200 ಕೋಟಿ ರೂ. ಕಲೆಕ್ಷನ್ ಮಾಡಿದ ‘ದಿ ಕೇರಳ ಸ್ಟೋರಿ’; ಚಿತ್ರದ ಬಜೆಟ್​ ಎಷ್ಟಿತ್ತು, ಲಾಭ ಎಷ್ಟು?

ರಿಲೀಸ್ ಆದ ವೀಕೆಂಡ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡೋದು ಸಹಜ. ‘ದಿ ಕೇರಳ ಸ್ಟೋರಿ’ ಮೂರನೇ ಭಾನುವಾರವೂ ಅಬ್ಬರಿಸಿದೆ. ಮೇ 21ರಂದು ಈ ಸಿನಿಮಾ 11.50 ಕೋಟಿ ರೂಪಾಯಿ ಬಾಚಿಕೊಂಡಿದೆ.

200 ಕೋಟಿ ರೂ. ಕಲೆಕ್ಷನ್ ಮಾಡಿದ ‘ದಿ ಕೇರಳ ಸ್ಟೋರಿ’; ಚಿತ್ರದ ಬಜೆಟ್​ ಎಷ್ಟಿತ್ತು, ಲಾಭ ಎಷ್ಟು?
ಅದಾ ಶರ್ಮಾ
Follow us
ರಾಜೇಶ್ ದುಗ್ಗುಮನೆ
|

Updated on: May 22, 2023 | 1:59 PM

‘ದಿ ಕೇರಳ ಸ್ಟೋರಿ’ ಸಿನಿಮಾದ (The Kerala Story Movie) ಅಬ್ಬರದ ಕಲೆಕ್ಷನ್ ಮುಂದುವರಿದಿದೆ. ರಿಲೀಸ್ ಆಗಿ 20 ದಿನ ಕಳೆಯುವುದರೊಳಗೆ ಈ ಸಿನಿಮಾ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಡಿಮೆ ಬಜೆಟ್​​ನಲ್ಲಿ ಸಿದ್ಧವಾದ ಈ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ನಿರ್ಮಾಪಕರಿಗೆ ಖುಷಿ ನೀಡಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು ಕಲೆಕ್ಷನ್ ಹೆಚ್ಚುತ್ತಲೇ ಇದೆ. ವಾರಾಂತ್ಯ ಮಾತ್ರವಲ್ಲದೆ ವಾರದ ದಿನಗಳಲ್ಲೂ ಸಿನಿಮಾ ಅಬ್ಬರಿಸುತ್ತಿದೆ.

ರಿಲೀಸ್ ಆದ ವೀಕೆಂಡ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡೋದು ಸಹಜ. ‘ದಿ ಕೇರಳ ಸ್ಟೋರಿ’ ಮೂರನೇ ಭಾನುವಾರವೂ ಅಬ್ಬರಿಸಿದೆ. ಮೇ 21ರಂದು ಈ ಸಿನಿಮಾ 11.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಇನ್ನೂ ಕೆಲ ದಿನಗಳ ಕಾಲ ಸಿನಿಮಾ ಅಬ್ಬರಿಸುವ ಸೂಚನೆ ಸಿಕ್ಕಿದೆ.

ಸಿನಿಮಾದ ಒಟ್ಟೂ ಗಳಿಕೆ 198.97 ಕೋಟಿ ರೂಪಾಯಿ ಆಗಿದೆ. ಇಂದಿನ ಗಳಿಕೆಯೂ ಸೇರಿದರೆ ಈ ಚಿತ್ರದ ಒಟ್ಟಾರೆ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಲಿದೆ. ಕೇವಲ 20 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರುವುದರಿಂದ ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾಗೆ ಒಳ್ಳೆಯ ಲಾಭ ಆಗಿದೆ. ಇಷ್ಟೇ ಅಲ್ಲದೆ ಟಿವಿ ಹಾಗೂ ಒಟಿಟಿ ಹಕ್ಕಿನಿಂದಲೂ ನಿರ್ಮಾಪಕರಿಗೆ ಸಾಕಷ್ಟು ಹಣ ಸಿಕ್ಕಿದೆ.

‘ದಿ ಕೇರಳ ಸ್ಟೋರಿ’ ಚಿತ್ರದ ಕಲೆಕ್ಷನ್​ ರಿಪೋರ್ಟ್​:

1ನೇ ದಿನ: 8.03 ಕೋಟಿ ರೂ.

2ನೇ ದಿನ: 11.22 ಕೋಟಿ ರೂ.

3ನೇ ದಿನ: 16.40 ಕೋಟಿ ರೂ.

4ನೇ ದಿನ: 10.07 ಕೋಟಿ ರೂ.

5ನೇ ದಿನ: 11.14 ಕೋಟಿ ರೂ.

6ನೇ ದಿನ: 12 ಕೋಟಿ ರೂ.

7ನೇ ದಿನ: 12.50 ಕೋಟಿ ರೂ.

8ನೇ ದಿನ: 12.23 ಕೋಟಿ ರೂ.

9ನೇ ದಿನ: 19.50 ಕೋಟಿ ರೂ.

10ನೇ ದಿನ: 23.75 ಕೋಟಿ ರೂ.

11ನೇ ದಿನ: 10.30 ಕೋಟಿ ರೂ.

12ನೇ ದಿನ: 9.65 ಕೋಟಿ ರೂ.

13ನೇ ದಿನ: 8.03 ಕೋಟಿ ರೂ.

14ನೇ ದಿನ: 7 ಕೋಟಿ ರೂ.

15ನೇ ದಿನ: 6.60 ಕೋಟಿ ರೂ.

16ನೇ ದಿನ: 9.15 ಕೋಟಿ ರೂ.

17ನೇ ದಿನ: 11.50 ಕೋಟಿ ರೂ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!