AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಶ್ಮೀರ್ ಫೈಲ್ಸ್​​ನ ವಿರೋಧಿಸಿದವರೇ ಕೇರಳ ಸ್ಟೋರಿಯನ್ನೂ ಟೀಕಿಸುತ್ತಿದ್ದಾರೆ’; ಅನುಪಮ್ ಖೇರ್

Anupam Kher: ‘ದಿ ಕೇರಳ ಸ್ಟೋರಿ’ ಚಿತ್ರದ ಬಗ್ಗೆ, ಅದಾ ಶರ್ಮಾ ಮಾಡಿರುವ ಪಾತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಇದು ಸರಿ ಅಲ್ಲ ಎಂಬರ್ಥದಲ್ಲಿ ಅನುಪಮ್ ಖೇರ್ ಮಾತನಾಡಿದ್ದಾರೆ.

‘ಕಾಶ್ಮೀರ್ ಫೈಲ್ಸ್​​ನ ವಿರೋಧಿಸಿದವರೇ ಕೇರಳ ಸ್ಟೋರಿಯನ್ನೂ ಟೀಕಿಸುತ್ತಿದ್ದಾರೆ’; ಅನುಪಮ್ ಖೇರ್
ಅನುಪಮ್ ಖೇರ್-ಅದಾ ಶರ್ಮಾ
ರಾಜೇಶ್ ದುಗ್ಗುಮನೆ
|

Updated on: May 09, 2023 | 7:22 AM

Share

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ಚಿತ್ರವನ್ನು ಬ್ಯಾನ್ ಮಾಡುವ ಬಗ್ಗೆ ಒತ್ತಾಯಗಳು ಕೇಳಿ ಬಂದವು. ಆದರೆ, ಇದ್ಯಾವುದಕ್ಕೂ ಜಗ್ಗದೇ ಸಿನಿಮಾ 250 ಕೋಟಿ ರೂಪಾಯಿ ಗಳಿಕೆ ಮಾಡಿತು. ಈಗ ‘ದಿ ಕೇರಳ ಸ್ಟೋರಿ’ ಸಿನಿಮಾ ಕೂಡ ವಿವಾದದ ಕೇಂದ್ರಬಿಂದು ಆಗಿದೆ. ಈ ಚಿತ್ರಕ್ಕೆ ಭರ್ಜರಿ ವಿರೋಧ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಿನಿಮಾನ ಬ್ಯಾನ್ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಖ್ಯಾತ ನಟ ಅನುಪಮ್ ಖೇರ್ (Anupam Kher) ಮಾತನಾಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಕಾಶ್ಮೀರಿ ಪಂಡಿತನ ಪಾತ್ರದಲ್ಲಿ ಅನುಪಮ್ ಖೇರ್ ಗಮನ ಸೆಳೆದಿದ್ದರು. ಇಡೀ ಚಿತ್ರದಲ್ಲಿ ಅವರ ಪಾತ್ರ ಹೈಲೈಟ್ ಆಗಿತ್ತು. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ವಿರೋಧ ವ್ಯಕ್ತವಾದಾಗ ಅನುಪಮ್ ಖೇರ್ ಖಂಡಿಸಿದ್ದರು. ಇದು ಸರಿ ಅಲ್ಲ ಎಂದು ಅವರು ಹೇಳಿದ್ದರು. ಈಗ ‘ದಿ ಕೇರಳ ಸ್ಟೋರಿ’ ಚಿತ್ರದ ಬಗ್ಗೆ, ಅದಾ ಶರ್ಮಾ ಮಾಡಿರುವ ಪಾತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಇದು ಸರಿ ಅಲ್ಲ ಎಂಬರ್ಥದಲ್ಲಿ ಅನುಪಮ್ ಖೇರ್ ಮಾತನಾಡಿದ್ದಾರೆ.

‘ಈ ರೀತಿಯ ಸಿನಿಮಾಗಳನ್ನು ವಿರೋಧಿಸುವವರು ಎಲ್ಲೆಡೆ ಕಾಣುತ್ತಾರೆ. ಸಿಎಎ ಪ್ರತಿಭಟನೆ, ಶಾಹೀನ್ ಬಾಗ್ ಪ್ರತಿಭಟನೆ ಅಥವಾ ಜೆಎನ್‌ಯು ಪ್ರತಿಭಟನೆಯಲ್ಲಿ ಅವರು ಕಾಣುತ್ತಾರೆ. ಕಾಶ್ಮೀರ್​ ಫೈಲ್ಸ್ ಅನ್ನು ಟೀಕಿಸಿದ್ದು ಇದೇ ಮುಖಗಳು. ನನಗೆ ಅವರ ಉದ್ದೇಶ ಏನು ಎಂಬುದು ತಿಳಿದಿಲ್ಲ. ಅವರ ಕಡೆಗೆ ಗಮನ ಹರಿಸೋಕೆ ಇಷ್ಟ ಇಲ್ಲ’ ಎಂದಿದ್ದಾರೆ ಅನುಪಮ್ ಖೇರ್.

‘ಮತ್ತೆ ನಾನು ಹೇಳುವುದು ಅದನ್ನೇ, ಇದು ಅದೇ ಮುಖಗಳು. ನಾನು ಸಿನಿಮಾ ನೋಡಿಲ್ಲ. ಆದರೆ ಜನ ವಾಸ್ತವಕ್ಕೆ ಹತ್ತಿರವಾದ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ. ಇದು ಪ್ರೊಪೊಗಾಂಡ ಸಿನಿಮಾ ಎಂದು ಕರೆಯುವವರು ಪರಿಪೂರ್ಣ ಎನಿಸುವ ವಿಷಯದೊಂದಿಗೆ ಸಿನಿಮಾ ಮಾಡಬಹುದು. ಅದನ್ನು ಯಾರೂ ತಡೆಯಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್​; ನಿರ್ಧಾರಕ್ಕೆ ಕಾರಣ ತಿಳಿಸಿದ ಮಮತಾ ಬ್ಯಾನರ್ಜಿ

‘ದಿ ಕೇರಳ ಸ್ಟೋರಿ’ ಸಿನಿಮಾಗೆ ಸುದಿಪ್ತೋ ಸೇನ್ ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್​ಲಾಲ್ ಶಾ ಅವರು ಇದನ್ನು ನಿರ್ಮಾಣ ಮಾಡಿದ್ದಾರೆ. ಮೂರು ದಿನಕ್ಕೆ ಸಿನಿಮಾ 35 ಕೋಟಿ ಗಳಿಕೆ ಮಾಡಿದೆ. ಕೇರಳದ 32 ಸಾವಿರ ಮಹಿಳೆಯರು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ ಐಸಿಸ್ ಸೇರಿದ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಇದು ನೈಜ ಘಟನೆ ಆಧಾರಿತ ಎಂದು ತಂಡ ಹೇಳಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ