿಲ್ಲವೆಂದೇ ಬಹುತೇಕ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್