‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಸಂಕಷ್ಟ; ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇಸ್
The Kerala Story Movie: ಮೇ 5ರಂದು ‘ದಿ ಕೇರಳ ಸ್ಟೋರಿ’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಕೆಲವು ವಿವಾದಾತ್ಮಕ ಅಂಶ ಇದೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿನಿಮಾಗೆ ತಡೆ ನೀಡಿ ಎನ್ನುವ ಆಗ್ರಹ ಕೇಳಿ ಬಂದಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story) ಮೇ 5ರಂದು ರಿಲೀಸ್ ಆಗಿ ಎಲ್ಲ ಕಡೆಗಳಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ತಡೆನೀಡಬೇಕು ಎಂದು ಅನೇಕ ಶಕ್ತಿಗಳು ಪ್ರಯತ್ನಿಸುತ್ತಿವೆ. ಈ ಸಿನಿಮಾಗೆ ತಡೆನೀಡುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿತ್ತು. ಆದರೆ, ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಜೊತೆಗೆ ಹೈಕೋರ್ಟ್ಗೆ ತೆರಳುವಂತೆ ನಿರ್ದೇಶನ ನೀಡಿತ್ತು. ಅಲ್ಲಿಯೂ ಅರ್ಜಿದಾರರಿಗೆ ಹಿನ್ನಡೆ ಆಯಿತು. ಈ ಕಾರಣಕ್ಕೆ ಮತ್ತೆ ಸುಪ್ರೀಂಕೋರ್ಟ್ನಲ್ಲಿ (Supreme Court) ಈ ಬಗ್ಗೆ ಅರ್ಜಿ ಸಲ್ಲಿಕೆ ಆಗಿದೆ. ಕೇರಳ ಹೈಕೋರ್ಟ್ನ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿದೆ.
ಮೇ 5ರಂದು ‘ದಿ ಕೇರಳ ಸ್ಟೋರಿ’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಕೆಲವು ವಿವಾದಾತ್ಮಕ ಅಂಶ ಇದೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿನಿಮಾಗೆ ತಡೆ ನೀಡಿ ಎನ್ನುವ ಆಗ್ರಹ ಕೇಳಿ ಬಂದಿದೆ. ಈ ಸಿನಿಮಾ ಪ್ರದರ್ಶನ ನಿಲ್ಲಿಸಬೇಕು ಎಂದು ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿತ್ತು. ಆದರೆ, ಸಿನಿಮಾಗೆ ತಡೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿತ್ತು. ಈಗ ಇದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ‘ಕಾಶ್ಮೀರ್ ಫೈಲ್ಸ್ನ ವಿರೋಧಿಸಿದವರೇ ಕೇರಳ ಸ್ಟೋರಿಯನ್ನೂ ಟೀಕಿಸುತ್ತಿದ್ದಾರೆ’; ಅನುಪಮ್ ಖೇರ್
ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನು ಒಳಗೊಂಡ ಪೀಠ ಈ ಮೇಲ್ಮನವಿಯನ್ನು ಸ್ವೀಕರಿಸಿದೆ. ಮೇ 15ಕ್ಕೆ ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿಸಿದೆ. ಒಂದೊಮ್ಮೆ ಸುಪ್ರೀಂಕೋರ್ಟ್ ಪ್ರದರ್ಶನಕ್ಕೆ ತಡೆ ನೀಡಿದರೆ ಚಿತ್ರಕ್ಕೆ ಹಿನ್ನಡೆ ಉಂಟಾಗಲಿದೆ.
ಹೈಕೋರ್ಟ್ ಹೇಳಿದ್ದೇನು?
ಮೇ 5ರಂದು ಕೇರಳ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಸಿತ್ತು. ನ್ಯಾಯಮೂರ್ತಿ ಎನ್ ನಗರೇಶ್ ಹಾಗೂ ಸೋಫಿ ಥಾಮಸ್ ಅರ್ಜಿ ವಿಚಾರಣೆ ನಡೆಸಿದ್ದರು. ‘ನೈಜ ಘಟನೆಯಿಂದ ಪ್ರೇರಿತ ಎಂದು ಸಿನಿಮಾದಲ್ಲಿ ಉಲ್ಲೇಖ ಆಗಿದೆ. ಸೆನ್ಸಾರ್ ಮಂಡಳಿ ಕೂಡ ಸಿನಿಮಾ ನೋಡಿ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ. ನಾವು ಕೂಡ ಸಿನಿಮಾದ ಟ್ರೇಲರ್ ನೋಡಿದ್ದೇವೆ. ಈ ಸಿನಿಮಾದಲ್ಲಿ ಆಕ್ಷೇಪಾರ್ಹ ವಿಚಾರ ಇದೆ ಎಂದು ಅನಿಸಿಲ್ಲ’ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತ್ತು. ಕೇರಳದಲ್ಲಿ 32 ಸಾವಿರ ಜನರು ಮತಾಂತರಗೊಂಡಿದ್ದಾರೆ ಎಂದು ಟೀಸರ್ನಲ್ಲಿ ಹೇಳಲಾಗಿತ್ತು. ಆ ಟೀಸರ್ ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಆಗಿದೆ. ಈ ವಿಡಿಯೋನ ಕೋರ್ಟ್ಗೆ ಸಲ್ಲಿಸುವಂತೆ ನಿರ್ಮಾಪಕರಿಗೆ ಸೂಚಿಸಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ