AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anupam Kher: ‘ವಿಜಯ್ 69’ ಶೂಟಿಂಗ್​ ವೇಳೆ ಅವಘಡ; ಖ್ಯಾತ ನಟ ಅನುಪಮ್ ಖೇರ್​​ಗೆ ಗಾಯ

ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಯ ‘ವೈಆರ್​ಎಫ್​ ಎಂಟರ್​ಟೇನ್ಮೆಂಟ್​’ ಒಟಿಟಿ ಮೂಲಕ ‘ವಿಜಯ್​ 69’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿ ಮೂಲಕ ಸ್ಟ್ರೀಮಿಂಗ್​ ಆಗಲಿದೆ.

Anupam Kher: ‘ವಿಜಯ್ 69’ ಶೂಟಿಂಗ್​ ವೇಳೆ ಅವಘಡ; ಖ್ಯಾತ ನಟ ಅನುಪಮ್ ಖೇರ್​​ಗೆ ಗಾಯ
ಅನುಪಮ್ ಖೇರ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:May 23, 2023 | 8:58 AM

Share

ನಟ ಅನುಪಮ್ ಖೇರ್​ (Anupam Kher) ಅವರಿಗೆ ಈಗ 68 ವರ್ಷ ವಯಸ್ಸು. ಈ ವಯಸ್ಸಲ್ಲೂ ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈಗ ಅವರು ‘ವಿಜಯ್ 69’  (Vijay 69) ಸಿನಿಮಾ ಶೂಟಿಂಗ್ ವೇಳೆ ಅವರ ಭುಜಕ್ಕೆ ಪೆಟ್ಟಾಗಿದೆ. ಇದು ಅವರ ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿದೆ. ಈ ಬಗ್ಗೆ ಅನುಪಮ್ ಖೇರ್ ಸ್ಪಷ್ಟನೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಅವರು ಬೇಗ ಗುಣಮುಖರಾಗಿ ಸಿನಿಮಾ ಕೆಲಸಕ್ಕೆ ಮರಳಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

‘ಸ್ಪೋರ್ಟ್ಸ್ ಸಿನಿಮಾ ಮಾಡುತ್ತೀರಿ ಮತ್ತು ನೀವು ಗಾಯಗೊಂಡಿಲ್ಲ ಅಂದರೆ ಅದು ಹೇಗೆ ಸಾಧ್ಯ? ‘ವಿಜಯ್ 69’ರ ಶೂಟಿಂಗ್ ಸಮಯದಲ್ಲಿ ಭುಜಕ್ಕೆ ತೀವ್ರವಾಗಿ ಗಾಯವಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಅವರು ಗಾಯಗೊಂಡಿರುವುದರಿಂದ ಒಂದು ಬ್ರೇಕ್ ಪಡೆದಿದ್ದಾರೆ. ಶೀಘ್ರವೇ ಅವರು ಸಿನಿಮಾ ಕೆಲಸಕ್ಕೆ ಮರಳಲಿದ್ದಾರೆ. ಅವರು ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಯ ‘ವೈಆರ್​ಎಫ್​ ಎಂಟರ್​ಟೇನ್ಮೆಂಟ್​’ ಒಟಿಟಿ ಮೂಲಕ ‘ವಿಜಯ್​ 69’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿ ಮೂಲಕ ಸ್ಟ್ರೀಮಿಂಗ್​ ಆಗಲಿದೆ. ಮನೀಶ್​ ಶರ್ಮಾ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಕ್ಷಯ್​ ರಾಯ್​ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ನಿಮ್ಮದು ಚಾರ್ಮಿಂಗ್ ಸ್ಮೈಲ್​’; ಶಿವರಾಜ್​ಕುಮಾರ್ ಅವರನ್ನು ಹೊಗಳಿದ ಬಾಲಿವುಡ್ ನಟ ಅನುಪಮ್ ಖೇರ್

ಅನುಪಮ್​ ಖೇರ್​ ಅವರ ರಿಯಲ್​ ಲೈಫ್​ ವ್ಯಕ್ತಿತ್ವಕ್ಕೂ ‘ವಿಜಯ್​ 69’ ಚಿತ್ರಕ್ಕೂ ಸಾಮ್ಯತೆ ಇದೆ. ಯಾಕೆಂದರೆ, ಈ ವಯಸ್ಸಿನಲ್ಲಿ ಕೂಡ ಅನುಪಮ್​ ಖೇರ್​ ಅವರು ಹೊಸ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಹೊಸ ಕೌಶಲಗಳನ್ನು ಕಲಿಯುತ್ತಿದ್ದಾರೆ. ಅದೇ ರೀತಿಯ ಪಾತ್ರದ ಕುರಿತು ‘ವಿಜಯ್​ 69’ ಸಿನಿಮಾ ಮೂಡಿಬರಲಿದೆ. 69ನೇ ವಯಸ್ಸಿನಲ್ಲಿ ಟ್ರೈಥ್ಲಾನ್​ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ನಿರ್ಧರಿಸುವ ವ್ಯಕ್ತಿಯಾಗಿ ಅನುಪಮ್ ಖೇರ್​ ನಟಿಸಲಿದ್ದಾರೆ.

ಹಲವು ವರ್ಷಗಳಿಂದ ಅನುಪಮ್​ ಖೇರ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಅನುಪಮ್​ ಖೇರ್​ ನಟಿಸುತ್ತಿರುವ 537ನೇ ಚಿತ್ರವಾಗಿ ‘ವಿಜಯ್​ 69’ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:41 am, Tue, 23 May 23