AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಷ್ಟಶಕ್ತಿಗಳಿಂದ ನನ್ನನ್ನು ಕಾಪಾಡಿ ಹೊಸ ಜೀವನ ಕೊಟ್ಟ ಮಹಾಪುರುಷ ನರೇಶ್: ಪವಿತ್ರಾ ಲೋಕೇಶ್ ಬಣ್ಣನೆ

Naresh-Pavithra: ಕೆಲ ದುಷ್ಟ ಶಕ್ತಿಗಳು ನನ್ನ ಜೀವನವನ್ನೇ ಒಡೆದು ಹಾಕಿದ್ದರು, ಆ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತು ಆ ದುಷ್ಟಶಕ್ತಿಗಳಿಂದ ಕಾಪಾಡಿ ಹೊಸ ಜೀವನ ಕೊಟ್ಟಿದ್ದು ನರೇಶ್ ಎಂದು ನಟಿ ಪವಿತ್ರಾ ಲೋಕೇಶ್ ಹೇಳಿದ್ದಾರೆ. ನರೇಶ್ ಬಗ್ಗೆ ಇನ್ನು ಏನೇನು ಹೇಳಿದ್ದಾರೆ ಪವಿತ್ರಾ ತಿಳಿಯಲು ಓದಿ...

ದುಷ್ಟಶಕ್ತಿಗಳಿಂದ ನನ್ನನ್ನು ಕಾಪಾಡಿ ಹೊಸ ಜೀವನ ಕೊಟ್ಟ ಮಹಾಪುರುಷ ನರೇಶ್: ಪವಿತ್ರಾ ಲೋಕೇಶ್ ಬಣ್ಣನೆ
ನರೇಶ್-ಪವಿತ್ರಾ
ಮಂಜುನಾಥ ಸಿ.
|

Updated on: May 22, 2023 | 3:51 PM

Share

ನಟಿ ಪವಿತ್ರಾ ಲೋಕೇಶ್ (Pavithra Lokesh) ಹಾಗೂ ತೆಲುಗು ನಟ ನರೇಶ್ (Naresh) ಸಂಬಂಧದ ಬಗ್ಗೆ ಕಳೆದ ವರ್ಷದಿಂದಲೂ ಚರ್ಚೆ ಜೋರಾಗಿ ನಡೆಯುತ್ತಿದೆ. ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ಬಂದು ನರೇಶ್ ತಮಗೆ ಅನ್ಯಾಯ ಮಾಡಿದ್ದಾರೆ, ಪವಿತ್ರಾ ನನ್ನ ಮನೆ ಒಡೆದಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ಆ ಸಂದರ್ಭದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್​ ಸಂಬಂಧದ ಬಗ್ಗೆ ವಿವಾದ ಎದ್ದಿತ್ತು. ಈಗ ಅದೇ ವಿಷಯ ಮುಖ್ಯವಾಗಿರಿಸಿಕೊಂಡು ನರೇಶ್ ಹಾಗೂ ಪವಿತ್ರಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಮಳ್ಳಿ ಪೆಳ್ಳಿ (ಮತ್ತೆ ಮದುವೆ) (Malli Pelli) ಹೆಸರಿನ ಸಿನಿಮಾ ನಿರ್ಮಿಸಲಾಗಿದೆ. ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆಯಷ್ಟೆ ನಡೆದಿದ್ದು, ಕಾರ್ಯಕ್ರದಲ್ಲಿ ಪವಿತ್ರಾ, ನರೇಶ್​ ಬಗ್ಗೆ ಬಹುವಾಗಿ ಹೊಗಳಿ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡುವ ಮುನ್ನ ಪಕ್ಕದಲ್ಲಿಯೇ ಇದ್ದ ನರೇಶ್​ರ ಆಶೀರ್ವಾದ ಹಾಗೂ ವೇದಿಕೆ ಮೇಲಿದ್ದ ಕೆಲವು ಹಿರಿಯರ ಆಶೀರ್ವಾದ ಪಡೆದ ನಟಿ ಪವಿತ್ರಾ ಲೋಕೇಶ್, ನಾನು ಹೊಸ ಜೀವನ ಆರಂಭಿಸುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು. ದೇವರು ಎಲ್ಲರಿಗೂ ಹೊಸ ಜೀವನ ನೀಡುವುದಿಲ್ಲ, ಯಾರ ಜೀವನ ಹೇಗಿರುತ್ತದೆಯೋ ಹಾಗೆಯೇ ಮುಂದುವರೆಯುತ್ತದೆ, ಆದರೆ ನನಗೆ ಹೊಸ ಜೀವನ ಪ್ರಾರಂಭಿಸುವ ಅವಕಾಶವನ್ನು ದೇವರು ಕಲ್ಪಿಸಿದ್ದಾನೆ” ಎಂದಿದ್ದಾರೆ.

”ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಕನಸುಗಳು ಇರುತ್ತವೆ. ನನ್ನ ಬದುಕು ಹೀಗಿರಬೇಕು, ಒಂದು ಮನೆ ಇರಬೇಕು, ಕಾರಿರಬೇಕು, ನನ್ನದೇ ಆದ ಹೆಸರು ಇರಬೇಕು ಎಂದೆಲ್ಲ. ಅಂತೆಯೇ ನನಗೂ ಇತ್ತು. ಆದರೆ ನನ್ನ ತಂದೆ ನಾನು ಚಿಕ್ಕವಳಿದ್ದಾಗಲೇ ತೀರಿಕೊಂಡರು. ಆ ಕನಸುಗಳನ್ನು ನನಸು ಮಾಡಿಕೊಳ್ಳಲೆಂದು ನಾನು ಚಿತ್ರರಂಗಕ್ಕೆ ಬಂದೆ. ಕನಸುಗಳನ್ನು ಯಾರೊಬ್ಬರ ಸಹಾಯವಿಲ್ಲದೆ ನಾನೊಬ್ಬಳೇ ನನಸು ಮಾಡಿಕೊಂಡೆ, ಕಾರು, ಮನೆ ಎಲ್ಲವನ್ನೂ ಕಟ್ಟಿಕೊಂಡೆ ನನಗಾಗಿ ಬದುಕು ಸಹ ಕಟ್ಟಿಕೊಂಡೆ. ನಾನು ಕಟ್ಟಿಕೊಂಡ ಬದುಕನ್ನು ಒಡೆಯುವ ಅಧಿಕಾರವನ್ನು ನಾನು ಯಾರಿಗೂ ಕೊಟ್ಟಿರಲಿಲ್ಲ” ಎಂದಿದ್ದಾರೆ ಪವಿತ್ರಾ ಲೋಕೇಶ್.

ಇದನ್ನೂ ಓದಿ:ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದೀರಾ? ನರೇಶ್ ಕೊಟ್ಟರು ಉತ್ತರ

”ಆದರೆ ಕೆಲವು ದುಷ್ಟ ಶಕ್ತಿಗಳು ನಾನು ಕಟ್ಟಿದ ನನ್ನ ಪ್ರಪಂಚವನ್ನು ನನ್ನ ಅನುಮತಿ ಇಲ್ಲದೆ ಒಡೆದರು. ಅದರಿಂದ ನಾನು ಸಹ ಜೀವನದಲ್ಲಿ ಮುರಿದು ಹೋದೆ. ಬಹಳ ಕೆಟ್ಟದಾಗಿ ನಾನು ಜೀವನದಲ್ಲಿ ಸೋತುಹೋದೆ. ಅದನ್ನೀಗ ನೆನಪು ಮಾಡಿಕೊಂಡರೆ ಮತ್ತೆ ನನ್ನನ್ನು ದುಃಖ ಆವರಿಸಿಕೊಳ್ಳುತ್ತದೆ. ಆದರೆ ನನಗೆ ಬೆಂಬಲವಾಗಿ ಒಂದು ಶಕ್ತಿ ನಿಂತಿತು ಆ ಶಕ್ತಿಯ ಹೆಸರೇ ನರೇಶ್. ಆ ದುಷ್ಟಶಕ್ತಿಗಳಿಗೆ ನರೇಶ್​ರ ಶಕ್ತಿ ಏನು, ಎಷ್ಟು ಎಂಬುದು ಗೊತ್ತಿಲ್ಲ. ಆಗ ಅವರು ನನ್ನ ಜೀವವನ್ನು ಮುರಿದಿದ್ದಕ್ಕೆ ಈಗ ನನಗೆ ಸಂತೋಶವೇ ಆಗಿದೆ. ಏಕೆಂದರೆ ಈಗ ನಾನು ಹೊಸ ಜೀವನ ಶುರು ಮಾಡಿದ್ದೇನೆ. ನನ್ನದ್ದೆಲ್ಲವನ್ನೂ ಮುರಿದು ಹಾಕಿದರೂ ದೇವರು ನನಗಾಗಿ ಹೊಸ ನೆಲವನ್ನು ಕೊಟ್ಟಿದ್ದಾನೆ, ಮತ್ತೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾನೆ” ಎಂದು ಭಾವುಕವಾಗಿ ನುಡಿದರು ಪವಿತ್ರಾ.

ನರೇಶ್​ರ ತಾಯಿ ವಿಜಯ್ ನಿರ್ಮಲಾ ಅವರಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ನನ್ನಂಥಹಾ ಕಷ್ಟದಲ್ಲಿರುವ ಮಹಿಳೆಯನ್ನು ಕಾಪಾಡುವ ಸಂಸ್ಕಾರ, ನನಗೆ ಹೆಚ್ಚು ಹೆಚ್ಚು ಪ್ರೀತಿ ಕೊಡುವ ಸಂಸ್ಕಾರ ನೀಡಿದ್ದಾರೆ. ನಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ನಾವು ಪ್ರಾರಂಭಿಸಿದ್ದೇವೆ. ವಿಜಯ್ ಕೃಷ್ಣ ಮೂವೀಸ್ ಅನ್ನು ಮತ್ತೆ ಪ್ರಾರಂಭ ಮಾಡಿದ್ದೇವೆ, ಆ ನಿರ್ಮಾಣ ಸಂಸ್ಥೆಯಿಂದ ಹಲವು ಒಳ್ಳೆಯ ಸಿನಿಮಾಗಳು ಬರಲಿವೆ. ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ ನಾವು ಹೊಸದನ್ನು ಮಾಡಬಹುದು ಎಂದು ಆಶಾ ಭಾವ ವ್ಯಕ್ತಪಡಿಸಿದ್ದಾರೆ ಪವಿತ್ರಾ ಲೋಕೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್